ಕನ್ನಡಪ್ರಭ ವಾರ್ತೆ ಉಡುಪಿ
ಸಂಜೆ ಆರಂಭಗೊಂಡ ಮಹಾ ರಂಗಪೂಜೆಯಲ್ಲಿ ಕೊಲಕಾಡಿ ವಾರ್ದಿರಾಜ ಉಪಾಧ್ಯಾಯ, ದೇವಿಯ ಧ್ಯಾನ, ಆಕೆಯ ಮಹಿಮೆಯನ್ನು ಭಕ್ತಸಮೂಹದ ಮನಮುಟ್ಟುವಂತೆ ವಿವರಿಸಿ ಬಲಿ ಉತ್ಸವವನ್ನು ನೆರವೇರಿಸಿದರು.
ಬಲಿ ಉತ್ಸವದಲ್ಲಿ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ಸ್ವಾತಿ ಆಚಾರ್ಯ, ಯಕ್ಷ ಸುತ್ತನ್ನು ಉಪ್ಪೂರು ಭಾಗ್ಯಲಕ್ಷ್ಮಿ, ಚೆಂಡೆಸುತ್ತು ಬೆಲ್ಕಳೆ ಚಂಡೆ ಬಳಗದವರಿಂದ, ವಿಜಯ ದೇವಾಡಿಗ ಅವರಿಂದ ಶೃಂಗಾರವಾದ್ಯ ಸುತ್ತು ಮುರಳೀಧರ ಮುದ್ರಾಡಿ ಮತ್ತು ಬಳಗದವರಿಂದ ನಾದಸ್ವರ ವಾದನ ಸುತ್ತು ಹಾಗೂ ಪಂಚವಾದ್ಯ ಸುತ್ತು, ಬಳ್ಮಣ್ಣು ವನದುರ್ಗ ಬಳಗದಿಂದ ಪಲ್ಲಕ್ಕಿ ಸುತ್ತು ವಿಶೇಷ ಆಕರ್ಷಣೆಯಾಗಿ ಮೂಡಿಬಂತು.ನಂತರ ನಡದೆ ವಸಂತ ಪೂಜೆಯಲ್ಲಿ ಕೊಲಕಾಡಿ ಶ್ರೀವತ್ಸ ಉಪಾಧ್ಯಾಯ, ಕನ್ನರ್ಪಾಡಿ ಕೃಷ್ಣರಾಜ, ವಾಮನ ಆಚಾರ್ಯ, ನಾಗಶಯನ, ಹೆರ್ಗ ಗಣೇಶ್ ಭಟ್, ಸ್ವಸ್ತಿಕಾಚಾರ್ಯಇವರ ಸಹಯೋಗದೊಂದಿಗೆ ಚತುರ್ವೇದ ಸಹಿತ ವಿವಿಧ ಸ್ತುತಿಗಳನ್ನು ನಡೆಸಿದರು. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ವೈವಿಧ್ಯಮಯ ಹೂವುಗಳಿಂದ ಕ್ಷೇತ್ರದ ಅಲಂಕಾರ ತಜ್ಞ ಆನಂದಬಾಯರಿ ಅಲಂಕರಿಸಿದ್ದರು.