ಹಿಮೋಫಿಲಿಯಾ ಬಗ್ಗೆ ಭಯ ಬೇಡ: ಡಾ. ರಾಜೇಂದ್ರ ಗಡಾದ

KannadaprabhaNewsNetwork |  
Published : Apr 18, 2026, 02:00 AM IST
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿದರು. | Kannada Prabha

ಸಾರಾಂಶ

ಸರಿಯಾದ ಚಿಕಿತ್ಸೆ ಮತ್ತು ಕಾಳಜಿಯಿಂದ ಹಿಮೋಫಿಲಿಯಾ ರೋಗಿಗಳು ಸಹ ಸಾಮಾನ್ಯ ಜೀವನ ನಡೆಸಬಹುದು.

ಗದಗ: ಹಿಮೋಫಿಲಿಯಾ ಅಪರೂಪದ ಅನುವಂಶಿಕ ರಕ್ತಸ್ರಾವದ ರೋಗವಾಗಿದ್ದು, ಇದರಲ್ಲಿ ರಕ್ತ ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಇದರಿಂದಾಗಿ ಗಾಯವಾದಾಗ ಅಥವಾ ಆಂತರಿಕವಾಗಿ ಹೆಚ್ಚು ರಕ್ತಸ್ರಾವವಾಗುತ್ತದೆ. ಈ ರೋಗದ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.ನಗರ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ನಡೆದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿವರ್ಷ ಏ.17ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಹಿಮೋಫಿಲಿಯಾ ಮತ್ತು ರಕ್ತಸ್ರಾವದ ಅಸ್ವಸ್ಥತೆಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ ಎಂದರು.

ಗಾಯಗಳಿಂದ ಅತಿಯಾದ ರಕ್ತಸ್ರಾವ, ಅಪರಿಚಿತ ಕಾರಣಗಳಿಂದ ಅಥವಾ ಸುಲಭವಾಗಿ ಮೈಮೇಲೆ ನೀಲಿ ಬಣ್ಣದ ಕಲೆಗಳು ಉಂಟಾಗುವುದು, ಕೀಲುಗಳಲ್ಲಿ ನೋವು ಮತ್ತು ಊತ ಬರುವುದು, ಮೂಗಿನಿಂದ ರಕ್ತ ಬರುವುದು ಇವು ಹಿಮೋಫಿಲಿಯಾ ರೋಗದ ಲಕ್ಷಣಗಳಾಗಿದ್ದು, ಸರಿಯಾದ ಚಿಕಿತ್ಸೆ ಮತ್ತು ಕಾಳಜಿಯಿಂದ ಹಿಮೋಫೀಲಿಯಾ ರೋಗಿಗಳು ಸಹ ಸಾಮಾನ್ಯ ಜೀವನ ನಡೆಸಬಹುದು ಎಂದರು.

ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಸಿದ್ದಪ್ಪ ಲಿಂಗದಾಳ ಮಾತನಾಡಿ, ಹಿಮೋಫಿಲಿಯಾ ರೋಗ ಇದು ಮೊದಲ ಬಾರಿಗೆ ರಾಜಮನೆತನದಲ್ಲಿ ಕಾಣಿಸಿಕೊಂಡ ರೋಗವಾಗಿದ್ದು, ಕನ್ನಡದಲ್ಲಿ ಇದಕ್ಕೆ ಕುಸುಮ ರೋಗವೆಂದು ಕರೆಯುತ್ತಾರೆ. ರಕ್ತ ಹೆಪ್ಪುಗಟ್ಟದಿರುವುದೇ ಇದರ ಪ್ರಮುಖ ಲಕ್ಷಣವಾಗಿದೆ. ಕೀಲು ನೋವುಗಳ ಬಗ್ಗೆ ಜಾಗೃತಿ ಅಗತ್ಯ ಎಂದರು.

ನಾಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುನಿಲ್ ಹಬೀಬ, ಮುತ್ತಣ್ಣ ಹಟ್ಟಿಮನಿ ಮಾತನಾಡಿದರು. ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ. ಗಡಾದ ಸ್ವಾಗತಿಸಿದರು. ಸಹಜಾನಂದ ಸಾಸ್ವೀಹಳ್ಳಿ ನಿರೂಪಿಸಿದರು. ವೈ.ಎನ್. ಕಡೆಮನಿ ವಂದಿಸಿದರು.ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಡಂಬಳ: ಹೋಬಳಿಯ ಅತ್ತಿಕಟ್ಟಿ ಗ್ರಾಮದಲ್ಲಿ ಏ. 18ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಎಸ್. ಪಾಟೀಲ ಅವರು ಚಾಲನೆ ನೀಡುವರು. ಸಂಜೆ 7.30ರಿಂದ ಮೇಗಲಮನಿ ಬಂಧುಗಳ ಹಿರಿಯರ ಸವಿನೆನಪಿಗಾಗಿ ಸನ್ಮಾನ, ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿವೆ ಎಂದು ಕಾರ್ಯಕ್ರಮ ಆಯೋಜಕ, ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಾಮಣ್ಣ ಮೇಗಲಮನಿ ತಿಳಿಸಿದ್ದಾರೆ.ಅತ್ತಿಕಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ರೋಣ ಶಾಸಕ ಜಿ. ಎಸ್. ಪಾಟೀಲ ಅವರು ಚಾಲನೆ ನೀಡುವರು. ಕಾರ್ಯಕ್ರಮದ ಜತೆಗೆ ಸಾರ್ವಜನಿಕರ ಕುಂದುಕೊರತೆ ಆಲಿಸುವರು. ಇದೇ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಸದಸ್ಯರಿಗೆ, ಸಾಧಕರಿಗೆ ಸನ್ಮಾನ ನಡೆಯಲಿದೆ.ಸಂಜೆ 7.30ರಿಂದ ಹಾವೇರಿ ಜ್ಯೂನಿಯರ್ ರಾಜಕುಮಾರ ಅಶೋಕ ಬಸ್ತಿ ಕಲಾ ತಂಡ, ಡೋಣಿ ಬೀರಲಿಂಗೇಶ್ವರ ಕಲಾ ತಂಡ, ಕೊತಬಾಳ ಅರುಣೋದಯ ಸಾಂಸ್ಕೃತಿಕ ಕಲಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿವೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ನೈಜ ನಂಬಿಕೆ, ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ: ಡಾ. ವೀರೇಂದ್ರ ಪಾಲ್
ಮುಳಗುಂದದಲ್ಲಿ ಗಣತಿ ಕಿಟ್‌ಗಾಗಿ ಶಿಕ್ಷಕರ ಪ್ರತಿಭಟನೆ