ಲಕ್ಷ್ಮೇಶ್ವರ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಿವಮೊಗ್ಗದ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ 97 ಬಟಾಲಿಯನ್‌ನ 36 ಜನರ ತಂಡದಿಂದ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು ಎಂದು ಸಿಪಿಐ ಬಿ.ವಿ. ನ್ಯಾಮಗೌಡ ತಿಳಇಸಿದರು.
ರೂಟ್ ಮಾರ್ಚ್‌ದಿಂದ ಸಾರ್ವಜನಿಕರ ಭಯ ಹೋಗಿಲಾಡಿಸಲು ಸಹಾಯವಾಗುತ್ತದೆ. ಆರ್‌ಎಎಫ್ ಬಟಾಲಿಯನ್‌ನವರು ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂದರ್ಭದಲ್ಲಿ ಸಾರ್ವಜನಿಕ ರಕ್ಷಣೆಗೆ ಧಾವಿಸುತ್ತಾರೆ. ಸಾರ್ವಜನಿಕ ರಕ್ಷಣೆಗೆ ಪೊಲೀಸ್ ಇಲಾಖೆಯ ಸನ್ನದ್ಧವಾಗಿರುತ್ತದೆ ಎಂದರು.
ಪಿಎಸ್‌ಐ ನಾಗರಾಜ ಗಡದ ಮಾತನಾಡಿ, ಸಾರ್ವಜನಿಕರು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲೇ ಅಪರಾಧ ಚಟುವಟಿಕೆಗಳು ಕಂಡುಬಂದರೂ ಪೊಲೀಸ್ ಠಾಣೆಗೆ ತಿಳಿಸಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದಾಗ ಅಪರಾಧ ಚಟುವಟಿಕೆಗಳನ್ನು ಪ್ರಾರಂಭಿಕ ಹಂತದಲ್ಲಿ ತಡೆಗಟ್ಟಬಹುದು ಎಂದರು.ರೂಟ್ ಮಾರ್ಚ್ ಕಾರ್ಯವು ದೂದನಾನಾ ದರ್ಗಾದಿಂದ ಪ್ರಾರಂಭಗೊಂಡು ಹಾವಳಿ ಆಂಜನೇಯ ದೇವಸ್ಥಾನ, ಬಜಾರ ರಸ್ತೆ, ಪಾದಗಟ್ಟಿ ಸೋಮೇಶ್ವರ ದೇವಸ್ಥಾನ, ತೇರಿನಮನೆ, ಆದಯ್ಯ ಸರ್ಕಲ್, ಗದಗ ನಾಕಾ, ಹೊಸ ಬಸ್ ಸ್ಟಾಂಡ್, ಶಿಗ್ಲಿ ಕ್ರಾಸ್ ಮೂಲಕ ಸಾಗಿ ಪೊಲೀಸ್ ಠಾಣೆಗೆ ಮುಕ್ತಾಯಗೊಂಡಿತು.ಈ ವೇಳೆ ಆರ್‌ಎಎಫ್ ಬಟಾಲಿಯನ ಅಸಿಸ್ಟೆಂಟ್ ಕಮಾಂಡೆಟ್ ಅನೀಲಕುಮಾರ ಜಾಧವ, ಆರ್‌ಎಎಫ್ ಸಿಬ್ಬಂದಿ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.