ನೌಕರರಾಗಬೇಡಿ ಉದ್ಯೋಗದಾತರಾಗಿ: ಚಂದ್ರಗುಂಡ ಸ್ವಾಮೀಜಿ

KannadaprabhaNewsNetwork |  
Published : Jan 31, 2024, 02:18 AM IST
ಫೋಟೋ- ಕಿರಣಗಿ | Kannada Prabha

ಸಾರಾಂಶ

ಇನ್ನೊಬ್ಬರಲ್ಲಿ ನೌಕರಿ ಮಾಡುವವರಾಗಬಾರದು, ಸಾವಿರಾರು ಜನರಿಗೆ ಉದ್ಯೋಗದಾತರಾಗಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಕ್ಕಳು ಶಿಕ್ಷಣ ಪಡೆದು ಇನ್ನೊಬ್ಬರಲ್ಲಿ ನೌಕರಿ ಮಾಡುವವರಾಗಬಾರದು, ಸಾವಿರಾರು ಜನರಿಗೆ ಉದ್ಯೋಗದಾತರಾಗಬೇಕು ಎಂದು ಹೊನ್ನಕಿರಣಗಿ ಮಠದ ಚಂದ್ರಗಂಡ ಶ್ರೀ ಕರೆ ನೀಡಿದ್ದಾರೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ರಾಚೋಟೇಶ್ವರ ಶಿಕ್ಷಣ ಟ್ರಸ್ಟ್(ರಿ) ಅಡಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ನಿಮಿತ್ತ ಪಾವನ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ವೇದಿಕೆ ಉದ್ದೇಶಿಸಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಮಲ್ಲಿನಾಥ ತುಪ್ಪದ, ಯುವ ಮುಖಂಡರಾದ ಗುರುನಾಥ ಜುಲ್ಪಿ, ಜಗನ್ನಾಥ ಆಲಮೇಲ, ಮಲ್ಲಿನಾಥ ದಯಾಮಣಿ, ಸಿದ್ದರಾಮಪ್ಪ ಆಲಮೇಲ, ರಾಚಯ್ಯ ನಂದಿಕೋಲ, ವೀರೇಶ ತತ್ತಿ ಉಪಸ್ಥಿತರಿದ್ದರು. ಕರಿಬಸವೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಕರಿಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಿದ್ದಮಲ್ಲಯ್ಯ ಯಂಕಂಚಿ ಅವರು ಸ್ವಾಗತಿಸಿದರು. ಚಂದ್ರಗುಂಡ ಶಿವಾಚಾರ್ಯರು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಷಣವನ್ನು ಕನ್ನಡ ಇಂಗ್ಲೀಷ ಮತ್ತು ಹಿಂದಿಯಲ್ಲಿ ಮಾಡಿದರು.

ವಿದ್ಯಾರ್ಥಿಗಳಿಂದ ಯೋಗಾಸನ ಮತ್ತು ಪಿರಾಮಿಡ್ ರಚನೆ ವೃತ್ತಗಳನ್ನು ಮಾಡಿದರು. ಜಯಶ್ರೀ ಬಿದನೂರ ಹಾಗೂ ಜಗದೇವಿ ಶಿಕ್ಷಕಿಯರು ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಶಿಕ್ಷಕರಾದ ವೀರೇಶಶಾಸ್ತ್ರಿ, ದೇಸಾಯಿಮಠ, ಕಾಶಿನಾಥ ಬೆನಕಹಳ್ಳಿ, ಶಿವಕುಮಾರ ಪಾಟೀಲ್, ಅಂಬರೀಶ್ ಬಂಗಾರಶೆಟ್ಟಿ, ಶ್ರೀಶೈಲ ಯತ್ನಾಳ, ವಿಜಯಕುಮಾರ ಚೌವ್ಹಾಣ್, ಚನ್ನಬಸಪ್ಪ ಹಳ್ಳಿ, ರೇವಣಸಿದ್ದ ಕೋಡ್ಲಿ, ಶರಣಕುಮಾರ ಬಂಡಿ ಶಿಕ್ಷಕರಾದ ಮಹಾನಂದ ಕಾಳ್ನೂರ, ಶಶಿಕಲಾ ವಾಲಿಕಾರ, ಶೋಭಾ ತಾಯಿ, ಲಕ್ಷ್ಮೀದಯಾಮಣಿ, ರೇಖಾ ಕಾಡಾದಿ, ಶಾಂತಲಾ ಆಲಮೇಲ, ರೇವತಿ ಸಂದಿಮನಿ, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ರಾಜಶೇಖರ ಮಠ, ಅನಿಲಕುಮಾರ ಚಟ್ಟಿ, ವಿನಾಯಕ ತುಪ್ಪದ ಉಪಸ್ಥಿತರಿದ್ದರು. ಕರಿಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶರಣಕುಮಾರ ಗಂಧದಮಠ ಅವರು ವಂದಿಸಿದರು. ಬಸವರಾಜ ಚಟ್ಟಿ ಅವರು ನಿರೂಪಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌