ಗ್ಯಾರಂಟಿಗೆ ಆಮಿಷ ಬೇಡ, ದೇಶದ ಹಿತ ಗುರಿಯಾಗಲಿ: ಬಿ.ವೈ.ರಾಘವೇಂದ್ರ

KannadaprabhaNewsNetwork | Published : Apr 22, 2024 2:05 AM

ಸಾರಾಂಶ

ಆನಂದಪುರದಲ್ಲಿ ಶನಿವಾರ ಸಂಜೆ ನಡೆದ ಗಂಗಾಮತಸ್ಥ ಸಮಾಜದ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಬಳಿಕ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಸಾಗರ / ಆನಂದಪುರ

ಯಾವುದೇ ಸಮುದಾಯದವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗೆ ಆಮಿಷಕ್ಕೆ ಬಲಿಯಾಗದೆ ದೇಶದ ಹಿತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕರೆ ನೀಡಿದರು.

ಅವರು ಸ್ಥಳೀಯ ರಂಗನಾಥ ಬೀದಿಯಲ್ಲಿನ ಶನಿವಾರ ಸಂಜೆ ನಡೆದ ಗಂಗಾಮತಸ್ಥ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮೂಲಕ ಗಂಗಾಮತಸ್ತ ಸಮಾಜಕ್ಕೆ ₹25 ಕೋಟಿಗೂ ಹೆಚ್ಚಿನ ಅನುದಾನದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದಂತಹ ಪಕ್ಷ ಬಿಜೆಪಿ ಎಂದರು.

ಹಾವೇರಿ ಇಲ್ಲಿರುವಂತಹ ಗಂಗಾಮತಸ್ಥರ ಮಠಕ್ಕೆ 2.5 ಕೋಟಿ ರು.ಗಳ ಅನುದಾನದ ಮೂಲಕ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಶರಾವತಿ ಸಂತ್ರಸ್ತರಿಗೆ ಮುಳುಗಡೆಯಾದಂತಹ ಸಂದರ್ಭದಲ್ಲಿ ಅವರ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಓಟಿನ ರಾಜಕಾರಣದಿಂದಾಗಿ ಅವರ ಸಮಸ್ಯೆಯನ್ನು ಸಮಸ್ಯೆಯಾಗಿ ಇಡಲು ಪ್ರಯತ್ನಿಸಿದ್ದು, ಕಾಂಗ್ರೆಸ್ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ವರ್ಷ ಸಮೀಪಿಸುತಿಸುತ್ತಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯವಾಗಿಲ್ಲ, ವಿದ್ಯಾವಂತ ನಿರುದ್ಯೋಗಿಗಳಿಗೆ ಹಣ ದೊರೆತಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ಹಣ ನೀಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತಿದೆ. ಇದು ಸಾಧ್ಯವಿಲ್ಲದಂತಹ ಮಾತು. ಕಾರಣ ಈ ಯೋಜನೆಗೆ ದೇಶದಲ್ಲಿ 75 ಲಕ್ಷ ಕೋಟಿ ರು. ಅನುದಾನ ಬೇಕು. ಕೇಂದ್ರ ಸರ್ಕಾರದ ಒಟ್ಟು ವರ್ಷದ ಬಜೆಟ್ 48 ಲಕ್ಷ ಕೋಟಿ ರೂಪಾಯಿಗಳು ಉಳಿದ ಹಣವನ್ನು ಎಲ್ಲಿಂದ ತುಂಬಲು ಸಾಧ್ಯ ಎಂದು ಪ್ರಶ್ನಿಸಿದರು.ಈಗ ನಡೆಯುತ್ತಿರುವಂತಹ ಚುನಾವಣೆ ದೇಶಕ್ಕಾಗಿ ಸುಭದ್ರ ಭಾರತದ ನಿರ್ಮಾಣಕ್ಕೆ ಮೋದಿ ನಾಯಕತ್ವ ಅತ್ಯವಶ್ಯಕ. ಈ ಬಾರಿ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾದ ನನ್ನ ಕಮಲದ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತಯಾಚಿತರು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡ್ ಮಾತನಾಡಿ, ಸಂಸದ ರಾಘವೇಂದ್ರ ಪಕ್ಷ ಜಾತಿ ಭೇದವಿಲ್ಲದೆ ಕೇಂದ್ರದ ಅನುದಾನದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವುದರೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವಂತಹ ಬಿ. ವೈ.ರಾಘವೇಂದ್ರ ರವರನ್ನು ಅತಿ ಹೆಚ್ಚಿನ ಅಂತರದ ಮತದಿಂದ ಗೆಲುವು ಸಾಧಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು.ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ರೈಲ್ವೆ ಮಾರ್ಗ ರಾಷ್ಟ್ರೀಯ ಹೆದ್ದಾರಿ, ಕುಡಿಯುವ ನೀರು, ಸೇತುವೆ ಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿಗಳ ಕಾರ್ಯಗಳನ್ನು ಮಾಡಿದಂತಹ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಗೆಲ್ಲಿಸುವುದರ ಮೂಲಕ ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಬೇಕು ಎಂದರು.

ಡಾ.ರಾಜ ನಂದಿನಿ ಮಾತನಾಡಿ, ಈ ಭಾಗದ ಜನರು ಬಿ.ವೈ.ರಾಘವೇಂದ್ರರ ಕೊಡುಗೆಯನ್ನು ಪರಿಗಣಿಸಿ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಗಂಗಾಮತಸ್ಥ ಸಮಾಜ ಮುಖಂಡರಾದ ಶಿವಾನಂದ್, ಶ್ರೀನಿವಾಸ್, ಚೇತನ, ಜ್ಯೋತಿ, ಇವರೊಂದಿಗೆ ರಾಜು ತಲ್ಲೂರು, ಪ್ರಸನ್ನ ಕೈಕೆರೆ, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಮಲ್ಲಿಕಾರ್ಜುನ ಹಕ್ರೆ, ವೀರೇಶ್ ಆಲವಳ್ಳಿ, ಸುವರ್ಣ ಟೀಕಪ್ಪ, ಉಪಸ್ಥಿತರಿದ್ದು ಈ ಒಂದು ಗಂಗಾಮತ ಸಮಾಜದ ಕಾರ್ಯಕ್ರಮದಲ್ಲಿ ನೂರಾರು ಮಹಿಳಾ ಹಾಗೂ ಪುರುಷ ಮುಖಂಡರುಗಳು ಭಾಗವಹಿಸಿದ್ದರು. ರಾಜ್ಯ ಸರ್ಕಾರದ್ದು ಓಲೈಕೆ ರಾಜಕಾರಣ: ರಾಘವೇಂದ್ರ

ಸಾಗರ: ಅಲ್ಪಸಂಖ್ಯಾತರನ್ನು ಓಲೈಸುವ ರಾಜ್ಯ ಸರ್ಕಾರದ ನೀತಿಯಿಂದಾಗಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಇದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡವರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಕುರಿತು ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ತೀರ ಬೇಸರ ತರಿಸುವಂತಹದ್ದಾಗಿದೆ ಎಂದರು.

ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ರಾಮನವಮಿ ಸಂದರ್ಭದಲ್ಲಿ ಪಾನಕ ಹಂಚುತ್ತಿದ್ದ ಮೂರ್ನಾವಲ್ಕು ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗೆ ಬೇರೆ ಬೇರೆ ಘಟನೆಗಳು ನಡೆಯುತ್ತಿದ್ದು, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಬಹುಸಂಖ್ಯಾತರ ಮೇಲೆ ಕೇಸ್ ಹಾಕುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಹೆಚ್.ಹಾಲಪ್ಪ ಮಾತನಾಡಿ, ನಮ್ಮ ಅಭ್ಯರ್ಥಿ ಸಮರ್ಥರಾಗಿದ್ದಾರೆ. ಕ್ಷೇತ್ರದ ಮತದಾರರು ಬಂಗಾರಪ್ಪ ಮತ್ತು ಡಾ.ರಾಜಕುಮಾರ್ ಅವರಿಗೆ ಗೌರವ ಕೊಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರನ್ನು ಬಂಗಾರಪ್ಪ ಪುತ್ರಿಯಾಗಿ, ಡಾ.ರಾಜಕುಮಾರ್ ಸೊಸೆಯಾಗಿ ಗೌರವ ಕೊಡೋಣ. ಆದರೆ ಮತದಾನ ಬೇರೆ, ಅಭಿಮಾನ ಬೇರೆ ಎಂದರು.

Share this article