ಆನೆ ಸಾಫ್ಟ್ ರಿಲೀಜ್ ಕಾರ್ನರ್ ನಿರ್ಮಾಣ ಬೇಡ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Nov 01, 2026, 02:15 AM IST
ತರೀಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆನೆ ಸಾಫ್ಟ್ ರಿಲೀಜ್ ಕಾರ್ನರ್ ಮಾಡಲು ಬಿಡುವುದಿಲ್ಲಃ ಶಾಸಕ ಜಿ.ಹೆಚ್.ಶ್ರೀನಿವಾಸ್  | Kannada Prabha

ಸಾರಾಂಶ

ತರೀಕೆರೆತಾಲೂಕು ಅರಣ್ಯ ವ್ಯಾಪ್ತಿಯಲ್ಲಿ ೫ ಸಾವಿರ ಎಕರೆ ವಿಸ್ತೀರ್ಣದಲ್ಲಿ ಆನೆ ಸಾಫ್ಟ್ ರಿಲೀಜ್ ಕಾರ್ನರ್ ನಿರ್ಮಾಣಕ್ಕೆ ತಮ್ಮ ವಿರೋಧವಿದ್ದು ಯಾವುದೇ ಕಾರಣಕ್ಕೂ ಪ್ರಸ್ತಾವಿತ ಯೋಜನೆ ಮಾಡಲು ಬಿಡುವುದಿಲ್ಲ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಕಲ್ಲತ್ತಿಪುರ ಸಂತೆ ಮೈದಾನದಲ್ಲಿ ಪ್ರಜಾಸೇವೆ

ಕನ್ನಡಪ್ರಭ ವಾರ್ತೆ ತರೀಕೆರೆ

ತಾಲೂಕು ಅರಣ್ಯ ವ್ಯಾಪ್ತಿಯಲ್ಲಿ ೫ ಸಾವಿರ ಎಕರೆ ವಿಸ್ತೀರ್ಣದಲ್ಲಿ ಆನೆ ಸಾಫ್ಟ್ ರಿಲೀಜ್ ಕಾರ್ನರ್ ನಿರ್ಮಾಣಕ್ಕೆ ತಮ್ಮ ವಿರೋಧವಿದ್ದು ಯಾವುದೇ ಕಾರಣಕ್ಕೂ ಪ್ರಸ್ತಾವಿತ ಯೋಜನೆ ಮಾಡಲು ಬಿಡುವುದಿಲ್ಲ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಕಂದಾಯ ಇಲಾಖೆಯಿಂದ ತಾಲೂಕಿನ ನಂದಿಬಟ್ಟಲು ಗ್ರಾಪಂ ವ್ಯಾಪ್ತಿಯ ಕಲ್ಲತ್ತಿಪುರ ಸಂತೆ ಮೈದಾನದಲ್ಲಿ ಶನಿವಾರ ನಡೆದ ಪ್ರಜಾಸೇವೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸರ್ಕಾರ ಪ್ರಜೆಗಳು ತಮ್ಮ ಅಹವಾಲುಗಳನ್ನು ಹೊತ್ತು ವಿವಿಧ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕಾರ್ಯಕ್ರಮ ಆಯೋಜಿಸಿದೆ, ಸರ್ಕಾರವೇ ಪ್ರಜೆಗಳ ಬಳಿಗೆ ಹೋಗಿ ಅವರ ಸಮಸ್ಯೆ ಅರಿತು ಸಾಧ್ಯವಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿ ಉಳಿದ ಸಮಸ್ಯೆಯನ್ನು ಸಂಬಂದಿತ ಇಲಾಖೆ ಗಮನಕ್ಕೆ ತಂದು ಪರಿಶೀಲಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಲಿಂಗದಹಳ್ಳಿ ಹೋಬಳಿ ಕೆರೆ, ನಂದಿಬಟ್ಟಲು ಕೆರೆಗೂ ಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ತುಂಬಿಸಬೇಕು. ಈ ಭಾಗದ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರಿಗೆ ಇ ಖಾತಾ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಮುಳ್ಳಟ್ಟಿಬೈಲು ಗ್ರಾಮದಿಂದ ಜೈಪುರ ಗ್ರಾಮದ ವರೆಗಿನ ರಸ್ತೆ ತುಂಬಾ ಹದಗೆಟ್ಟಿರುವ ಕಾರಣ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದಾಗ ಶಾಸಕರು ರಸ್ತೆ ಅಭಿವೃದ್ಧಿಗೆ ₹50 ಲಕ್ಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ನಂದಿಬಟ್ಟಲು ತಿಗಡ, ಉಡೇವಾ, ಲಿಂಗದಹಳ್ಳಿ, ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದು ಕಂದಾಯ,ಅರಣ್ಯ, ಲೋಕೋಪಯೋ, ಶಿಕ್ಷಣ, ಕೃಷಿ , ತೋಟಗಾರಿಕಾ, ಸಣ್ಣ ನೀರಾವರಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 120 ಸಮಸ್ಯೆಗಳಿಗೂ ಅಧಿಕ ಅರ್ಜಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ದೇವೇಂದ್ರಪ್ಪ, ವಲಯ ಅರಣ್ಯಾಧಿಕಾರಿಗಳಾದ ಬಿ.ಸುಧಾಕರ್, ಹರೀಶ್, ಪ್ರದೀಪ್, ತೋಟಗಾರಿಕಾ ಅಧಿಕಾರಿ ರೋಹಿತ್, ಕೃಷಿ ಅಧಿಕಾರಿ ವೆಂಕಟೇಶ್, ಲಿಂಗದಹಳ್ಳಿ ರಾಜಸ್ವ ನಿರೀಕ್ಷಕ ಪ್ರಕಾಶ್, ಕಾರ್ತೀಕ್, ನಾಗರಾಜ್, ಪಿ.ಡಿ.ಓ ಗಳಾದ ಎನ್.ಎಸ್.ನಾಗರಾಜಪ್ಪ, ಟಿ.ಶಿವಮೂರ್ತಿ, ಶ್ರೀನಿವಾಸ್, ಯೋಗೀಶ್ ಹಾಜರಿದ್ದರು.

-

31ಕಟಿಆರ್.ಕೆ4ಃ

ತರೀಕೆರೆ ಸಮೀಪದ ಕಲ್ಲತ್ತಿಪುರ ಸಂತೆ ಮೈದಾನದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿದರು. ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾ.ಪಂ.ಇ.ಒ.ಡಾ.ಆರ್.ದೇವೇಂದ್ರಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ