ಕನ್ನಡಪ್ರಭ ವಾರ್ತೆ ರಾಮದುರ್ಗ ಮಠ ಮಂದಿರಗಳ ಸ್ವಾಮಿಗಳನ್ನು ಅರಳಿಸುವ ಕೆಲಸ ಮಾಡಬೇಕೇ ವಿನಃ ಕೆರಳಿಸುವ ಕೆಲಸವನ್ನು ಮಾಡಬೇಡಿ. ಇತ್ತೀಚೆಗೆ ಸ್ವಾಮಿಗಳನ್ನು ಇಕ್ಕಟ್ಟಿಗೆ ಸಿಕ್ಕಿಹಾಕಿಸುವ ಪ್ರಯತ್ನ ನಡೆಯುತ್ತಿರುವುದು ವಿಷಾಧನೀಯ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಮಠ ಮಂದಿರಗಳ ಸ್ವಾಮಿಗಳನ್ನು ಅರಳಿಸುವ ಕೆಲಸ ಮಾಡಬೇಕೇ ವಿನಃ ಕೆರಳಿಸುವ ಕೆಲಸವನ್ನು ಮಾಡಬೇಡಿ. ಇತ್ತೀಚೆಗೆ ಸ್ವಾಮಿಗಳನ್ನು ಇಕ್ಕಟ್ಟಿಗೆ ಸಿಕ್ಕಿಹಾಕಿಸುವ ಪ್ರಯತ್ನ ನಡೆಯುತ್ತಿರುವುದು ವಿಷಾಧನೀಯ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.ತಾಲೂಕಿನ ಕುಳ್ಳೂರು ಶ್ರೀಗುರು ಶಿವಯೋಗೀಶ್ವರರ 118 ನೇ ಪುಣ್ಯಾರಾಧನೆ, ಶ್ರೀಗುರು ರೇವಯ್ಯ ಶಿವಯೋಗಿಗಳ 150 ನೇ ಜಯಂತ್ಯುತ್ಸವ ಸಿದ್ದರಾಮ ಶಿವಯೋಗಿಗಳ 50ನೇ ಪುಣ್ಯಾರಾಧನೆ, ಶಿವಯ್ಯ ಮಹಾಸ್ವಾಮಿಗಳ 6ನೇ ಪುಣ್ಯಾರಾಧನೆಯ ಅಂಗವಾಗಿ ಬುಧವಾರ ನಡೆದ ವೇದಾಂತ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಠಗಳ ಅಭಿವೃದ್ಧಿಗೆ ಗ್ರಾಮಸ್ಥರು ರಾಜಕಾರಣ ಮತ್ತು ಜಾತಿ ಮರೆತು ಕೆಲಸ ಮಾಡಿದರೆ ಮಠಗಳ ಅಭಿವೃದ್ಧಿ ಸಾಧ್ಯ. ಇಂದಿನ ಪರಿಸ್ಥಿತಿಯಲ್ಲಿ ರಾಜಕಾರಣ ಅನಿವಾರ್ಯವಾದರೆ ಜೀವನವೇ ರಾಜಕಾರಣ ಆಗದಂತೆ ನೋಡಿಕೊಂಡು ಜೀವನ ನಡೆಸಿದರೆ ನೆಮ್ಮದಿಯ ಬದುಕು ಕಾಣಬಹುದು ಎಂದು ಹೇಳಿದರು.ವಿಶ್ವಗುರು ಬಸವಣ್ಣನವರು ಸೇರಿ ಶರಣಷ್ಟೆಯಲ್ಲ ಜಗತ್ತಿನ ಎಲ್ಲ ಧರ್ಮಗಳ ಸಾರ ಒಂದೇ ದಯವೇ ಆಗಿದ್ದು, ನೆರೆಹೊರೆಯವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಮನೆಯಲ್ಲಿ ಮಗಳು ಮತ್ತು ಸೊಸೆಯನ್ನು ಸಮಾನಗಿ ಕಾಣುವುದು ನಿಜವಾದ ಧರ್ಮವಾಗಿದೆ. ಯಾವದೇ ಪ್ರಾಣಿಗಳ ಜೀವನವು ಮುಖ್ಯವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನೇಸರಗಿ ಮಲ್ಲಾಪೂರ ಚಿದಾನಂದ ಮಹಾಸ್ವಾಮಿಗಳು, ಹೊಸಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು ಹರ್ಲಾಪೂರದ ರೇಣುಕು ಶಿವಾಚಾರ್ಯರು ಮಾತನಾಡಿ, ಕುಳ್ಳೂರು ಶಿವಯೋಗಿಗಳ ನಡೆದಾಡಿದ ಸ್ಥಳವೇಲ್ಲ ಪಾವನ ಕ್ಷೇತ್ರವಾಗಿದೆ. ಮಠದಲ್ಲಿ ನಿತ್ಯ ದಾಸೋಹ ನಡೆಯುತ್ತಿರುವದು ವಿಶೇಷ ಎಂದರು.ಕುಳ್ಳೂರು ಶಿವಯೋಗೀಶ್ವರ ಸಂಸ್ಥಾನ ಮಠದ ಬಸವಾನಂದ ಭಾರತಿ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಹೊಸಕೋಟಿಯ ಅಭಿನವ ರೇವಯ್ಯಸ್ವಾಮಿಗಳು, ಕೊಟಬಾಗಿಯ ಪ್ರಭುದೇವರು ಹಾಗೂ ರೇಖಾತಾಯಿ, ವೆಂಕಟಾಪೂರದ ಜಾನಮ್ಮ ತಾಯಿ, ಷರೀಪ ಸ್ವಾಮೀಜಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.