ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೋರ್‌ವೆಲ್ ಕೊರೆಯಲು ದರ ನಿಗದಿ ಪಡಿಸುವ ಕುರಿತು ತಾಲೂಕು ಮಟ್ಟದ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೋರ್‌ವೆಲ್ ಮಾಲೀಕರು ಬರ ಪರಿಸ್ಥಿತಿ ಲಾಭವನ್ನು ಪಡೆಯಲು ಹೆಚ್ಚುವರಿ ದರ ನಿಗದಿ ಮಾಡಿದ್ದು, ಈ ಬಗ್ಗೆ ರೈತರಿಂದ ಬಂದ ದೂರಿನ ಮೇರೆಗೆ ಜಿಲ್ಲಾಡಳಿತ ರೈತ ಮುಖಂಡರು ಹಾಗೂ ಬೋರ್‌ವೆಲ್ ಏಜೆನ್ಸಿಯವರ ಸಭೆ ನಡೆಸಿ ಜಿಲ್ಲೆಯಾದ್ಯಂತ ಏಕರೂಪದ ದರ ನಿಗದಿ ಮಾಡಿದೆ, ಅದರಂತೆಯೇ ಏಜೆನ್ಸಿಯವರು ಹಣ ಪಡೆಯಬೇಕು. ಹೆಚ್ಚುವರಿ ಹಣ ಪಡದರೆ ಈ ಬಗ್ಗೆ ರೈತರು ತಹಸೀಲ್ದಾರ್ ಅವರ ಗಮನಕ್ಕೆ ತಂದರೆ ಅಂತಹ ಏಜೆನ್ಸಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಲಾರಿಯನ್ನು ವಶ ಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ರೈತರು ನಾವೇ ಕೇಸಿಂಗ್ ಪೈಪ್ ತಂದರೂ ಅದನ್ನು ಕೊಳವೆ ಬಾವಿಗೆ ಇಳಿಸಲು ಅಡಿಗೆ 20-25 ರು. ಪಡೆಯುತ್ತಾರೆ. ಅವರು ತರುವ ಕೇಸಿಂಗ್ ಗುಣಮಟ್ಟ ಚೆನ್ನಾಗಿರುವುದಿಲ್ಲ. ಕಡಿಮೆ ಬೆಲೆ ಕೇಸಿಂಗ್ ಪೈಪ್‌ಗೆ ಹೆಚ್ಚುವರಿ ದರ ಪಡೆಯುತ್ತಾರೆ ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ತಿರುಪತಿ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ, ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್, ರೈತ ಮುಖಂಡರು, ರಿಗ್ ಏಜೆನ್ಸಿಯವರು ಭಾಗವಹಿಸಿದ್ದರು.