ಮಾತೃಭೂಮಿ, ತಂದೆ-ತಾಯಿ ಋಣ ಮರೆಯದಿರಿ: ಡಾ.ಶಿವಾನಂದ ಮಾಸ್ತಿಹೊಳಿ

KannadaprabhaNewsNetwork |  
Published : Sep 17, 2024, 12:54 AM IST
ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿಯವರನ್ನು ಪರಕನಹಟ್ಟಿ ಗ್ರಾಮದಲ್ಲಿ ಸನ್ಮಾನ ಮಾಡಲಾಯಿತು. | Kannada Prabha

ಸಾರಾಂಶ

ಕಷ್ಟಗಳನ್ನು ಸಹಿಸಿ ಮಕ್ಕಳನ್ನು ಸಾಕು, ಸಲುಹಿ ಶಿಕ್ಷಣ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿಸಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದು ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ, ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಕಷ್ಟಗಳನ್ನು ಸಹಿಸಿ ಮಕ್ಕಳನ್ನು ಸಾಕು, ಸಲುಹಿ ಶಿಕ್ಷಣ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿಸಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದು ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ, ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.

ಭಾನುವಾರ ಸ್ವಗ್ರಾಮ ಪರಕನಹಟ್ಟಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಪರಕನಹಟ್ಟಿಯವರಾದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿವಿಯ ವಿಶೇಷಾಧಿಕಾರಿ ಡಾ.ಆನಂದ ಮಾಸ್ತಿಹೊಳಿಗೆ ಸಂಘದ ವತಿಯಿಂದ ಸತ್ಕರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಬಸವರಾಜ ಸುಲ್ತಾನಪುರಿ ಮಾತನಾಡಿ, ಬರುವ ವರ್ಷದಲ್ಲಿ ಸಂಘದ ವಜ್ರಮಹೋತ್ಸವ ಆಚರಿಸಲಾಗುವುದು. ಸಂಘದ ವತಿಯಿಂದ ಸುಪರ್ ಮಾರ್ಕೆಟ್‌ ಆರಂಭಿಸುವ ಯೋಚನೆ ಇದೆ. 1190 ಸದಸ್ಯರಿದ್ದು, ₹47,60,150 ಷೇರು ಬಂಡವಾಳ ಇದೆ. ₹92,31,621 ಠೇವು, ₹14,22,86,460 ದುಡಿಯುವ ಬಂಡವಾಳ ಹೊಂದಿದ್ದು, ₹30,38,141 ಲಾಭ ಗಳಿಸಿದೆ. ಶೇ.13ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಗುಡಸ ಸಂಘದ ಪ್ರಗತಿ ಕುರಿತು ವರದಿವಾಚನ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಈರಣ್ಣ ಹೂಲಿಕಟ್ಟಿ, ನಿರ್ದೇಶಕರಾದ ನಿಂಗಪ್ಪ ಪೈರಾಶಿ, ಮಲ್ಲಪ್ಪ ಶಿರೂರ, ಜಂಪಣ್ಣ ಪಾಟೀಲ, ಬಸವರಾಜ ಮಾಸ್ತಿಹೊಳಿ, ಬಾಳಪ್ಪ ಹುಕ್ಕೇರಿ, ಶಿವಾನಂದ ಮಗದುಮ್ಮ, ಲಕ್ಕಪ್ಪ ಬನ್ನೂರ, ಗಂಗಪ್ಪ ಹರಿಜನ, ಬಸವ್ವ ಕಬಾಡಗಿ, ಗೀತಾ ಹೂಲಿಕಟ್ಟಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ ಕಮ್ಮಾರ, ಶಿವಾನಂದ ಹೂಲಿಕಟ್ಟಿ, ಗಜಾನನ ಶಿರೂರ, ಶಿವಾನಂದ ಹುಕ್ಕೇರಿ, ಈರಣ್ಣ ಹೂಲಿಕಟ್ಟಿ ಹಾಗೂ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ