ಕಾಲಂಗಳಲ್ಲಿ ಹಿಂದು, ಪರಿಶಿಷ್ಟ ಜಾತಿ ಅಂತ ಬರೆಸೋದು ಮರೆಯದಿರಿ

KannadaprabhaNewsNetwork |  
Published : Apr 16, 2025, 12:35 AM IST
15 ಜೆ.ಜಿ.ಎಲ್.1) 15 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಇತರರು ಮಾತನಾಡಿದರು. | Kannada Prabha

ಸಾರಾಂಶ

ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಬೇಕು ಎಂದು ಮಾದಿಗ ಸಮಾಜ ಹಿರಿಯ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಹೇಳಿದ್ದಾರೆ.

ಜಗಳೂರಲ್ಲಿ ಮಾದಿಗ ಸಮಾಜ ಹಿರಿಯ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಮನವಿ

- - -

ಕನ್ನಡಪ್ರಭ ವಾರ್ತೆ ಜಗಳೂರು

ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಬೇಕು ಎಂದು ಮಾದಿಗ ಸಮಾಜ ಹಿರಿಯ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಳಮೀಸಲಾತಿಯ ಅನುಷ್ಠಾನಕ್ಕಾಗಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗವನ್ನು ನೇಮಕ ಮಾಡಿದೆ ಎಂದರು.

ನಮ್ಮ ಮೂಲ ಜಾತಿ ಮಾದಿಗ ಇರುತ್ತದೆ. ಅದಕ್ಕಾಗಿ ಪರಿಶಿಷ್ಟ ಜಾತಿಯ ವಿವಿಧ ಜಾತಿಗಳ ನಿಖರ ಮಾಹಿತಿಗಾಗಿ ಮತ್ತೊಮ್ಮೆ ಜಾತಿಗಣತಿ ನಡೆಸುವಂತೆ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ನೀಡಿದೆ. ರಾಜ್ಯ ಸರ್ಕಾರ ಒಪ್ಪಿಕೊಂಡು ಜಾತಿಗಣತಿ ನಡೆಸಲು ಆದೇಶ ಹೊರಡಿಸಿದೆ. ಮೇ ತಿಂಗಳಲ್ಲಿ ಗಣತಿ ಕಾರ್ಯ ಆರಂಭ ಆಗುತ್ತದೆ. ಗಣತಿದಾರರು ಮನೆಮನೆಗೂ ಬಂದಾಗ ಆದಿಆಂಧ್ರ, ಆದಿ ಕರ್ನಾಟಕ, ಆದಿದ್ರಾವಿಡ ಎಂದು ಬರೆಯಿಸಬೇಡಿ. ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿ ಮಾದಿಗ ಎಂದು ಬರೆಸಬೇಕು ಎಂದು ತಿಳಿಸಿದರು.

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕುಬೇರಪ್ಪ ಮಾತನಾಡಿ, ಸಮುದಾಯದ ಎಲ್ಲರೂ ಭಿನ್ನಾಭಿಪ್ರಾಯ ಮರೆತು, ಜಾಗೃತಿ ವಹಿಸಬೇಕು. ಗಣತಿದಾರರು ಎಲ್ಲೋ ಒಂದು ಕಡೆ ಕುಳಿತು ಗಣತಿ ಮಾಡಬಾರದು. ಕೆಲವರು ಹೊಟ್ಟೆ ಪಾಡಿಗಾಗಿ ಹಳ್ಳಿಯಿಂದ ಸಿಟಿ ಬೆಂಗಳೂರಿಗೆ ಹೋಗಿರುತ್ತಾರೆ. ಅಂಥವರನ್ನು ಬಿಡದೇ ಗುರುತಿಸಿ ಮನೆ ಮನೆಗೂ ಭೇಟಿ ನೀಡಿ, ನಿಖರ ಮಾಹಿತಿ ಸಂಗ್ರಹಿಸುವಂತೆ ನಿಗಾ ವಹಿಸಬೇಕು ಎಂದರು.

ದಸಂಸ ಸಂಚಾಲಕ ಮಾಚಿಕೆರೆ ಸತೀಶ್ ಮಾತನಾಡಿ, ಕಾಲಂಗಳಲ್ಲಿ ಮಾದಿಗ ಎಂದು ನಮೂದಿಸುವಾಗ ಪೆನ್ಸಿಲ್ ಬಳಸಬಾರದು. ಬರೆಯಲು ಬಾಲ್ ಪೆನ್ನುಗಳನ್ನೇ ಬಳಸಬೇಕು ಎಂದರು.

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಕ್ಯಾಸೇನಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ತಿಮ್ಮಣ್ಣ, ರವಿಕುಮಾರ್ ಪಲ್ಲಾಗಟ್ಟೆ, ದುರುಗಪ್ಪ ಮತ್ತಿತರರಿದ್ದರು.

- - -

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ