ಚೈನಿ ವಸ್ತು ಖರೀದಿಸಲು ಸಾಲ ನೀಡಬಾರದು

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಮೋಳೆ ಗ್ರಾಮದಲ್ಲಿ ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡವನ್ನು ಶಾಸಕ ರಾಜು ಕಾಗೆ ಉದ್ಘಾಟಿಸಿದರು. ಬ್ಯಾಂಕ್‌ಗಳು ಯುವಕರಿಗೆ ಚಿಕ್ಪು, ಪುಟ್ಟ ಉದ್ಯೋಗ ಮಾಡಲು, ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ, ಹೈನುಗಾರಿಕೆ ಸೇರಿದಂತೆ ಆದಾಯ ಬರುವ ಉದ್ಯೋಗಕ್ಕೆ ಸಾಲ ಕೊಡಬೇಕೇ ಹೊರತು ಬೈಕ್, ಫ್ರೀಜ್, ಬಂಗಾರ ಒಡವೆ ಖರೀದಿ ಸೇರಿದಂತೆ ಮೋಜು ಮಸ್ತಿ ಮಾಡುವ ಚೈನಿ ವಸ್ತು ಖರೀದಿಸಲು ಸಾಲ ನೀಡಬಾರದು ಎಂದು ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಬ್ಯಾಂಕ್‌ಗಳು ಯುವಕರಿಗೆ ಚಿಕ್ಪು, ಪುಟ್ಟ ಉದ್ಯೋಗ ಮಾಡಲು, ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ, ಹೈನುಗಾರಿಕೆ ಸೇರಿದಂತೆ ಆದಾಯ ಬರುವ ಉದ್ಯೋಗಕ್ಕೆ ಸಾಲ ಕೊಡಬೇಕೇ ಹೊರತು ಬೈಕ್, ಫ್ರೀಜ್, ಬಂಗಾರ ಒಡವೆ ಖರೀದಿ ಸೇರಿದಂತೆ ಮೋಜು ಮಸ್ತಿ ಮಾಡುವ ಚೈನಿ ವಸ್ತು ಖರೀದಿಸಲು ಸಾಲ ನೀಡಬಾರದು ಎಂದು ಶಾಸಕ ರಾಜು ಕಾಗೆ ಸಲಹೆ ನೀಡಿದರು.

ತಾಲೂಕಿನ ಮೋಳೆ ಗ್ರಾಮದಲ್ಲಿ ಶ್ರೀ ಕೆ.ಪಿ.ಮಗೆಣ್ಣವರ ಶ್ರೀ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ಬದುಕಬೇಕು ಮತ್ತು ಇರರಿಗೂ ಬದುಕಲು ಅವಕಾಶ ಮಾಡಿ ಕೊಡಬೇಕೆಂಬ ಸದುದ್ದೇಶದಿಂದ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗೆಣ್ಣವರ ಅವರು ಹಲವಾರು ವರ್ಷಗಳ ಹಿಂದೆ ಪ್ರಾರಂಭಿಸಿದ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವು, ಇಂದು ಹಲವಾರು ಶಾಖೆಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥಾಪಕ ಅಧ್ಯಕ್ಷ ಕಲ್ಲಪ್ಪಣ್ಣ ಮಗೆಣ್ಣವರ ಮಾತನಾಡಿ, ಆರ್ಥಿಕವಾಗಿ ಸದೃಢ ಇದ್ದರವರು ಹಣವನ್ನು ತಂದು ಇಡಬೇಕು. ಕಷ್ಟದಲ್ಲಿದ್ದವರು ಸಾಲ ಪಡೆದು ತನ್ನ ತೊಂದರೆಯನ್ನು ನಿವಾರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಸಸ್ಥೆಯನ್ನು ಪ್ರಾರಂಭಿಸಿದ್ದೇನೆ. ಎಲ್ಲರೂ ಪ್ರಾಮಾಣಿಕವಾಗಿ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡುವಂತೆ ಕೋರಿದರು.

ಮಾಜಿ ಶಾಸಕ ಮೋಹನರಾವ್ ಶಹಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗ್ರಾಹಕರು ಮತ್ತು ಸಿಬ್ಬಂದಿ ವರ್ಗ ಒಂದೇ ಗಾಡಿಯ ಎರಡು ಚಕ್ರಗಳಿಂದ್ದಂತೆ. ಎಲ್ಲರು ಒಂದಾಗಿ ನಡೆದರೇ ಮಾತ್ರ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕಲ್ಲಪ್ಪಣ್ಣ ಮಗೆಣ್ಣವರ ಅವರು ಹತ್ತಾರು ವರ್ಷಗಳ ಹಿಂದೆ ಶ್ರೀ ಲಕ್ಷ್ಮೀ ಸೌಹಾರ್ದ ಸಂಘವನ್ನು ಪ್ರಾರಂಭಿಸಿದ್ದು, ಈಗ ಸುಮಾರು 30ಕ್ಕೂ ಅಧಿಕ ಶಾಖೆಗಳನ್ನು ಪ್ರಾಂಭಿಸಿ ನೂರಾರು ಯುವಕರಿಗೆ ನೌಕರಿಯನ್ನು ಕೊಟ್ಟಿದ್ದು, ಲಕ್ಷಾಂತರ ಜನರಿಗೆ ಆರ್ಥಿಕವಾಗಿ ಶಾಲ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವರ ಈ ಸಂಸ್ಥೆ ನೂರಾರು ಶಾಖೆಗಳನ್ನು ಹೊಂದಲಿ ಎಂದು ಶುಭ ಕೋರಿದರು.

ಶೇಗುಣಶಿ ವಿರಕ್ತ ಮಠದ ಡಾ.ಮಹಾಂತದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಕಾಂಬಳೆ, ಶ್ರೀಶೈಲ ಹಳ್ಳೋಳ್ಳಿ, ಸತೀಶ ಮಗೆಣ್ಣವರ ಮಾತನಾಡಿದರು.ಈ ವೇಳೆ ಸ್ಥಳೀಯ ಶಾಖೆಯ ಅಧ್ಯಕ್ಷ ಬಾಹುಬಲಿ ಟೋಪಗಿ, ಉಪಾಧ್ಯಕ್ಷ ಅಶೋಖ ಹುಗ್ಗಿ, ಸಲಹಾ ಸಮಿತಿ ಸದಸ್ಯರಾದ ಎ.ಜಿ.ಹಳ್ಳಿ, ಶೀತಲ ಯರಂಡೋಲಿ, ಧೋಂಡಿಬಾ ಅಟಪಟಕರ, ಬಾಬಾಸಾಬ್‌ ಬೋರಗಾಂವೆ, ಬಾಳಪ್ಪ ನರಟ್ಟಿ, ಕಾರ್ಯದರ್ಶಿ ವಿಶ್ವನಾಥ ಕೋಳಿ, ಐನಾಪುರ,ಉಗಾರ, ಯಡೂರ,ಚಂದೂರ, ಚಿಕ್ಕೋಡಿ, ಶಿರಗುಪ್ಪಿ, ಸದಲಗಾ, ಅಂಕಲಿ ಕುಡಚಿ ಸೇರಿದಂತೆ ಹಲವಾರು ಗ್ರಾಮಗಳಿಂದ ನೂರಾರು ಸಹಕಾರಿ ಬಂಧುಗಳು ಉಪಸ್ಥಿತರಿದ್ದರು. ಧರಿಖಾನ ಹರಳೆ ಕಾರ್ಯಕ್ರಮ ನಿರ್ವಹಿಸಿದರು.

ಕೋಟ್‌..

ಆಡಳಿತ ಮಂಡಳಿ, ಗ್ರಾಹಕರು ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ನಡೆದುಕೊಂಡರೇ ಆರ್ಥಿಕ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ಶ್ರೀ ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘವೇ ಉತ್ತಮ ನಿದರ್ಶನ.

ರಾಜು ಕಾಗೆ, ಶಾಸಕರು.ಆರ್ಥಿಕವಾಗಿ ಸದೃಢ ಇದ್ದರವರು ಹಣವನ್ನು ತಂದು ಇಡಬೇಕು. ಕಷ್ಟದಲ್ಲಿದ್ದವರು ಸಾಲ ಪಡೆದು ತನ್ನ ತೊಂದರೆಯನ್ನು ನಿವಾರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಸಸ್ಥೆಯನ್ನು ಪ್ರಾರಂಭಿಸಿದ್ದೇನೆ. ಎಲ್ಲರೂ ಪ್ರಾಮಾಣಿಕವಾಗಿ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡಬೇಕು.

ಕಲ್ಲಪ್ಪಣ್ಣ ಮಗೆಣ್ಣವರ, ಸಂಸ್ಥಾಪಕ ಅಧ್ಯಕ್ಷರು.

Share this article