ಸ್ವಾರ್ಥಕ್ಕಾಗಿ ಬದುಕದೆ ದೇಶದ ಪ್ರಗತಿಗಾಗಿ ಶ್ರಮಿಸಿ :ಮುಖ್ಯಾಧಿಕಾರಿ ಜಿ.ಪ್ರಕಾಶ್

KannadaprabhaNewsNetwork |  
Published : Aug 16, 2024, 12:57 AM IST
15 ಬೀರೂರು 3ದೇಶ ಭಕ್ತಿಯನ್ನು ತೋರುವಂತೆ ಅಂಗವಿಕಲನಿAದ ಧ್ವಜವಂದನೆ ಸ್ವೀಕರಿಸಿದ ಮುಖ್ಯಾಧಿಕಾರಿ | Kannada Prabha

ಸಾರಾಂಶ

ಬೀರೂರು, ಭಾರತ ಇಂದು ಸರ್ವರೀತಿಯಲ್ಲಿ ಪ್ರಗತಿಯತ್ತ ಹೆಜ್ಜೆಯಿಡುತ್ತಿದೆ. ಇದಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟು ತಮ್ಮ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಯೋಧರ ಶ್ರಮ ಹಾಗೂ ಅವರ ಕನಸು ಸಾಕಾರಗೊಳ್ಳುವ ರೀತಿ ಸ್ವಾರ್ಥಕ್ಕಾಗಿ ಬದುಕದೆ ದೇಶದ ಪ್ರಗತಿಗಾಗಿ ಶ್ರಮಿಸೋಣ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್ ತಿಳಿಸಿದರು.

ಕೆಎಲ್.ಕೆ. ಕಾಲೇಜು ಮೈದಾನ ಪ್ರಧಾನ ವೇದಿಕೆಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ

ಕನ್ನಡಪ್ರಭ ವಾರ್ತೆ, ಬೀರೂರುಭಾರತ ಇಂದು ಸರ್ವರೀತಿಯಲ್ಲಿ ಪ್ರಗತಿಯತ್ತ ಹೆಜ್ಜೆಯಿಡುತ್ತಿದೆ. ಇದಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟು ತಮ್ಮ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಯೋಧರ ಶ್ರಮ ಹಾಗೂ ಅವರ ಕನಸು ಸಾಕಾರಗೊಳ್ಳುವ ರೀತಿ ಸ್ವಾರ್ಥಕ್ಕಾಗಿ ಬದುಕದೆ ದೇಶದ ಪ್ರಗತಿಗಾಗಿ ಶ್ರಮಿಸೋಣ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್ ತಿಳಿಸಿದರು. ಪಟ್ಟಣದ ಕೆಎಲ್‌ಕೆ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಗುರುವಾರ ಅದ್ಧೂರಿಯಾಗಿ ನಡೆದ 78ನೇ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಸಂದೇಶ ವಾಚನ ನೀಡಿ ಮಾತನಾಡಿದರು. ನಾವಿಂದು ನೆಮ್ಮದಿಯ ಸಹಬಾಳ್ವೆ ನಡೆಸಲು ದೇಶ ಕಾಯುತ್ತಿರುವ ಯೋಧರು ಮುಖ್ಯವಾಗಿ ಕಾರಣೀಭೂತರಾಗಿದ್ದಾರೆ. ನಾವು ನಮ್ಮಗಳ ಸ್ವಾರ್ಥಕ್ಕಾಗಿ ಬಾಳದೆ ದೇಶ ಮತ್ತು ದೇಶದ ಪ್ರಗತಿಗಾಗಿ ಶ್ರಮವಹಿಸಿ ಕಾಳಜಿವಹಿಸಿ ದುಡಿದಲ್ಲಿ ದೇಶವು ಅಭಿವೃದ್ಧಿ ಪಥದತ್ತ ಸಾಗಿ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಸೇರುವುದರಲ್ಲಿ ಸಂಶಯವಿಲ್ಲ. ದೇಶ ಪ್ರಗತಿಪಥಯತ್ತ ಸಾಗುತ್ತಿದ್ದು ಯುವಪೀಳಿಗೆ ರಾಷ್ಟ್ರಾಭಿಮಾನ ಹೊಂದಿ ಗುರಿಸಾಧನೆ ಹೆಜ್ಜೆಯಿಡಬೇಕೆಂದರು.

ಗಾಂಧೀಜಿ ಕಂಡ ಕನಸಿನಂತೆ ಗ್ರಾಮೀಣ ಅಭಿವೃದ್ಧಿ ಇಂದಿನ ಅಗತ್ಯ. ಪಟ್ಟಣದ ಪ್ರಗತಿ ಮೊದಲ ಆದ್ಯತೆಯಾಗಿದ್ದು ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ , ನೀರಿನ ಸಂರಕ್ಷಣೆ ಹಾಗೂ ಮಿತಬಳಕೆ, ಮಳೆಕೊಯಿಲು ಗುರಿ ಮೂಲಕ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕಾರ್ಯ ನಿರ್ವಹಿಸಲು ಪುರಸಭೆ ಶ್ರಮಿಸುತ್ತಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಭಾರತ ರಾಷ್ಟ್ರದ ಪ್ರಜೆಗಳಾದ ನಾವು ರಾಷ್ಟ್ರದ ಏಳಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು. ಶ್ರೇಷ್ಠ ಮಹಾಮಹೀಮರಿಗೆ, ಬಲಿದಾನ ನೀಡಿದ ಹೋರಾಟಗಾರರನ್ನು ಸ್ಮರಿಸುವ ದಿನವಾಗಿದ್ದು, ಪ್ರಜಾಪ್ರಭುತ್ವದಡಿ ಬದುಕು ಸಾಗಿಸುತ್ತಿರುವ ನಾವು ಪ್ರಾಮಾಣಿಕವಾಗಿ ಎಲ್ಲರನ್ನೂ ಸಮಾನ ಅಂತರದಿಂದ ಕಾಣಬೇಕು. ಎಲ್ಲರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕು ಸಾಗಿಸಬೇಕಾಗಿದೆ ಎಂದರು.ವೃತ್ತ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ದೇಶದ ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ದುಡಿಯೋಣ ಎಂದರು.ಪಟ್ಟಣ ವ್ಯಾಪ್ತಿಯ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರ ಮೆಚ್ಚುಗೆಗೆ ಪಾತ್ರರಾದರು. ಪೋಲಿಸ್ ಇಲಾಖೆ ಯಿಂದ ಅತ್ಯುತ್ತಮ ಪಥಸಂಚಲನ ನಡೆಸಿದ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರೆ, ಪುರಸಭೆಯಿಂದ ಸಾಧಕರು, ಪತ್ರಕರ್ತರು, ಗಣ್ಯರನ್ನು ಗೌರವಿಸಲಾಯಿತು.ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಪಿಎಸೈ ಸಜಿತ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಬಿ.ಕೆ.ಶಶಿಧರ್. ಸದಸ್ಯರಾದ ಎಲೆ ರವಿಕುಮಾರ್, ಸಮಿಉಲ್ಲಾ, ಜ್ಯೋತಿ ವೆಂಕಟೇಶ್, ಗಂಗಾಧರ್, ಜ್ಯೋತಿ ಕುಮಾರ್, ರೋಹಿಣಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಬಿ.ಆರ್.ಸಿ ಶೇಖರಪ್ಪ, ಪುರಸಭಾ ಸಿಬ್ಬಂದಿ ದೀಪಕ್, ಗಿರಿರಾಜ್, ಜಯಮ್ಮ, ಶಿಲ್ಪ, ಸ್ವರೂಪ, ಚೆಲುವರಾಜ್ ಮತ್ತು ಶಿಕ್ಷಕರು , ಪಟ್ಟಣ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.15ಬೀರೂರು1 ಬೀರೂರಿನ ಕೆಎಲ್‌ಕೆ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ 78 ನೇ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್ ಧ್ಯಜಾರೋಹಣ ನಡೆಸಿದರು.

15 ಬೀರೂರು 3ದೇಶ ಭಕ್ತಿಯನ್ನು ತೋರುವಂತೆ ಅಂಗವಿಕಲನಿAದ ಧ್ವಜವಂದನೆ ಸ್ವೀಕರಿಸಿದ ಮುಖ್ಯಾಧಿಕಾರಿ

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ