ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿ ಮಾಡಿ

KannadaprabhaNewsNetwork |  
Published : Mar 04, 2025, 12:38 AM IST
ಪಾಲಬಾವಿ: | Kannada Prabha

ಸಾರಾಂಶ

ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಲಬಾವಿ

ನಮ್ಮನ್ನು ಹೆತ್ತು-ಹೊತ್ತು, ಸಾಕಿ ಸಲುಹಿದ ತಂದೆ-ತಾಯಿಯೇ ನಿಜವಾದ ದೇವರುಗಳು. ತಂದೆ-ತಾಯಿಯಾಗಳ ಸೇವೆ ಮಾಡಿದರೆ ದೇವರ ಪೂಜೆ ಮಾಡಿದಂತೆ. ತಂದೆ-ತಾಯಿ, ಗುರು -ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಇಂಚಗೇರಿ ಸಂಪ್ರದಾಯದ ಸದ್ಗುರು ಶಶಿಕಾಂತ ಪಡಸಲಗಿ ಗುರೂಜಿ ಹೇಳಿದರು.

ಸಮೀಪದ ಕಪ್ಪಲಗುದ್ದಿ ಗ್ರಾಮದ ಸ್ವಾಮಿ ವಿವೇಕಾನಂದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2024-25ನೇ ಸಾಲಿನ 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಕೃಷಿಕ, ಸೈನಿಕ, ಶಿಕ್ಷಕರನ್ನು ನಾವುಗಳು ಸಮಾಜದಲ್ಲಿ, ಗೌರವದಿಂದ ಕಾಣಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಯಮನಪ್ಪ ಮೆಳವಂಕಿ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಶಿವಕುಮಾರ ಬಂಗಿ, ಗ್ರಾಪಂ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಸದಸ್ಯರಾದ ಲಕ್ಷ್ಮಣ ಕೂಡಲಗಿ ಪುಟ್ಟುಗೌಡ ನಾಯಿಕ, ಮಂಜು ಮೇತ್ರಿ, ಗುರುಪಾದ ಚೌಗಲಾ, ಗ್ರಾಪಂ ಮಾಜಿ ಉಪಾಧ್ಯಕ್ಷ, ಸಂಸ್ಥೆಯ ಕಾರ್ಯದರ್ಶಿ ಬರಮಪ್ಪ ಭಾಗೂಜಿ, ಸಿದ್ದಪ್ಪ ಭದ್ರಶೆಟ್ಟಿ, ಮಹಾದೇವ ನಾಯಿಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾದೇವ ಅಂಗಡಿ, ತಾಲೂಕು ರೈತ ಸಂಘದ ಅಧ್ಯಕ್ಷ ರಮೇಶ ಕಲ್ಲಾರ, ಈರಪ್ಪ ಬಂಗಿ, ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ, ಕಾಂಗ್ರೆಸ್ ಪಕ್ಷದ ಕುಡಚಿ ಮತಕ್ಷೇತ್ರದ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶ್ರೀಶೈಲ ಕೂಡಲಗಿ, ಈರಪ್ಪ ಚೌಗಲಾ, ಗುರು ಬಂಗಿ, ಭೀಮಪ್ಪ ಮಂಟೂರ, ಗಂಗಪ್ಪ ಐದಮನಿ, ಭಗವಂತ ಖಾನಗೊಂಡ, ಮಹಾದೇವ ಬಳಗಾರ, ಗಿರಿಮಲ್ಲ ಕಲ್ಲಾರ, ಮಾರುತಿ ಬಾಳಿಗಾರ, ತುಕ್ಕರಾಮ ಯಡ್ರಾಂವಿ, ಶಂಕರ ಖಾನಗೌಡ ಇತರರು ಇದ್ದರು.ಶಿಕ್ಷಕಿ ಶಿವಕ್ಕ ನಾಯಿಕ, ಸಂಗೀತಾ ಮಾದರ, ಸಾವಿತ್ರಿ ಪೂಜೇರಿ, ಪಲ್ಲವಿ ಬಳಗಾರ, ಮಂಜುಳಾ ಹುಬರಟ್ಟಿ, ವೈಶಾಲಿ ದೇವರಮನಿ ಇತರರು ಇದ್ದರು. ಶಿಕ್ಷಕಿ ಮಹಾದೇವಿ ಸ್ವಾಗತಿಸಿದರು. ಸಹ ಶಿಕ್ಷಕ ಶಿವಲಿಂಗ ಕರಗಣ್ಣಿ ನಿರೂಪಿಸಿದರು. ಪ್ರಧಾನಗುರು ರಂಗನಾಥ ಮಾಸಣ್ಣವರ ಪ್ರಸ್ತಾಪವಾಗಿ ಮಾತನಾಡಿದರು. ಚೇತನ ಗಲಗಲಿ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ