ಮಹಿಳೆಯರ ಬಗ್ಗೆ ಅನುಕಂಪ ಬೇಡ ಅಂತಃಕರಣ ಇರಲಿ

KannadaprabhaNewsNetwork |  
Published : Oct 27, 2025, 12:00 AM IST
ಪೋಟೋ, 25ಎಚ್‌ಎಸ್‌ಡಿ3: ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ಶ್ರೀ ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಕೆ ಎಸ್‌ ನವೀನ್ ಉದ್ಗಾಟಿಸಿದರು. | Kannada Prabha

ಸಾರಾಂಶ

ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಹಿಳೆಯರ ಮೇಲೆ ಕೇವಲ ಅನುಕಂಪ ತೋರಿಸಿದರೆ ಸಾಲದು ಅಂತಃಕರಣ ತೋರಿಸಿ ಅಭಿವೃದ್ಧಿಯ ಪತದತ್ತ ಕೊಂಡೊಯ್ಯುವ ಜವಾಬ್ದಾರಿ ಪುರುಷರ ಮೇಲಿದೆ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ಶ್ರೀ ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ದೊಡ್ಡದಿದೆ ಮಹಿಳೆಯರಿಗೆ ಸ್ಥಾನಮಾನ ಅಧಿಕಾರ ಕೊಡುವಾಗ ಅನುಮಾನಿಸುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಬಸವಾದಿ ಶರಣರಂತೆ ಸಂವಿಧಾನದಂತೆ ಶೇ.50ರಷ್ಟು ಮೀಸಲಾತಿ ಕೊಡಬೇಕಾದ ನಾವು ಶೇ.33 ಕೊಡಲು ತಾರತಮ್ಯ ಮಾಡುತ್ತಿರುವುದು ಸಂವಿಧಾನಕ್ಕೆ ಮತ್ತು ಹೆಣ್ಣಿಗೆ ಮಾಡಿದ ದ್ರೋಹ, ಹಾಗಾಗಿ ಆಡಳಿತರೂಡ ಪಕ್ಷಗಳು ಸ್ತ್ರೀ ಸಬಲತೆಗಾಗಿ ಮಹಿಳಾ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಲು ರಾಜಕೀಯ ಇಚ್ಛಾಶಕ್ತಿ ಬೇಕು ಆದರೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಮಹಿಳಾ ಮೀಸಲಾತಿ ಕಡತ ಕುಂಟುತ್ತ ಸಾಗಿದೆ ಎಂದರು.

ಒಂದು ಕುಟುಂಬ ಒಂದು ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮತ್ತು ತ್ಯಾಗ ಅಪಾರವಾದದ್ದು ಅವರ ತ್ಯಾಗವನ್ನು ಸ್ಮರಿಸಿ ಗೌರವದಿಂದ ನಡೆಸಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ ಇನ್ನು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ಎನ್ನುವ ಮೂಲಕ ಹೆಣ್ಣಿಗೆ ಶ್ರೇಷ್ಠತೆಯನ್ನು ಮಾನ್ಯತೆಯನ್ನು ನೀಡಿದ್ದು ವಚನ ಸಾಹಿತ್ಯ ಮತ್ತು ಶರಣರು ಗುಡ್ಡದ ನೇರಲಕೆರೆ ಗ್ರಾಮ ಸುಸಂಸ್ಕೃತ ಮತ್ತು ಸಾಂಸ್ಕೃತಿಕ ವಾತಾವರಣ ಇರುವ ಗ್ರಾಮ ಇಲ್ಲಿನ ಮಹಿಳೆಯರ ಹೋರಾಟದ ಪ್ರತಿಫಲವಾಗಿ ಮಧ್ಯಪಾನವನ್ನು ಮಾರುವುದು ಕಠಿಣವಾಗಿದೆ. ಈ ಗ್ರಾಮದ ಮಹಿಳೆಯರಂತೆ ಎಲ್ಲಾ ಗ್ರಾಮದ ಮಹಿಳೆಯರು ಜಾಗೃತರಾದರೆ ಮಧ್ಯಪಾನ ಮಾರುವುದು ಗ್ರಾಮಗಳಲ್ಲಿ ನಿಲ್ಲುತ್ತದೆ ಇತ್ತೀಚಿಗೆ ಮಧ್ಯಪಾನದ ಜೊತೆ ಜೊತೆಯಲಿ ಗುಟ್ಕಾ ಹಾವಳಿ ಡ್ರಗ್ಸ್ ಮಾಫಿಯಾ ಆನ್ಲೈನ್ ಗೇಮಿಂಗ್ ಯುವಕರನ್ನು ದಾರಿ ತಪ್ಪಿಸುತ್ತಿದೆ ಕುಟುಂಬದ ಹಿರಿಯರು ಇವೆಲ್ಲವನ್ನೂ ಗಮನಿಸಿ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ಹೇಳಿದರು.

ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಮಾತನಾಡಿ, ಬಾಲ್ಯದಿಂದ ಮುಪ್ಪಿನವರೆಗೂ ಹೆಣ್ಣಿನ ಆಶ್ರಯ ಹಾರೈಕೆ ಬೆಲೆಕಟ್ಟಲಾಗದು ಹಾಗಾಗಿ ಹೆಣ್ಣನ್ನು ಗೌರವರಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯ ನಮ್ಮದಾಗ ಬೇಕೆಂದು ತಿಳಿಸಿದರು

ಮುಖ್ಯ ಅತಿಥಿಯಾಗಿ ಡಿ ಓ ಮೊರಾರ್ಜಿ, ಗ್ರಾಪಂ ಮಾಜಿ ಸದಸ್ಯ ಮಂಜುನಾಥ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ದ್ಯಾಮಣ್ಣ ಗ್ರಾಮದ ಎಂಎಲ್ ನಾಗರಾಜ್ ಎರಗುಂಟಪ್ಪ ಶಿಕ್ಷಕರಾದ ಪ್ರಕಾಶ್ ಮುಖಂಡರಾದ ರಮೇಶ್ ಹಾಗೂ ಸುತ್ತಮುತ್ತ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!