ಇಂದು ಸಮಾಜದಲ್ಲಿ ಹುಟ್ಟುಹಬ್ಬ ಆಚರಣೆ ಸಾಮಾನ್ಯವಾಗಿದ್ದು, ಪರಿಸರವನ್ನು ಪ್ರೀತಿಸಿ, ಅದರೊಂದಿಗೆ ಬದುಕಲು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಪರಿಸರ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ತಿಳಿಸಿದರು.
ನಮ್ಮದು ಅಮೇಜಾನ್ ಕಾಡಲ್ಲ, ಕುರುಚಲು ಪ್ರದೇಶ. ಆ ಕಾರಣದಿಂದ ಇಲ್ಲಿ ಬೆಂಕಿ ಹಚ್ಚುವ ಕೆಲಸ ಬೇಡ, ನಮ್ಮ ನಿರ್ಧಾರಗಳು ಬಹು ಸಂತತಿಯನ್ನು ನಾಶ ಮಾಡುವುದು ಬೇಡ, ಕಾಡಿಗೆ ಬೆಂಕಿ ಇಡುವ ಮೂಲಕ ನಮಗೆ ನಾವೇ ಅಂಧಕಾರಕ್ಕೆ ಹೋಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಡಿವೈಎಸ್ಪಿ ಶ್ರೀನಿವಾಸ್ ಮಾತನಾಡಿ, ಪೊಲೀಸ್ ಕೇಸ್ ಗಳಿಗಿಂತಲೂ ಅರಣ್ಯ ಇಲಾಖೆಯ ಕಾನೂನು ಕಠಿಣ, ಅದರಲ್ಲೂ ವನ್ಯಜೀವಿಗಳ ಹರಣ ಮತ್ತು ಅದರ ಸಾಗಾಟ ಜೀವಮಾನದಲ್ಲೇ ಸಂಕಷ್ಟಕ್ಕೆ ಸಿಲುಕಿಸುತ್ತದೆ, ಇಲ್ಲಿ ಬಡ ಜನರೇ ಬೇಟೆಗಾರರಾಗಿ ಶ್ರೀಮಂತರಿಗೆ ಆಹಾರ ಕೊಟ್ಟು ತಮ್ಮ ಬದುಕನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಪ್ರವಾಸ ಸಮಿತಿಯ ಜಯಕುಮಾರ್ ಮಾತನಾಡಿ, ನಾವು ಪ್ರವಾಸ ಮಾಡುತ್ತೇವೆ. ಕಾಡಿನಿಂದ ನಾಡಿನಂಚಿಗೆ ಬರುವ ಪ್ರಾಣಿಗಳಿಗೂ ಹಿತ. ನಮ್ಮಂತೆಯೇ ಯಾವುದೇ ಪ್ರಾಣಿ, ಪಕ್ಷಿ ಮತ್ತು ನೆಲದಲ್ಲೇ ಸಣ್ಣ ಸಣ್ಣ ಹಾವು, ಚೇಳುಗಳಿರಲಿ, ಅವು ಪ್ರಕೃತಿಯ ಒಡನಾಡಿಗಳು, ಅವು ಮನುಷ್ಯರಂತೆ ಕ್ರೂರಿಗಳಲ್ಲ ಎಂಬುದನ್ನು ನಾವು ಮೊದಲು ಅರಿತು ಅವುಗಳು ಜೀವಿಸಲು ಅವಕಾಶ ಮಾಡಿಕೊಡಬೇಕಿದೆ ಎಂದರು.
ಅಕ್ಕಿ ವೆಂಕಟೇಶ್ ಮಾತನಾಡಿದರು.ಕೆರಳಾಳು ಸಂದ್ರ ಕನಕಪುರ ಜಯರಾಮ್. ರಾಜು. ಲಕ್ಷ್ಮೀಕಾಂತ್. ಶ್ರೀಧರ್. ಕೃಷಿ ವೆಂಕಟೇಶ್. ದಾಸಪ್ಪ. ರಾಜೇಶ್. ವೇಣುಗೋಪಾಲ್. ಮಹದೇವ್ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.