ರಕ್ತದಾನ ಮಾಡಿ ಜೀವ ಉಳಿಸಿ: ಸೋಮಶೇಖರ ಶಿವಾಚಾರ್ಯ ಸ್ವಾಮಿ

KannadaprabhaNewsNetwork | Published : Jun 14, 2024 1:03 AM

ಸಾರಾಂಶ

ದಾನದಲ್ಲಿ ರಕ್ತದಾನವೇ ಶ್ರೇಷ್ಠವಾಗಿದ್ದು, ಯುವಕರು ಕಡ್ಡಾಯವಾಗಿ ರಕ್ತದಾನಕ್ಕೆ ಮುಂದಾಗಬೇಕಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಬೇಲೂರಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಶಿಬಿರ

ಬೇಲೂರು: ದಾನದಲ್ಲಿ ರಕ್ತದಾನವೇ ಶ್ರೇಷ್ಠವಾಗಿದ್ದು, ಯುವಕರು ಕಡ್ಡಾಯವಾಗಿ ರಕ್ತದಾನಕ್ಕೆ ಮುಂದಾಗಬೇಕಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಐತಿಹಾಸಿಕ ಹಾಗೂ ಮಠ ಪರಂಪರೆಯ ತಾಣ ಚಿಲ್ಕೂರು ಗ್ರಾಮದಲ್ಲಿ ಹಮ್ಮಿಕೊಂಡ ಹಳ್ಳಿಧ್ವನಿ ಕಾರ್ಯಕ್ರಮದ ಹಿನ್ನೆಲೆ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತವು ಕೃತಕವಾಗಿ ತಯಾರಿಸಲಾಗದ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ರಕ್ತದಾನದಿಂದ ಮನುಷ್ಯನಿಗೆ ಹತ್ತಾರು ಪ್ರಯೋಜನಗಳಿವೆ, ಉತ್ತಮ ಆರೋಗ್ಯವನ್ನು ಪಡೆಯಬಹುದು, ತಪ್ಪು ಕಲ್ಪನೆಗಳಿಂದ ಹೊರ ಬಂದು ರಕ್ತದಾನ ಮಾಡಬೇಕು, ತಾವು ಹಲವು ಭಾರಿ ರಕ್ತದಾನ ಮಾಡಿದ ಬಗ್ಗೆ ತಿಳಿಸಿದ ಅವರು, ಇಂದಿನ ಹಳ್ಳಿಧ್ವನಿ ಕಾರ್ಯಕ್ರಮದ ಜತೆಗೆ ಅಡಗೂರಿನ ಯೋಗ ಶಿಕ್ಷಕ ಚೇತನ್ ಗುರೂಜಿ ತಂಡ ರಕ್ತದಾನ ಏರ್ಪಡಿಸಿದ್ದು ಶ್ಲಾಘನೀಯ ಎಂದು ಹೇಳಿದರು.

ಅಡಗೂರು ಯೋಗ ಶಿಕ್ಷಕ ಚೇತನ್ ಗುರೂಜಿ ಮಾತನಾಡಿ, ಅಧುನಿಕ ಕಾಲಘಟ್ಟದ ಬದಲಾದ ಜೀವಶೈಲಿಯಿಂದ ಮನುಷ್ಯನಿಗೆ ಹತ್ತಾರು ಅಧುನಿಕ ಕಾಯಿಲೆಗಳು ಕಾಣಿಕೆ ರೂಪದಲ್ಲಿ ಬರುತ್ತಿವೆ. ಇದಕ್ಕೆ ಕಾರಣ ಪ್ರಮುಖವಾಗಿ ಆಹಾರ ಪದ್ದತಿ ಹಾಗೂ ಕಾಯಕವಿಲ್ಲದ ಬದುಕು, ವಿಶೇಷವಾಗಿ ಒತ್ತಡದ ಜೀವನ ಆನೇಕ ರೋಗಳಿಗೆ ಮುನ್ನುಡಿ ಬರೆಯುತ್ತಿದೆ. ಇತ್ತೀಚಿಗೆ ಕಾಣಿಸಿಕೊಳ್ಳಿತ್ತಿರುವ ಡೆಂಘೀ ಸಾಂಕ್ರಾಮಿಕ ಕಾಯಿಲೆ ಬಿಳಿರಕ್ತದ ಕೊರತೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸದೃಡ ಆರೋಗ್ಯವಂತರು ಹೆಚ್ಚು- ಹೆಚ್ಚು ರಕ್ತದಾನಕ್ಕೆ ಮುಂದಾಗಬೇಕಿದೆ. ಆಗ ಮಾತ್ರ ರಕ್ತದ ಕೊರೆತೆಯಲ್ಲಿ ನೀಗಿಸಲು ಸಾದ್ಯವಾಗುತ್ತದೆ. ರಕ್ತದಾನದಿಂದ ಹಲವು ಗಂಭೀರ ಕಾಯಿಲೆಗಳಿಂದ ರಕ್ಷಿಸುಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಹಾಸನ ಆಕಾಶವಾಣಿ ಕೃಷಿರಂಗ ಮುಖ್ಯಸ್ಥ ಡಾ.ವಿಜಯ ಅಂಗಡಿ, ಮಧಸೂಧನ್, ಬೇಲೂರು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯಕುಮಾರ್, ಪ್ರಗತಿಪರ ರೈತರಾದ ಗಿಡ್ಡೇಗೌಡ, ಕುಮಾರಸ್ವಾಮಿ, ರುದ್ರೇಶ್, ಪ್ರತಾಪ್, ಗ್ರಾಮ ಪಂಚಾಯಿತಿ ಸದಸ್ಯ ಸಚ್ಚೀನ್ ಸೇರಿ ಮುಂತಾದವರು ಹಾಜರಿದ್ದರು.

Share this article