ರಕ್ತದಾನ ಮಾಡಿ ಮಾನವೀಯತೆ ಎತ್ತಿಹಿಡಿಯಿರಿ: ಎಂ.ಎನ್.ಪಾಟೀಲ

KannadaprabhaNewsNetwork |  
Published : Nov 19, 2024, 12:49 AM IST
ಸ್ಥಳೀಯ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ನಿಮಿತ್ತ ಹಾಲುಮತ ಸಮಾಜ ಬಾಂಧವರ ಮತ್ತು ಬಾಡಗಂಡಿಯ ಎಸ್.ಆರ್.ಪಾಟೀಲ ಮೆಡಿಕಲ್‌ ಕಾಲೇಜ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

ಬೀಲಗಿ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ನಿಮಿತ್ತ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಯುವ ಜನತೆ ಸ್ವಯಂ ಪೇರಿತವಾಗಿ ರಕ್ತದಾನ ಮಾಡಿ ಮಾನವೀತೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದು ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ(ರಿ) ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಹೇಳಿದರು.

ಸ್ಥಳೀಯ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ನಿಮಿತ್ತ ಹಾಲುಮತ ಸಮಾಜ ಬಾಂಧವರ ಮತ್ತು ಬಾಡಗಂಡಿಯ ಎಸ್.ಆರ್.ಪಾಟೀಲ ಮೆಡಿಕಲ್‌ ಕಾಲೇಜ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ತದಾನ ಮಹಾಪುಣ್ಯದ ದಾನದಲ್ಲಿ ಒಂದಾಗಿದೆ. ಒಂದು ರಕ್ತದಾನ ಎರಡು ಜೀವ ಉಳಿಸಬಹುದು. ಗಂಡು, ಹೆಣ್ಣೆಂಬ ಭೇದ, ಭಾವವಿಲ್ಲದೆ 18 ರಿಂದ 65 ವರ್ಷದ ಒಳಗಿರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ತಿಳಿಸಿದರು.

ಹಟ್ಟಿ ಚಿನ್ನದಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದದಾವಾಗಿದೆ. ಒಬ್ಬ ವ್ಯಕ್ತಿ ರಕ್ತದಾನ ಮಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತ್ತಾಗುತ್ತದೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಡುವುದರಿಂದ ಅಪಘಾತಕ್ಕೆ ಒಳಗಾದ ಕುಟುಂಬದ ಜೀವ ಉಳಿಸಿದಂತ್ತಾಗುತ್ತದೆ ಎಂದರು.

ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ದೇಹಕ್ಕೆ ಚೈತನ್ಯ ಬರಲಿದೆ. ಅಫಘಾತ ಹಾಗೂ ಇತರ ಘಟನೆಗಳು ನಡೆದಾಗ ರಕ್ತ ಅವಶ್ಯವಿರುವುದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಿ ಇನ್ಮೊಂದು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಆರೋಗ್ಯವಂತ ಯುವಕರು ರಕ್ತದಾನ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್‌ ವಿನೋದ ಹತ್ತಳ್ಳಿ, ಹಿರಿಯರಾದ ಸತ್ಯಪ್ಪ ಮೇಲ್ನಾಡ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಪಡಿಯಪ್ಪ ಕರಿಗಾರ, ಪತ್ರಕರ್ತ ಕಿರಣ ಬಾಳಾಗೋಳ, ಎಸ್.ಆರ್.ಪಾಟೀಲ ಮೆಡಿಕಲ್‌ ಕಾಲೇಜ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಭಾವತಿ ಮುಗಳಕೊಡ, ಡಾ.ನವಿನ, ಲ್ಯಾಬ್ ಸೂಪರ್ವೈಜರ್‌ ರವೀಂದ್ರಘಂಟಿ, ಪ್ರವೀಣ.ಎಂ, ಜನರಲ್ ಸೂಪರ್ವೈಜರ್ ಸತೀಶ ರಾಠೋಡ ಸೇರಿದಂತೆ ಅನೇಕರು ಇದ್ದರು.

ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಸಾಹೇಬರು ಈ ಭಾಗದ ಜನರಿಗೆ ಆರೋಗ್ಯವಾಗಿ ಇರಬೇಕು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಬಾಡಗಂಡಿಯಲ್ಲಿ 630 ಹಾಸಿಗೆವುಳ್ಳ ಸುರ್ಸಜಿತ ಹೈಟೆಕ್‌ ಆಸ್ಪತ್ರೆ ತೆರೆದು ಉತ್ತರ ಕರ್ನಾಟಕ ಆರೋಗ್ಯ ಸಂಜೀವಿನಯಾಗಿದ್ದಾರೆ.

ಎಂ.ಎನ್.ಪಾಟೀಲ, ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ(ರಿ) ಸಂಸ್ಥೆಯ ಕಾರ್ಯದರ್ಶಿ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ