ಸಾವಯವ ಗೊಬ್ಬರ ಬಳಸಿ ಮುಂದಿನ ಪೀಳಿಗೆಗೆ ಭೂಮಿ ಕೊಡುಗೆ ನೀಡಿ: ಡಾ.ನವೀನ್ ಲಾಯ್ಡ್ ಮಿಸ್ಕಿತ್

KannadaprabhaNewsNetwork |  
Published : Jan 31, 2026, 01:30 AM IST
೩೦ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಗ್ರೀನ್ ಬಯೋಟೆಕ್ ಸಂಸ್ಥೆ ವಿವಿಧ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರುಇಂದಿನ ಕೃಷಿಕರು, ಬೆಳೆಗಾರರು ಜೈವಿಕ, ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿ ಫಲವತ್ತತೆ ಉಳಿಸಿ ಮುಂದಿನ ಪೀಳಿಗೆಗೆ ಭೂಮಿ ಕೊಡುಗೆ ನೀಡಬೇಕಿದೆ ಎಂದು ಗ್ರೀನ್ ಬಯೋಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.

ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಇಂದಿನ ಕೃಷಿಕರು, ಬೆಳೆಗಾರರು ಜೈವಿಕ, ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿ ಫಲವತ್ತತೆ ಉಳಿಸಿ ಮುಂದಿನ ಪೀಳಿಗೆಗೆ ಭೂಮಿ ಕೊಡುಗೆ ನೀಡಬೇಕಿದೆ ಎಂದು ಗ್ರೀನ್ ಬಯೋಟೆಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.ಪಟ್ಟಣದ ಗ್ರೀನ್ ಬಯೋಟೆಕ್ ಸಂಸ್ಥೆಯಿಂದ ಪಿಎಸಿಎಸ್, ಟಿಎಪಿಸಿಎಂಎಸ್, ಲ್ಯಾಂಪ್ಸ್ ಸಹಕಾರ ಸಂಘಗಳ ಸಿಬ್ಬಂದಿಗೆ ಆಯೋಜಿಸಿದ್ದ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಅನಗತ್ಯ ರಸಗೊಬ್ಬರ ಬಳಕೆ ಪರಿಣಾಮ ಭೂಮಿಯಲ್ಲಿ ತನ್ನ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಕೃಷಿಯಲ್ಲಿ ಹಲವು ಸಮಸ್ಯೆಗಳನ್ನು ನಾವುಗಳೇ ತಂದುಕೊಳ್ಳುತ್ತಿದ್ದೇವೆ. ಹಿಂದಿನ ಕಾಲದ ಪ್ರಕೃತಿ, ವಾತಾವರಣ ಎಲ್ಲರಿಗೂ ಪೂರಕವಾಗಿತ್ತು. ಆದರೆ ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ, ಅಧಿಕ ಬೆಳೆ ಆಸೆಯಿಂದ ವರ್ಷಕ್ಕೆ 3-4ಬಾರಿ ರಸಗೊಬ್ಬರವನ್ನು ಭೂಮಿ ನೀಡಿ ವಿಷಮಯ ಮಾಡುತ್ತಿದ್ದೇವೆ.

ಇದರಿಂದ ಮಣ್ಣು ನೈಜತೆ ಕಳೆದುಕೊಂಡರೆ ಅದರಲ್ಲಿನ ಜೀವವೇ ಕಳೆದುಹೋಗಲಿದೆ. ದೇಶದಲ್ಲಿ ಹಸಿರು ಕ್ರಾಂತಿ ಬಳಿಕ ರಸಗೊಬ್ಬರ ಬಳಕೆ ಹೆಚ್ಚಾಗಿ ಭೂಮಿಯ ಜೀವಾಣುಗಳ ಸಂಖ್ಯೆ ಶೇ.90ರಷ್ಟು ಕುಸಿತಗೊಂಡಿದೆ. ಇದು ಆತಂಕಕಾರಿ ವಿಷಯ. ಹವಾಮಾನದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದ್ದು, ಆಮ್ಲಜನಕ, ಇಂಗಾಲದ ಪ್ರಮಾಣಗಳು ತೀವ್ರವಾಗಿ ಕುಸಿತ ಗೊಂಡಲ್ಲಿ ಮುಂದೊಂದು ದಿನ ಭೂಮಿ ಮರುಭೂಮಿಯಂತಾಗುವ ಆತಂಕವೂ ಇದೆ.ಇತ್ತೀಚಿನ ದಿನಗಳಲ್ಲಿ ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಸಾರ ಕುಸಿತಗೊಂಡಿದೆ. ಈ ಹಿಂದೆ ಬಳಸಿದ ಕೆಲವು ರಾಸಾಯನಿಕಗಳು ಪ್ರಸ್ತುತ ನಿಷೇಧಿತವಾಗಿದ್ದರೂ ಸಹ ಅವುಗಳ ಅಂಶ ಇಂದಿಗೂ ಸಹ ನೀರು, ಮಣ್ಣಿನಲ್ಲಿ ಪರೀಕ್ಷೆ ವೇಳೆ ಕಂಡುಬರುತ್ತಿರುವುದು ಅದರ ಪರಿಣಾಮಗಳು ಎಂತಹುದಿದೆ ಎಂದು ತಿಳಿಯುತ್ತದೆ.

ಈ ಹಿನ್ನೆಲೆಯಲ್ಲಿ ಗ್ರೀನ್ ಬಯೋಟೆಕ್ ಸಂಸ್ಥೆ ರೈತರು ಸಂಪೂರ್ಣ ಜೈವಿಕ, ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಹಾಗೂ ತಮ್ಮ ಕೃಷಿ ಭೂಮಿಗಳಲ್ಲಿ ಜೀವಾಣುಗಳನ್ನು ಕಾಪಾಡಿಕೊಳ್ಳಲಿ ಎಂಬ ಉದ್ದೇಶದಿಂದ ಹಲವು ಜೈವಿಕ ಗೊಬ್ಬರವನ್ನು ಮಾರು ಕಟ್ಟೆಗೆ ಬಿಡುಗಡೆಗೊಳಿಸಿದೆ ಎಂದರು.ಸಂಸ್ಥೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಬಿ.ವಿ.ಸುಜಿತ್ ಮಾತನಾಡಿ, ಗ್ರೀನ್ ಬಯೋಟೆಕ್ ಸಂಸ್ಥೆ ಮೂರು ಉತ್ಪನ್ನ ಗಳಿಂದ ಆರಂಭಗೊಂಡು ಪ್ರಸ್ತುತ 150ಕ್ಕೂ ಅಧಿಕ ಸಾವಯವ, ಜೈವಿಕ ಗೊಬ್ಬರವನ್ನು ದೇಶ ಸೇರಿದಂತೆ ವಿದೇಶಗಳ ರೈತರಿಗೆ ಪೂರೈಸುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರ ಹಿತದೃಷ್ಟಿಯಿಂದ ಆರಂಭಗೊಂಡ ಸಂಸ್ಥೆ ಸಾಧನೆ ವಿಶೇಷ. ಸಂಸ್ಥೆಯಿಂದ ರೈತರಿಗೆ ಕಡಿಮೆ ದರದಲ್ಲಿ ಮಣ್ಣು ಪರೀಕ್ಷೆ ಮಾಡಿ ಗುಣಮಟ್ಟದ ವರದಿ ನೀಡಲಿದ್ದು, ಭೂಮಿಗೆ ಯಾವ ಗೊಬ್ಬರ ನೀಡಬೇಕು ಎಂಬ ಉತ್ತಮ ಸಲಹೆ ನೀಡಲಾಗುವುದು. ಸಂಸ್ಥೆಯಲ್ಲಿ ನೂತನವಾಗಿ ಟಿಶ್ಯೂ ಕಲ್ಚರ್ ವಿಭಾಗವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ರೋಟರಿ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ, ಸಿ.ಪಿ.ರಮೇಶ್, ಮೇರಿ ಪಿಂಟೋ, ಗ್ರೀನ್ ಬಯೋಟೆಕ್ ಸಂಸ್ಥೆ ಸಿಬ್ಬಂದಿದ ಸುನೀಲ್ ನೆಲ್ಲಿಮಕ್ಕಿ, ರೀವನ್ ಡಿಸೋಜಾ, ವಿ.ಅಶೋಕ್, ಬ್ರೋಯನ್, ಪ್ರಣಯ್, ರವೀಂದ್ರ, ಅನಿಲ್ ಮತ್ತಿತರರು ಹಾಜರಿದ್ದರು.೩೦ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಗ್ರೀನ್ ಬಯೋಟೆಕ್ ಸಂಸ್ಥೆ ವಿವಿಧ ಸಹಕಾರ ಸಂಘಗಳ ಸಿಬ್ಬಂದಿಗೆ ಆಯೋಜಿಸಿದ್ದ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರವನ್ನು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಮುಖಂಡ ರಾಜೀವ್ ಗೌಡಗೆ ಜಾಮೀನು ಮಂಜೂರು
ಪೌರಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ