ತರೀಕೆರೆ: ಯುವಕರು ಕ್ರೀಡೆ ಜೊತೆಗೆ ಅನಾಥರ ಸೇವಾಶ್ರಮಕ್ಕೆ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿರುವುದು ಮಾದರಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿ ಕುಮಾರ್ ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಸ್ಲಾಂ ಖಾನ್ ಮಾತನಾಡಿ ಕ್ರೀಡೆಯಿಂದ ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಕ್ರೀಡೆಗಳು ಯುವಕರಲ್ಲಿ ಸ್ಫೂರ್ತಿ ಹಾಗೂ ಆರೋಗ್ಯಕರ ವಾತಾವರಣ ಮೂಡಿಸುತ್ತದೆ ಎಂದರು. ಪುರಸಭೆ ಸದಸ್ಯ ಟಿ.ಜಿಮಂಜುನಾಥ್ ಮಾತನಾಡಿ ಪರಸ್ಪರ ಸಹಕಾರ ಮನೋಭಾವ ಬೆಳೆಸುವ ಕ್ರೀಡೆಗಳನ್ನು ಯುವಕರು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರ ಯುವ ಕಾಂಗ್ರೆಸ್ ಅಧ್ಯಕ್ಷ ಇಷಾ೯ದ್ ಕ್ರೀಡೆಗಳು ಒಗ್ಗಟ್ಟು ಕಲಿಸುತ್ತದೆ ಎಂದರು.ಪ್ರಥಮ ಬಹುಮಾನ ಕೆವೈಸಿಸಿ ತಂಡ ದ್ವಿತೀಯ ಬಹುಮಾನ ರೈಸಿಂಗ್ ನೈಸ್ ತಂಡ ಪಡೆಯಿತು. ಕೆ.ಆರ್.ಪೇಟೆಯ ಮಾತೃಭೂಮಿ ಅನಾಥ ಮತ್ತು ವೃದ್ಧಾಶ್ರಮ ಸಂಸ್ಥೆಗೆ ₹16 ಸಾವಿರ ರು. ದೇಣಿಗೆ ನೀಡಲಾಯಿತು.ಫಾವ೯ಡ್೯ ಯೂತ್ ಕ್ಲಬ್ ನ ಅಬ್ರಾರ್, ಜೈದ್, ನೂರ್ ಭಾಷ, ಫಾರೂಕ್, ಸಮೀರ್, ಮುಬಾರಕ್, ಯತಿಉಲ್ಲಾ ಇತರರು ಇದ್ದರು.
11ಕೆಟಿಆರ್.ಕೆ.06ಃತರೀಕೆರೆಯಲ್ಲಿ ಫಾವ೯ಡ್೯ ಯೂತ್ ಕ್ಲಬ್ ನಿಂದ ಚಾರಿಟಿ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.