ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಧರ್ಮಸ್ಥಳ ಶ್ರೀಕ್ಷೇತ್ರದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 1,00,000/- ಅನುದಾನ ಮಂಜೂರು ಮಾಡಿದ್ದು, ಡಿಡಿಯನ್ನು ಭಾರತಿನಗರ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ಮಂಜುನಾಥ ಅವರು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮಸ್ಥರು ಒಗ್ಗೂಡಿ ಕೆಲಸ ಮಾಡಬೇಕು. ಗ್ರಾಮಸ್ಥರು ಸೇರಿ ಧಾರ್ಮಿಕ ಶ್ರದ್ದಾ ಕೇಂದ್ರ ಅಭಿವೃದ್ಧಿ ಮಾಡುತ್ತಿದ್ದು, ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.ಈ ವೇಳೆ ದೇವಸ್ಥಾನ ಜೀರ್ಣೋದ್ಧಾದಾರ ಸಮಿತಿ ಅಧ್ಯಕ್ಷ ಎಂ.ಕುಮಾರ್ ಅವರು, ಶ್ರೀಧರ್ಮಸ್ಥಳ ಕ್ಷೇತ್ರದಿಂದ ಅನೇಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರ್ಯಕ್ರಮಗಳನ್ನು ಇಡೀ ರಾಜ್ಯದ ಜನರಿಗಾಗಿ ಮಾಡುತ್ತಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಮಂಡ್ಯಜನದನಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕರ್ನಾಟಕ ಸಂಘದ ಸಹಕಾರದೊಂದಿಗೆ ೨೯ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ, ೩ನೇ ವರ್ಷದ ಇಂಡುವಾಳು ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ ಮತ್ತು ಎಚ್.ಶಾರದಮ್ಮ ಹಾಗೂ ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭವನ್ನು ಆ.೩೧ ರಂದು ಸಂಜೆ ೫ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜನದನಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೋಣನಹಳ್ಳಿ ಜಯರಾಮು ತಿಳಿಸಿದರು.
ಇದೇ ವೇಳೆ ಸಾಲಿನ ಎಚ್.ಶಾರದಮ್ಮ ಮತ್ತು ಕೆಂಪಮ್ಮ ವಿದ್ಯಾರ್ಥಿ ಪುರಸ್ಕಾರಕ್ಕೆ ಎಂ.ಆರ್.ದೀಕ್ಷಿತಾ, ಚಂದನ್ ಬಿ.ಎಂ., ಚೈತ್ರಾ ಹಾಗೂ ಬಿ.ಎನ್.ಜ್ಯೋತಿ ಅವರನ್ನು ಆಯ್ಕೆ ಮಾಡಿಲಾಗಿದ್ದು, ತಲಾ ೫ ಸಾವಿರ ನಗದಿನೊಂದಿಗೆ ಪುರಸ್ಕರಿಸಲಾಗುವುದು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಸಮಾರಂಭದ ಅಧ್ಯಕ್ಷತೆ ವಹಿಸುವರು. ರಂಗಾಯಣ ಮೈಸೂರು ನಿರ್ದೇಶಕ ಸತೀಶ್ ತಿಪಟೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಎಸ್.ತುಕಾರಾಂ ಅಭಿನಂದನಾ ನುಡಿಗಳನ್ನಾಡಲಿದ್ದು, ಇಂಡುವಾಳು ಎಚ್.ಹೊನ್ನಯ್ಯ ಅವರ ಮಗ ಹಾಗೂ ರೈತಪರ ಹೋರಾಟಗಾರ ಇಂಡುವಾಳು ಚಂದ್ರಶೇಖರ್ ಭಾಗವಹಿಸುವರು ಎಂದರು.ಗೋಷ್ಠಿಯಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ಟ್ರಸ್ಟ್ ಉಪಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹಾಜರಿದ್ದರು.