ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಸಮೀಪದ ಹುಯಿಗೆರೆ ಗ್ರಾಮದ ಶಂಕರಭಾರತಿ ಗೋ ಶಾಲಾ ಟ್ರಸ್ಟ್ ಕಟ್ಟಡ ನಿರ್ಮಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹2 ಲಕ್ಷ ಮೊತ್ತದ ಚೆಕ್‌ಅನ್ನು ಇತ್ತೀಚೆಗೆ ಗೋ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.
ಗೋ ಶಾಲಾ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಹುಯಿಗೆರೆ ಗ್ರಾಪಂ ಅಧ್ಯಕ್ಷೆ ಸುಚನಾ, ಯೋಜನಾಧಿಕಾರಿ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯ ಮುರಳೀಧರ್‌ಭಟ್, ಸುಜಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಮಹೇಶ್, ಚಂದ್ರಶೇಖರ್ ರೈ, ಕ್ಯಾಪ್ಟನ್ ಅಜಿತ್, ಒಕ್ಕೂಟದ ಅಧ್ಯಕ್ಷ ಶಿವಪ್ಪ, ಗಣೇಶ್, ಕಾಫಿ ಬೆಳೆಗಾರ ಹರೀಶ್, ವಲಯ ಮೇಲ್ವಿಚಾರಕ ಪಿ.ಸುರೇಶ್, ಸೇವಾಪ್ರತಿನಿಧಿ ಅವಿನಾಶ್, ಸ್ವಯಂ ಸೇವಕ ಸುರೇಶ್ ಕೋಟಿಯಾನ್, ಮಂಜುನಾಥ್, ಮಹೇಶ್, ರಾಕೇಶ್, ಅಭಿಷೇಕ್, ಪ್ರಮೋದ್ ಇತರರು ಇದ್ದರು.