ಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ ನಿಜಕ್ಕೂ ಶ್ಲಾಘನೀಯ: ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Apr 16, 2026, 01:30 AM IST
 ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಬೆಂಗಳೂರಿನ ಬೀಮ ಗೋಲ್ಡ್ ಕಂಪನಿಯು ಕೊಡುಗೆಯಾಗಿ ನೀಡಿದ ಆ್ಯಂಬುಲೆನ್ಸ್ ನ್ನು ಶಾಸಕ ಟಿ.ಡಿ.ರಾಜೇಗೌಡ ಲೋಕಾರ್ಪಣೆಗೊಳಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬೆಂಗಳೂರಿನ ಬೀಮ ಗೋಲ್ಡ್ ಕಪನಿಯಿಂದ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊಡುಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮಂಗಳವಾರ ಭೀಮ ಗೋಲ್ಡ್ ಪ್ರವೇಟ್ ಲಿಮಿಟೆಡ್ ನಿಂದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ವಾಹನದ ಹಸ್ತಾಂತರ ಮತ್ತು ಲೋಕಾರ್ಪಣೆ ಭಾಗವಹಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ತುರ್ತು ಸೇವೆ ಅಗತ್ಯ ಹೆಚ್ಚಾಗಿದ್ದು ಈ ಆಂಬುಲೆನ್ಸ್ ವಾಹನ ಬಳಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡದ್ದೇನೆ. ಭೀಮಾ ಜ್ಯುವೆಲ್ಲರಿ ಯಿಂದ ನೀಡಿರುವ ಈ ಆಂಬುಲೆನ್ಸ್ ವಾಹನ ಸದ್ವಿನಿಯೋಗವಾಗಬೇಕು. ಕ್ಷೇತ್ರದ ಶಾಸಕನಾಗಿ ಮತ್ತು ಕ್ಷೇತ್ರದ ಎಲ್ಲಾ ಸಾರ್ವಜನಿಕರ ಪರವಾಗಿ ಸಂಸ್ಥೆಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಭೀಮ ಗೋಲ್ಡ್ ಕಂಪನಿ ಮ್ಯಾನೇಜರ್ ರಾಘವೇಂದ್ರ ಜಿ.ಭಟ್ ಮಾತನಾಡಿ, ನಮ್ಮ ಬೀಮ ಗೋಲ್ಡ್ ಕಂಪನಿ ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಲಾಭಾಂಶದ ಒಂದು ಅಂಶ ಸಾರ್ವಜನಿಕರ ಸೇವೆಗಾಗಿ ಮೀಸಲಿಡಬೇಕೆಂದು ತೀರ್ಮನಿಸಲಾಗಿದೆ. ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ ಸೇವೆಗೆ ಮೀಸಲಿಡಲಾಗಿದೆ. ಈ ಆಂಬುಲೆನ್ಸ್ ಸರಿಯಾಗಿ ನಿರ್ವಹಣೆ ಮಾಡಿ ತುರ್ತು ಅಗತ್ಯವಿರುವ ರೋಗಿಗಳಿಗೆ ಉತ್ತಮ ಸೇವೆ ನೀಡಿ ಉತ್ತಮ ರೀತಿ ಉಪಯೋಗಿಸಿಕೊಳ್ಳಬೇಕು ಎಂದರು.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾತನಾಡಿ, ಈ ಆ್ಯಂಬುಲೆನ್ಸ್ ನೀಡುವಲ್ಲಿ ಗ್ರಾಪಂ ಮಾಜಿ ಸದಸ್ಯ ಬಿನು ಹಾಗೂ ನಿಖಿಲ್ ರವರ ಪಾತ್ರ ಹೆಚ್ಚಾಗಿದೆ. ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು ಎಂದರು. ಗ್ರಾಪಂ ಮಾಜಿ ಸದಸ್ಯ ಬಿನು ಮಾತನಾಡಿ, ಸಮಾಜದಿಂದ ಪಡೆದ ಲಾಭವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಾರ್ಯವೈಖರಿ ಮತ್ತು ಸಾಮಾಜಿಕ ಕಳಕಳಿ ಇತರೆ ಸಂಘ, ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ಈ.ಸಿ.ಜೋಯಿ, ಪಿ.ಆರ್.ಸದಾಶಿವ, ಪ.ಪಂ. ಮಾಜಿ ಅಧ್ಯಕ್ಷೆ ಜುಬೇದಾ, ಕ್ಲಸ್ಟರ್ ಹೆಡ್ ಕಾರ್ತಿಕ್ ರಾವ್, ಬ್ರಾಂಚ್ ಮ್ಯಾನೇಜರುಗಳಾದ ಕೆಪಿಎನ್ ಶ್ರೀನಿವಾಸ್, ಎಂ.ಬಿ.ನಿಖಿಲ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಿರೀಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ರಕ್ಷಾ ಸಮಿತಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾವಯವ ಪದಾರ್ಥಗಳ ಬಳಕೆಯಿಂದ ಮಾತ್ರ ಆರೋಗ್ಯ
ಸರ್ಕಾರಿ ಶಾಲೆಗೆ ಗ್ರೀನ್ ಬೋರ್ಡ್ ವಿತರಣೆ