ಧಾರವಾಡ:
ಇಲ್ಲಿಯ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಆವರಣದಲ್ಲಿ ಪ್ರಾರಂಭವಾದ ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯ 22ನೇ ವರ್ಷದ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಬಹುತೇಕ ಅಜ್ಜ-ಅಜ್ಜಿ ಇಲ್ಲದ ಮನೆಗಳೇ ಹೆಚ್ಚಿವೆ. ಇಂಥದರಲ್ಲಿ ನಿಜವಾದ ಮಕ್ಕಳ ಕಾಳಜಿಯೊಂದಿಗೆ ನಡೆಸುವ ಮಕ್ಕಳ ಬೇಸಿಗೆ ಶಿಬಿರಗಳು ಅವಶ್ಯವಾಗಿ ಬೇಕಾಗುತ್ತದೆ. ಅಂಥ ಕಾರ್ಯವನ್ನು ಚಿಲಿಪಿಲಿ ಸಂಸ್ಥೆ ಕಳೆದ 22 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸಿಕೊಂಡು ಬಂದಿರುವುದು ಅಭಿನಂದನೀಯ. ಮಕ್ಕಳು ಮುಕ್ತವಾಗಿ ಮನಬಿಚ್ಚಿ ಕುಣಿದು ಕುಪ್ಪಳಿಸಿ, ನಕ್ಕು ನಲಿದು ರಜೆ ದಿನಗಳನ್ನು ಆನಂದದಾಯಕವಾಗಿ ಕಳೆಯಿರಿ ಎಂದು ಕಿವಿ ಮಾತು ಹೇಳಿದರು.ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಅವರ ತುಂಟಾಟ ನಿಯಂತ್ರಿಸಲಾಗದೆಯೋ, ಮೊಬೈಲ್ ಗೀಳಿಗೆ ಅಂಟಿಕೊಳ್ಳುವ ಭಯದಿಂದಲೋ ಅಥವಾ ಮತ್ತೆ ಯಾವುದೋ ವಿಷಯದ ಕಲಿಕೆಗೆ ಟ್ಯೂಶನ್‌ಗೆ ಹಚ್ಚದೇ ಶಿಬಿರಕ್ಕೆ ಮಕ್ಕಳನ್ನು ಕಳಿಸಿದ್ದು ಅಭಿನಂದನೀಯ. ಆದರೆ ಇಲ್ಲಿ ಮಕ್ಕಳು 20 ದಿನ ಅವರದೇ ಅದ ಹೊಸ ಲೋಕದಲ್ಲಿ ವಿಹರಿಸುವಂತೆ ಚಿಲಿಪಿಲಿ ಸಂಸ್ಥೆ ಸೃಷ್ಟಿ ಮಾಡಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಶೈಕ್ಷಣಿಕ ಚಿಂತಕ ಮಕ್ಕಲ್ಲಿಕಾರ್ಜುನ ಚಿಕ್ಕಮಠ, ನಮ್ಮ ಮಕ್ಕಳು ಪುಸ್ತಕದ ಹುಳುವಾಗಬಾರದು. ಹಾಡ ಹೇಳಬೇಕು, ಧೈರ್ಯದಿಂದ ಮಾತಾಡಬೇಕು, ನಾಟಕವಾಡಬೇಕು, ಆಟವಾಡಬೇಕು, ಒಂದಿಷ್ಟು ನೈತಿಕತೆ ಕಲಿತುಕೊಳ್ಳಬೇಕು ಎಂದರು.