ದೊಡ್ಡಣಗುಡ್ಡೆ ಕ್ಷೇತ್ರ - ತ್ರಿಪುರ ಸುಂದರಿ ಮಹಾಯಾಗ ಸಂಪನ್ನ

KannadaprabhaNewsNetwork |  
Published : Oct 17, 2026, 02:30 AM IST
ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ನವರಾತ್ರಿಯ ಪ್ರಯುಕ್ತ ತ್ರಿಪುರ ಸುಂದರಿಯಾಗ ನಡೆಯಿತು. | Kannada Prabha

ಸಾರಾಂಶ

ಇಲ್ಲಿನ ಪುರಣೇತಿಹಾಸ ಪ್ರಸಿದ್ದ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ 6ನೇ ದಿನವಾದ ಶುಕ್ರವಾರ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾಯಾಗವು ಭಕ್ತಿ- ವೈಭವದಿಂದ ಸಂಪನ್ನಗೊಂಡಿತು.

ಉಡುಪಿ: ಇಲ್ಲಿನ ಪುರಣೇತಿಹಾಸ ಪ್ರಸಿದ್ದ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ 6ನೇ ದಿನವಾದ ಶುಕ್ರವಾರ ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾಯಾಗವು ಭಕ್ತಿ- ವೈಭವದಿಂದ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ಆದಿಪರಾಶಕ್ತಿ ಶ್ರೀ ಲಲಿತಾ ತ್ರಿಪುರ ಸುಂದರಿಯ ಪ್ರೀತ್ಯರ್ಥ ಈ ವಿಶಿಷ್ಟ ಯಾಗ ಸಮರ್ಪಿತವಾಯಿತು. ಈ ಅಪೂರ್ವ ಯಾಗದಲ್ಲಿ ಮಂತ್ರಜಪ, ಸಂಕಲ್ಪ, ಪೂಜೆ, ಅಗ್ನಿಗೆ ಆಹುತಿ ಸಮರ್ಪಿಸುವ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಕುಂಕುಮ, ಅರಿಶಿನ, ಶ್ರೀಗಂಧ, ಹೂವುಗಳು, ಅಕ್ಷತೆ, ತುಪ್ಪ, ಜೇನುತುಪ್ಪ, ಹಾಲು, ಸಕ್ಕರೆ, ತೆಂಗಿನಕಾಯಿ, ವಿವಿಧ ಹಣ್ಣುಗಳು, ಹೋಮದ್ರವ್ಯಗಳನ್ನು ಶಾಸ್ತ್ರೋಕ್ತವಾಗಿ ಸಮರ್ಪಿಸಲಾಯಿತು.

ಶುಕ್ರವಾರವೂ ಸಾವಿರಾರು ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಪ್ರತಿಯೊಬ್ಬರಿಗೂ ಅನ್ನಪ್ರಸಾದ ವಿತರಣೆಗೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿತ್ತು.

ತುಳು ಲಿಪಿ ಕಲಿಕೆ ಕಾರ್ಯಾಗಾರ: ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಜೈ ತುಳುನಾಡು ಉಡುಪಿ ಸಂಘಟನೆ ವತಿಯಿಂದ ‘ತುಳು ಲಿಪಿಯಲ್ಲಿ ಹೆಸರು ಬರೆಯೋಣ‘ ಅಭಿಯಾನ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಶ್ರೀ ಗುರೂಜಿ ಅವರು ತುಳು ಲಿಪಿಯಲ್ಲಿ ಹೆಸರು ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ತುಳು ಭಾಷೆ, ಲಿಪಿಯ ಕಲಿಕೆಗೆ ಯುವಜನತೆ ಹೆಚ್ಚಿನ ಆಸಕ್ತಿ ವಹಿಸಬೇಕು. ತುಳು ಭಾಷೆಗೆ ತನ್ನದೇ ಆದ ಇತಿಹಾಸ, ಸಂಸ್ಕೃತಿ ಪರಂಪರೆಯಿದೆ. ಇಂದಿನ ತಲೆಮಾರಿಗೆ ಇಂತಹ ಅಭಿಯಾನಗಳು ಭಾಷಾಭಿಮಾನವನ್ನು ಹೆಚ್ಚಿಸುವುದರ ಜತೆಗೆ ತುಳು ಲಿಪಿಯ ಸಂರಕ್ಷಣೆಗೂ ಸಹಕಾರಿಯಾಗಲಿವೆ ಎಂದರು. ಪ್ರಜ್ಞಾ ಆಂ.ಮಾ. ಶಾಲಾ ಮುಖ್ಯಶಿಕ್ಷಕಿ ಉಷಾ ರಮಾನಂದ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಆಚಾರ್ಯ, ಸಂಘಟನೆ ಅಧ್ಯಕ್ಷ ಸಂತೋಷ್‌ ಕಟಪಾಡಿ, ಜತೆಕಾರ್ಯದರ್ಶಿ ಐಶ್ವರ್ಯಾ ಶೆಟ್ಟಿ ಇನ್ನಂಜೆ, ಸಂಘಟನ ಕಾರ್ಯದರ್ಶಿ ಸುಪ್ರಿಯಾ ಅಖಿಲೇಶ್‌ ದೇವಾಡಿಗ, ತುಳು ಭಾಷಾಭಿಮಾನಿಗಳು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರುದ ಪಿಲಿಗೊಬ್ಬು'''' ಸೀಸನ್ ೪
ವಿಶೇಷ ಚೇತನರಿಗೆ ಮೆಡಿಕಲ್ ಕಾಲೇಜ್‌ನಲ್ಲಿ ಉದ್ಯೋಗ ಒದಗಿಸಲು ಯತ್ನ-ಶಾಸಕ ಅಶೋಕ್ ರೈ