ಮನೆ ಮನೆಗಳಿಗೆ ವಸ್ತ್ರದ ಕೈಚೀಲ ವಿತರಣೆ

KannadaprabhaNewsNetwork | Published : Dec 23, 2024 1:03 AM

ಸಾರಾಂಶ

ದಾವಣಗೆರೆ ನಗರದ 24ನೇ ವಾರ್ಡಿನಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಶನಿವಾರ ಮಾಜಿ ಮೇಯರ್ ಸುಧಾ ಜಯರುದ್ರೇಶ್ ಅವರೊಂದಿಗೆ, ಮನೆ ಮನೆಗೆ ತೆರಳಿ, ವಸ್ತ್ರದಿಂದ ತಯಾರಿಸಿದ ಕೈ ಚೀಲಗಳನ್ನು ವಿತರಿಸಲಾಯಿತು.

- ನಮ್ಮ ದಾವಣಗೆರೆ ಫೌಂಡೇಶನ್‌ನಿಂದ ವಿಶೇಷ ಪರಿಸರ ಕಾಳಜಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಇಂದು ನಗರದ 24ನೇ ವಾರ್ಡಿನಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಶನಿವಾರ ಮಾಜಿ ಮೇಯರ್ ಸುಧಾ ಜಯರುದ್ರೇಶ್ ಅವರೊಂದಿಗೆ, ಮನೆ ಮನೆಗೆ ತೆರಳಿ, ವಸ್ತ್ರದಿಂದ ತಯಾರಿಸಿದ ಕೈ ಚೀಲಗಳನ್ನು ವಿತರಿಸಲಾಯಿತು.

ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಇದೇ ಸಂದರ್ಭದಲ್ಲಿ ಮಾತನಾಡಿ, ನಿರುಪಯುಕ್ತ ವಸ್ತುಗಳ ಮರುಬಳಕೆ ಕಡೆಗೆ ಜನರು ಹೆಚ್ಚು ಗಮನ ಹರಿಸಬೇಕಿದೆ. ಸಿಂಗಲ್ ಯುಸ್ ಪ್ಲಾಸ್ಟಿಕ್ ಪರಿಸರಕ್ಕೆ ದೊಡ್ಡ ಗಂಡಾಂತರವಾಗಿದೆ. ಈ ರೀತಿಯ ಕಾರ್ಯಕ್ರಮ ಘನತ್ಯಾಜ್ಯ ವಿಲೇವಾರಿಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯ ಎಂದರು.

ನಮ್ಮ ದಾವಣಗೆರೆ ಫೌಂಡೇಶನ್ ಇಂತಹ ಪ್ರಯೋಗಗಳಿಂದ ಪರಿಸರಾತ್ಮಕವಾಗಿ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯತೆ ಕಡೆಗೆ ಹೆಜ್ಜೆ ಹಾಕಲಿದೆ. ಕೇವಲ ಪರಿಸರ ದಿನಾಚರಣೆಯ, ಒಂದು ದಿನದ ಪರಿಸರ ಪ್ರೀತಿಯ ಬದಲು, ವರ್ಷ ಪೂರ್ತಿ ಪ್ಲಾಸ್ಟಿಕ್ ಮುಕ್ತ ಬದುಕನ್ನು ನಡೆಸೋಣ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪದ್ಮನಾಭ ಶೆಟ್ರು, ಉಷಾ ಶೆಟ್ಟಿ, ಸಚಿನ್ ವೆರ್ಣೇಕರ್, ನಮ್ಮ ದಾವಣಗೆರೆ ಸಂಘದ ಪವನ್, ಉಲ್ಲಾಸ್ ರೇವಣಕರ್, ಅರುಣ್ ಕೋಟೆ, ವಿಕಾಸ್, ಅಂಬರೀಶ್, ಅರ್ಜುನ್, ಚೇತನ್, ಸೋಮಶೇಖರ್, ಪ್ರಭು, ಸೋಹನ್, ಲಿಂಗರಾಜ್, ನಾಗಲಕ್ಷ್ಮಿ, ರಕ್ಷಿತಾ, ಹೇಮಾವತಿ, ತೇಜಸ್ವಿನಿ, ಯಶೋದಾ, ಕಾವ್ಯ, ಪವನ್, ಕಾರ್ತಿಕ್ ದುಗ್ಗೆಷ್, ಹೇಮಂತ್, ವಿನಯ್ ಇದ್ದರು.

- - - -22ಕೆಡಿವಿಜಿ49.ಜೆಪಿಜಿ:

ನಮ್ಮ ದಾವಣಗೆರೆ ಫೌಂಡೇಷನ್‌ನಿಂದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಬಟ್ಟೆ ಕೈ ಚೀಲಗಳನ್ನು ವಿತರಿಸಲಾಯಿತು.

Share this article