ಮನೆ-ಮನೆಗೆ ಪೊಲೀಸ್ ಬೀಟ್ ಸಂಚಾರ

KannadaprabhaNewsNetwork |  
Published : Jul 20, 2025, 01:23 AM IST
19ಉಳಉ1,2 | Kannada Prabha

ಸಾರಾಂಶ

ಗೃಹ ಇಲಾಖೆಯು ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬರುವ ನಗರ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮನೆ-ಮನೆಗೆ ಬೀಟ್ ಸಂಚಾರಕ್ಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯ ಆಯಾ ಪೊಲೀಸ್ ಠಾಣೆಯಲ್ಲಿ ವಿನೂತನ ಪರಿಕಲ್ಪನೆಯ ಮೂಲಕ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳ ಆಲಿಸುವಂತೆ ಸೂಚನೆ ನೀಡಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ಪೊಲೀಸ್ ವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಗ್ರಾಮಗಳ ಜನತೆಯೇ ಸಮಸ್ಯೆ ಆಲಿಸುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮನೆ-ಮನೆಗೆ ಪೊಲೀಸ್ ಎನ್ನುವ ವಿನೂತನ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದೆ.

ಈಗಾಗಲೇ ಗೃಹ ಇಲಾಖೆಯು ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಬರುವ ನಗರ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮನೆ-ಮನೆಗೆ ಬೀಟ್ ಸಂಚಾರಕ್ಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯ ಆಯಾ ಪೊಲೀಸ್ ಠಾಣೆಯಲ್ಲಿ ವಿನೂತನ ಪರಿಕಲ್ಪನೆಯ ಮೂಲಕ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳ ಆಲಿಸುವಂತೆ ಸೂಚನೆ ನೀಡಿದೆ.

ಪರಿಕಲ್ಪನೆಯ ಸೂತ್ತೋಲೆ:

ಮನೆ-ಮನೆಗೆ ಪೊಲೀಸ್ ಬೀಟ್ ತೆರಳಿ ಸಮಸ್ಯೆಗಳನ್ನು ಆಲಿಸುವುದೇ ನೂತನ ಪರಿಕಲ್ಪನೆಯ ಉದ್ದೇಶವಾಗಿದೆ. ಗೃಹ ಇಲಾಖೆಯಿಂದ 27 ಅಂಶಗಳನ್ನು ಅಳವಡಿಸಿಕೊಂಡು ಪೊಲೀಸರು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ. ಗ್ರಾಮಗಳಿಗೆ ತೆರಳುವ ಬೀಟ್ ಪೊಲೀಸರು ಒಂದು ಬೀಟ್ ನಲ್ಲಿ 40ರಿಂದ 50 ಮನೆಗಳ ಸಮೂಹ ಪಟ್ಟಿ ಮಾಡಿ ಪ್ರತಿಸಮೂಹಕ್ಕೆ ಒಬ್ಬ ಮುಖ್ಯಸ್ಥರನ್ನು ನೇಮಿಸುವಂತೆ ಸೂಚನೆ ನೀಡಿದೆ. ಇದಕ್ಕೆ ರಜಿಸ್ಟರನಲ್ಲಿ ದಾಖಲಿಸುವಂತೆ ತಿಳಿಸಿದ್ದಾರೆ. ಪ್ರತಿ ಮನೆಗಳಿಗೆ ತೆರಳುವ ಬೀಟ್ ಸಿಬ್ಬಂದಿಗಳು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ, ಶಾಂತಿ ಸುವ್ಯವಸ್ಥೆ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ, ಪೊಲೀಸರ ಬಗ್ಗೆ ನಂಬಿಕೆ, ಅಲ್ಲದೇ ಮನೆ ಯಜಮಾನರ ದೂರವಾಣಿ ಸಂಖ್ಯೆ ಸಂಗ್ರಹಿಸುವುದು, ಕುಟುಂಬಸ್ಥರ ಸಮಸ್ಸೆಯನ್ನು ರಜಿಸ್ಟರ್‌ಗಳಲ್ಲಿ ದಾಖಲಿಸಿ ಪ್ರತಿ ತಿಂಗಳ 2ನೇ ಶನಿವಾರ ಸಮೂಹದ ಮುಖ್ಯಸ್ಥರು ಮತ್ತು ಸಾರ್ವಜನಿಕರ ಸಭೆ ನಡೆಸಲು ಇಲಾಖೆ ಸೂಚಿಸಿದೆ.

ಮನೆ-ಮನೆಗೆ ಭೇಟಿ:

ಗೃಹ ಇಲಾಖೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಬೀಟ್ ತಂಡ ತಾಲೂಕಿನ ಹೆಬ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದಾರೆ. ಪ್ರತಿ ಬೀಟ್ ತಂಡ ಗ್ರಾಮಗಳಲ್ಲಿ 40ರಿಂದ 50 ಮನೆಗಳಿಗೆ ಭೇಟಿ ನೀಡುವ ಕಾರ್ಯ ಪ್ರಾರಂಭ ಮಾಡಿದೆ.

ಗೃಹ ಇಲಾಖೆ ನೀಡಿದ ವಿನೂತನ ಪರಿಕಲ್ಪನೆಯ ಸೂಚನೆ ಹಿನ್ನೆಲೆಯಲ್ಲಿ ಮನೆ-ಮನೆಗೆ ಪೊಲೀಸ್ ಬೀಟ್ ಸಂಚಾರದಿಂದ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆಗೆ ಕಾರಣವಾಗ ಬಹುದಾಗಿದೆ.ಪೊಲೀಸ್ ಇಲಾಖೆಯು ಆದೇಶ ನೀಡಿದ್ದ ಮನೆ-ಮನೆಗೆ ಪೊಲೀಸ್ ಬೀಟ್ ಸಂಚಾರದ ಹಿನ್ನೆಲೆಯಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಸಿಬ್ಬಂದಿಗಳ ಬೀಟ್ ರಚಿಸಿ ವಿವಿಧ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುವುದು ಮತ್ತು ಸಮಸ್ಯೆಗಳನ್ನು ಆಲಿಸುವಂತೆ ತಿಳಿಸಲಾಗಿದೆ. ಇದರಿರಂದ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬಹುದು.

ರಂಗಪ್ಪ ದೊಡ್ಮನಿ, ಸಿಪಿಐ. ಗ್ರಾಮೀಣ ಪೊಲೀಸ್ ಠಾಣೆ ಗಂಗಾವತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ