ಕನ್ನಡಪ್ರಭ ವಾರ್ತೆ ಉಡುಪಿ
ಈ ವಿದ್ಯಾರ್ಥಿಗಳು ಇರಾನ್ ರಾಜದಾನಿಯಾದ ತೆಹರಾನ್ ನ ಸಮೀಪದಲ್ಲಿರುವ ಶಹೀದ್ ಬೆಹ್ಸ್ತಿ ಮೆಡಿಕಲ್ ಯುನಿವರ್ಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದು, ಅವರು ಈ ಯುದ್ಧ ಪರಿಸ್ಥಿತಿಯಿಂದಾಗಿ ಆತಂಕಕ್ಕೊಳಗಾಗಿದ್ದಾರೆ. ಅವರಲ್ಲಿ ಬೆಂಗಳೂರು ಮೂಲದ ನದೀಮ್ ಹುಸೇನ್ ಎಂಬವರು ಹಾಗೂ ಅವರ ಪೋಷಕರು ಅನಿವಾಸಿ ಭಾರತೀಯ ಸಮಿತಿಯನ್ನು ಸಂಪರ್ಕಿಸಿದ್ದು, ಕೂಡಲೇ ದೇಶಕ್ಕೆ ಹಿಂದಿರುಗಲು ಇಚ್ಛೆಯನ್ನು ವ್ಯಕ್ತಪಡಿಸಿರುತ್ತಾರೆ. ಅಲ್ಲದೆ, ಕನ್ನಡಿಗರರಾದ ನಾಸೀರ್ ಹುಸೇನ್, ಸೈಯದ್ ಮೊಹಮದ್ ತಾಖಿ, ಮೀರ್ ಎಸಮ್ ರಝ, ಅಬ್ಬಾಸ್ ಅಸ್ಕರಿ, ಸಯ್ಯದ್ ಮೊಹ್ಸಿನ್ ರಝ, ಮರ್ಯಮ್ ಫಾತೀಮಾ, ಡಾನಿಯಾ ಉಲ್ಫತ್, ಅಬ್ಬಾಸ್ ಅಲಿ ಅವರು ಕೂಡ ಅನಿವಾಸಿ ಭಾರತೀಯ ಸಮಿತಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಇರಾನ್‌ನಿಂದ ಬೇರೆ ದೇಶಗಳಿಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ಹಿಂದಕ್ಕೆ ಬರಲಿಚ್ಛಿಸುತ್ತಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಆರತಿಕೃಷ್ಣ ಇರಾನ್ ನಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕೂಡಲೇ ಮರಳಿ ಭಾರತಕ್ಕೆ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವವರನ್ನು ಕೋರಿದ್ದಾರೆ.ಇರಾನ್‌ನಲ್ಲಿ ಸುಮಾರು 6000 ಮಂದಿ ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿದ್ದಾರೆ, ಅದರಲ್ಲಿ ಸುಮಾರು 2000 ಮಂದಿಯನ್ನು ಈಗಾಗಲೇ ಅಕ್ಕಪಕ್ಕದ ದೇಶಗಳಿಗೆ ಕಳುಹಿಸಿ, ಅಲ್ಲಿಂದ ಭಾರತಕ್ಕೆ ಕರೆ ತರುವ ಕೆಲಸವನ್ನು ಭಾರತೀಯ ಧೂತವಾಸ ಈಗಾಗಲೇ ಆರಂಭಿಸಿದ್ದಾರೆ. ರಾಜ್ಯದಿಂದ ಈ 9 ವಿದ್ಯಾರ್ಥಿಗಳಲ್ಲದೆ ಇನ್ನೂ ಸಾಕಷ್ಟು ಮಂದಿ ಅಲ್ಲಿದ್ದಾರೆ. ಅವರು ಹಿಂದಕ್ಕೆ ಬರಲಿಚ್ಛಿಸಿದರೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ‘ಕನ್ನಡಪ್ರಭ’ಕ್ಕೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ