ಡಾ.ಅಂಬೇಡ್ಕರ್ ಬಡ, ಶೋಷಿತ ವರ್ಗದ ಆಶಾ ಕಿರಣ: ಎಂ.ಶ್ರೀನಿವಾಸ್

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಈ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಶೋಷಿತ ವರ್ಗದವರ, ಬಡವರ, ದಲಿತ ಬದುಕಿಗೆ ಆಶಾ ಕಿರಣ ವಾಗಿದ್ದಾರೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಕಾಂಗ್ರೆಸ್‌ ಪಕ್ಷದಿಂದ ಅಂಬೇಡ್ಕರ್‌ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಈ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಶೋಷಿತ ವರ್ಗದವರ, ಬಡವರ, ದಲಿತ ಬದುಕಿಗೆ ಆಶಾ ಕಿರಣ ವಾಗಿದ್ದಾರೆ ಎಂದು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಭಾನುವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸುಭದ್ರ, ಸುರಕ್ಷಿತವಾಗಿ ಎಲ್ಲರೂ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ. ಈ ದೇಶಕ್ಕೆ ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ. ಪಟ್ಟಣದ ಈ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ನಾಮಕಾರಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇದೇ ವೃತ್ತಕ್ಕೆ ಅಂಬೇಡ್ಕರ್ ಪುತ್ಥಳಿಯನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರ ಬಳಿ ಕೋರಿದ್ದು ಚುನಾವಣೆ ಮುಗಿದ ಬಳಿಕ ಪುತ್ಥಳಿ ನಿರ್ಮಾಣ ಮಾಡಿಸಲು ಕ್ರಮವಹಿಸಲಾಗುವುದೆಂದರು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್. ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಶ್ರಮ ವಹಿಸಿದ್ದರು. ಬೇರೆ ದೇಶಗಳಿಗಿಂತಲೂ ವಿಭಿನ್ನ, ಅತ್ಯಂತ ಶ್ರೇಷ್ಠವಾದ ಸಂವಿಧಾನ ನಮ್ಮ ದೇಶದ್ದಾಗಿದೆ. ಈ ಸಂವಿಧಾನದಿಂದ ತಾರತಮ್ಯ ಹೋಗಲಾಡಿಸಿ, ಶಾಂತಿ, ಸಾಮರಸ್ಯ ನೆಲೆಯೂರಿದೆ ಎಂದರು.ಪ.ಪಂ. ಸದಸ್ಯ ಎನ್.ಎಲ್.ಮುಕುಂದ ಮಾತನಾಡಿ, ಎಂ.ಶ್ರೀನಿವಾಸ್ ಅವರು ಈಗಾಗಲೇ ಈ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಸಂಬಂಧಪಟ್ಟ ಇಲಾಖೆ ಸಚಿವರಿಂದ ಕೊಡಿಸುವ ಭರವಸೆ ನೀಡಿದ್ದಾರೆ. ಚುನಾವಣೆ ಬಳಿಕ ಅತ್ಯಂತ ಶೀಘ್ರದಲ್ಲಿ ಈ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿ ರಾರಾಜಿಸಲಿದೆ ಎಂದರು.ಕಾರ್ಯಕ್ರಮದಲ್ಲಿದ್ದ ಎಲ್ಲಾ ಅತಿಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಬಿ.ವಿ.ಉಪೇಂದ್ರ, ಪಪಂ ಸದಸ್ಯರಾದ ಜುಬೇದಾ, ಸೈಯದ್‌ ಮುನಾವರ್‌ ಪಾಷಾ, ಸೈಯದ್‌ವಸೀಂ, ಮುಕುಂದ, ಸುರಯ್ಯಭಾನು, ಮಾಜಿ ಸದಸ್ಯ ಸುನೀಲ್‌ಕುಮಾರ್, ಮುಖಂಡರಾದ ಅಂಜುಂ, ಕೆ.ಎ.ಅಬೂಬೇಕರ್, ಗಫಾರ್, ಶಿವು, ಇಬ್ರಾಹಿಂ, ಪಿ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

ಎನ್.ಆರ್.ಪುರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ನಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸ ಲಾಯಿತು. ಎಂ.ಶ್ರೀನಿವಾಸ್, ಪ್ರಶಾಂತ್.ಎಲ್.ಶೆಟ್ಟಿ, ಬಿ.ವಿ.ಉಪೇಂದ್ರ, ಜುಬೇದಾ, ಅಂಜುಂ, ಸೈಯದ್‌ ಮುನಾವರ್‌ ಪಾಷಾ, ಸೈಯದ್‌ವಸೀಂ, ಸುರಯ್ಯಭಾನು, ಸುನೀಲ್‌ಕುಮಾರ್ ಇದ್ದರು.

Share this article