ಕನ್ನಡಪ್ರಭ ವಾರ್ತೆ ಮೈಸೂರು
ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಅಂಗಳ ಸಾಹಿತ್ಯ ಬಳಗ ಮತ್ತು ದೇವರತ್ನ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ- ಯುವಜನರ ಸಮಸ್ಯೆ- ಸವಾಲು- ಪರಿಹಾರ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಮಹಾಡ್ ಕೆರೆ ಹೋರಾಟದ ನಂತರ ರಾಜಕೀಯ ಅಧಿಕಾರದ ಮಹತ್ವ ತಿಳಿದುಕೊಂಡರು. ಪೆರಿಯಾರ್ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿ ಮಾಡಿದರು. ಕಾನ್ಸಿರಾಂ ಉತ್ತರ ಪ್ರದೇಶವನ್ನು ರಾಜಕೀಯದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡರು. ಈಗ ಪ್ರಾದೇಶಿಕ ರಾಜಕೀಯ ರೂಪುಗೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.12 ಸಾವಿರ ವರ್ಷಗಳ ಹಿಂದೆ ನಾಗರಿಕತೆ ಆರಂಭವಾಯಿತು. ಅಲ್ಲಿಂದ ಲಿಂಗ ಅಸಮಾನತೆ, ಪುರುಷ ಪ್ರಧಾನ ವ್ಯವಸ್ಥೆ ಬೆಳೆದು ಬಂದಿತು. ಇವತ್ತಿಗೂ ಜೀವಂತವಾಗಿದೆ. ಬ್ರಾಹ್ಮಣ್ಯರಿಗೆ ಜನ್ಮ ಆಧಾರಿತ ಸೌಲಭ್ಯಗಳು ದೊರೆತವು. 300 ವರ್ಷಗಳಿಂದ ಬಂಡವಾಳ ವ್ಯವಸ್ಥೆ ಜಾರಿಯಲ್ಲಿದೆ. 100 ವರ್ಷದಿಂದ ಹಿಂದುತ್ವ, 75 ವರ್ಷದಿಂದ ಭಾಷೆಯ ತಾರತಮ್ಯ ಕಾಣುತ್ತಿದ್ದೇವೆ. ಉತ್ತಮ ಸಂವಿಧಾನದಿಂದ ಸಮ ಸಮಾಜ ನಿರ್ಮಾಣ ಮಾಡಬೇಕು. ಸಮಾನತೆಯ ಸಮಾಜದ ಕಡೆ ಹೋಗಬೇಕು. ಜಾತಿ, ಧರ್ಮ, ಪಕ್ಷ, ಭಾಷೆ ಮುಖ್ಯವಾಗಬಾರದು ಎಂದರು.
ಜನರ ಸಮಸ್ಯೆ ಚರ್ಚಿಸುತ್ತಿಲ್ಲ
ಈ ದೇಶದಲ್ಲಿ ಸಂವಿಧಾನದ ವಿರುದ್ಧವಾಗಿ ಆರ್ಥಿಕ ನೀತಿಗಳು ಇವೆ. ಸಂಪತ್ತನ್ನು ಸಾಮೂಹಿಕವಾಗಿ ಹಂಚಿಕೆ ಆಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಪ್ರತಿಯೊಬ್ಬನಿಗೂ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕು ಎಂದು ಸಂವಿಧಾನದಲ್ಲಿ ಇದೆ. ಏಕೆ ಕೊಡಲಿಲ್ಲ? ಇದು ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳು ಎಂದರು.
-----
ಸ್ವಯಂ ಉದ್ಯೋಗದಿಂಧ ನಿರುದ್ಯೋಗ ನಿವಾರಣೆ- ದರ್ಶನ್ ಪುಟ್ಟಣ್ಣಯ್ಯ
ಉನ್ನತ ಶಿಕ್ಷಣ ಕೈಗಾರಿಕಾ ಉದ್ಯೋಗಕ್ಕೆ ಪೂರಕವಾಗಿ ರೂಪಗೊಳ್ಳಬೇಕು. ಸ್ಥಳೀಯ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳು ವೃದ್ಧಿಗೆ ಸಾಧ್ಯವಾಗಲಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗಿರುವ ಹಳ್ಳಿಯ ಯುವಕರನ್ನು ಮರಳಿ ಹಳ್ಳಿಕಡೆಗೆ ಕರೆ ತರಲು ಅನುಕೂಲವಾಗಲಿದೆ ಎಂದರು.
----
ಕೋಟ್...ಬೆಟ್ಟದಂತ ನಮ್ಮ ಸಮಸ್ಯೆಗಳು ಪರ್ವತದಂತೆ ಬೆಳೆಯುತ್ತಿವೆ. ಇವುಗಳನ್ನು ಪ್ರಶ್ನಿಸಬೇಕಾದ ವಿದ್ಯಾರ್ಥಿ ಯುವಜನರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಗೂಗಲ್ ನಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಂದು ಮೈ ಮರೆಯುತ್ತಿದ್ದಾರೆ. ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸಮಸ್ಯೆ ಇತ್ಯರ್ಥಕ್ಕೆ ಕೂತು ಚರ್ಚಿಸಬೇಕು. ಜನಪ್ರತಿನಿಧಿಗಳು ಸದನದ ಒಳಗೆ ಹೋರಾಡಬೇಕು. ತಮ್ಮ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಸದನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ಕೊಡಬೇಕು.
- ಅಹಿಂದ ಜವರಪ್ಪ, ಸಾಮಾಜಿಕ ಹೋರಾಟಗಾರ