ಕಡೂರು ಪಟ್ಟಣದ ತಮ್ಮ ನಿವಾಸದ ಪ್ರಾಂಗಣದಲ್ಲಿ ಬಿಜೆಪಿನಿಂದ ಸಂವಿಧಾನ ಸಮ್ಮಾನ್ ಅಭಿಯಾನ
ಸಂವಿಧಾನದ ಶಿಲ್ಪಿ, ಸಮಾಜ ಸುಧಾರಕರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪಡೆದ ಉನ್ನತ ಶಿಕ್ಷಣದಿಂದ ಅವರಿಗೆ ಭಾರತ ಸೇರಿದಂತೆ ಇಡೀ ಪ್ರಪಂಚವೇ ಗೌರವಿಸುತ್ತಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಶನಿವಾರ ಕಡೂರು ಪಟ್ಟಣದ ತಮ್ಮ ನಿವಾಸದ ಪ್ರಾಂಗಣದಲ್ಲಿ ಬಿಜೆಪಿನಿಂದ ಸಂವಿಧಾನ ಸಮ್ಮಾನ್ ಅಭಿಯಾನದ ಅಂಗವಾಗಿ ನಡೆದ ಭೀಮ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಪಡೆದಲ್ಲಿ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಅದಕ್ಕೆ ನಮ್ಮ ಅಂಬೇಡ್ಕರ್ ಬಹುದೊಡ್ಡ ಉದಾಹರಣೆ. ವಿದ್ಯಾವಂತರಾಗಬೇಕು ಅದಕ್ಕಿಂತ ಹೆಚ್ಚಾಗಿ ತಿಳುವಳಿಕೆ ಉಳ್ಳವರಾಗಿರಬೇಕು. ಸಮಾಜದಲ್ಲಿ ಎಲ್ಲರನ್ನು ಹೇಗೆ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಚಿಂತನೆ ಇರಬೇಕು ಎಂದರು.ನಗರ ಪಟ್ಟಣಗಳಲ್ಲಿ ಇಂದು ಜಾತಿ ಪರಿಸ್ಥಿತಿ ಸುಧಾರಿಸಿದ್ದು ಹಳ್ಳಿಗಳಲ್ಲಿ ಸುಧಾರಣೆ ಆಗಬೇಕಿದೆ. ಅಂಬೇಡ್ಕರ್ ಅವರ ವಿಚಾರ ಧಾರೆ ಇಂದಿನ ಭೀಮ ಸಂಗಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲು ಕಾರಣ ಇದು ತಮಗೆ ಸಂತೋಷ ತಂದಿದೆ. ರಾಷ್ಟ್ರೀಯ ಹಬ್ಬದಲ್ಲಿ ಎಷ್ಟು ಜನ ದೇಶಾಭಿಮಾನ ಮೆರೆಯುತ್ತಾರೆ. ಅಂಬೇಡ್ಕರ್ ಅವರು ಸ್ವಾತಂತ್ರ ವನ್ನು ನಾವು ಬದುಕಲು ನೀಡಿದ್ದಾರೆ. ನಾನು ಕೂಡ ನನ್ನ ಉಸಿರಿರುವವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಮತ್ತು ನರೇಂದ್ರ ಮೋದಿ ಅವರು ರೂಪಿಸಿರುವ ಕಾರ್ಯಕ್ರಮಗಳಲ್ಲಿ ದೇಶದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಚಿಂತನೆ ಇದೆ. ಒಳ್ಳೆಯ ಕೆಲಸ ಯಾವುದೇ ಪಕ್ಷ ಮಾಡಿದ್ದರೂ ಅದನ್ನು ಹೇಳಬೇಕು. ನೀವುಗಳು ನೀಡುವ ಶಕ್ತಿಯಿಂದ ನಾವು ಬೆಳೆಯುತ್ತೇವೆ ನಮಗೆ ದೇಶ ಮುಖ್ಯ ಭಾರತ ಮಾತೆ ನಮ್ಮಮ್ಮ ಅವಳ ರಕ್ಷಣೆಗೆ ನಾನು ನಿಮ್ಮ ಜೊತೆ ಇರುತ್ತೇನಿ. ಮೇ 15ರ ನಂತರ ವೇದಿಕೆ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದರು.
ದಸಂಸ ಹಿರಿಯ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ದಲಿತರು ಇಂದಿರಾ ಗಾಂಧಿ ಮಕ್ಕಳು ಎಂದು ಕಾಂಗ್ರೆಸ್ ನವರು ಓಟಿಗಾಗಿ ಬಳಸಿಕೊಂಡರು. ದಲಿತರನ್ನು ದಲಿತರಾಗಿಯೇ ಉಳಿಸಿದರೇ ವಿನಃ ಅಭಿವೃದ್ಧಿಗೆ ಯಾವ ಕೊಡುಗೆ ನೀಡಲಿಲ್ಲ. ಮೋದಿಯವರು ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಿ ಆತ್ಮ ವಿಶ್ವಾಸ ತುಂಬಿದ್ದಾರೆ. ಇಲ್ಲಿ ನಮ್ಮ ನಾಯಕ ಬೆಳ್ಶಿ ಪ್ರಕಾಶ್ ದಲಿತರ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ಬಿಜೆಪಿ ಮಂಡಲಾಧ್ಯಕ್ಷ ದೇವಾನಂದ್, ಮಾಲಿನಿ ಬಾಯಿ, ಬೀರೂರು ಪುರಸಭೆ ಅಧ್ಯಕ್ಷೆ ವನಿತಾ ಮಧು, ಸುದರ್ಶನ್, ಬಿದರೆ ಜಗದೀಶ್, ಶ್ರೀನಿವಾಸನಾಯ್ಕ,ರಾಜಾ ನಾಯ್ಕ, ಹುಲ್ಲೇಹಳ್ಳಿ ಲಕ್ಷ್ಣಣ್, ನಾಗರಾಜು, ಕುರುಬಗೆರೆ ಮಹೇಶ್ ಮತ್ತಿತರರು ಇದ್ದರು.25ಕಕೆಡಿಯು1