ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು: ಕೆ.ಟಿ.ಹನುಮಂತು

KannadaprabhaNewsNetwork | Published : Apr 14, 2025 1:19 AM

ಸಾರಾಂಶ

19ನೇ ಶತಮಾನದಲ್ಲಿಯೇ ಭಾರತ ದೇಶಕ್ಕೆ ಅರ್ಥಶಾಸ್ತದಲ್ಲಿ ಪ್ರಬಂಧ ಮಂಡಿಸಿ ಆರ್ಥಿಕ ಕ್ಷೇತ್ರದ ಬೆಳೆವಣಿಗೆಗೆ ಪೂರಕ ಯೋಜನೆ ನೀಡಿದ್ದರು. ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಪ್ರೇರಣೆಯಾದರು. ಇಂತಹ ಆರ್ಥಿಕ ತಜ್ಞ ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿಯು ಸ್ವಲ್ಪದಲ್ಲಿಯೇ ಕೈ ತಪ್ಪಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್ಥಿಕ ತಜ್ಞರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಪೊಲೀಸ್ ಕಾಲೋನಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಪದವಿ ಮತ್ತು ಪಿಜಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ ಸಭಾಂಗಣದಲ್ಲಿ ಕೃಷಿಕ ಅಲಯನ್ಸ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ನಡೆದ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಅಂಗವಾಗಿ ಬಾಬಾ ಸಾಹೇಬ್ ಒಂದು ಚಿಂತನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

19ನೇ ಶತಮಾನದಲ್ಲಿಯೇ ಭಾರತ ದೇಶಕ್ಕೆ ಅರ್ಥಶಾಸ್ತದಲ್ಲಿ ಪ್ರಬಂಧ ಮಂಡಿಸಿ ಆರ್ಥಿಕ ಕ್ಷೇತ್ರದ ಬೆಳೆವಣಿಗೆಗೆ ಪೂರಕ ಯೋಜನೆ ನೀಡಿದ್ದರು. ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಪ್ರೇರಣೆಯಾದರು. ಇಂತಹ ಆರ್ಥಿಕ ತಜ್ಞ ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿಯು ಸ್ವಲ್ಪದಲ್ಲಿಯೇ ಕೈ ತಪ್ಪಿತು ಎಂದು ವಿಷಾದಿಸಿದರು.

ಅಂಬೇಡ್ಕರ್ ಅಂದಿನ ಕಾಲದಲ್ಲಿಯೇ ಇಂಗ್ಲೇಂಡ್, ಅಮೆರಿಕಾ ಸೇರಿದಂತೆ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಓದಿದ್ದಾರೆ. ಸುಮಾರು 32 ಪದವಿ ಪಡೆದಿದ್ದಾರೆ. ಈ ಜ್ಞಾನದ ಸಂಕೇತವಾಗಿ ಅವರ ಪ್ರತಿಮೆಗಳನ್ನು ನಿರ್ಮಿಸಿ ವಿಶ್ವಜ್ಞಾನಿ ಎಂದು ಘೋಷಿಸಿ ಸ್ಮರಿಸುತ್ತಿದ್ದಾರೆ ಎಂದರು.

ಅಂಬೇಡ್ಕರ್ ಅವರು ಕೇವಲ 64 ವರ್ಷಗಳ ಕಾಲ ಬದುಕಿದ್ದರು. ಅವರ ಸಾಧನೆ, ಕೊಡುಗೆಗಳಿಂದ ಸೂರ್ಯ- ಚಂದ್ರ ಇರುವ ತನಕ ಅಂಬೇಡ್ಕರ್ ಅವರು ಜೀವಂತವಾಗಿರುತ್ತಾರೆ ಎಂದರು.

ಅಂಬೇಡ್ಕರ್ ಜಯಂತಿಯನ್ನು ಒಂದು ದಿನಕ್ಕೆ ಸೀಮಿತಲ್ಲ ವರ್ಷ ಪ್ರತಿದಿನವೂ ಆಚರಿಸಬೇಕು. ವಿದ್ಯಾರ್ಥಿಗಳು ಸಂವಿಧಾನ ಮತ್ತು ಅಂಬೇಡ್ಕರ್ ರಚಿಸಿರುವ ಕೃತಿಗಳನ್ನು ಓದಿದರೆ ಉಪಯುಕ್ತ ಮಾಹಿತಿ ನಿಮಗೆ ಲಭ್ಯವಾಗುತ್ತದೆ ಎಂದರು.

ಇದೇ ವೇಳೆ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ನಿವೃತ್ತ ವಿಭಾಗಿಯ ಪ್ರಬಂಧ ಕೆ.ರಾಮಕೃಷ್ಣ ಮತ್ತು ಹಿರಿಯ ಪ್ರಬಂಧ ಚಂದ್ರಹಾಸ್ ಇವರಿಗೆ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಪ್ರತಿಭಾಂಜಲಿ ಡೇವಿಡ, ನಿಲಯ ಪಾಲಕರಾದ ವೈ.ಡಿ. ನಿರ್ಮಲ, ಎನ್.ಲತಾ, ಅಲಯನ್ಸ್ ಸಂಸ್ಥೆ ಜಿಲ್ಲಾ 2ನೇ ಉಪ ರಾಜ್ಯಪಾಲ ಕೆ.ಎಸ್.ಚಂದ್ರಶೇಖರ್ , ಕೃಷಿಕ ಅಲಯನ್ಸ ಸಂಸ್ಥೆ ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ಎಸ್.ಸಿ.ಮಲ್ಲೇಶ, ಎ.ಆರ್.ಕುಮಾರ್, ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಇದ್ದರು.

Share this article