ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರದ ವತಿಯಿಂದ ದಲಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವು ನೀಡುತ್ತಿದ್ದ ಎಸ್ಸಿಎಸ್ಪಿ- ಟಿಎಸ್ಪಿ ಅನುಧಾನವನ್ನು ಈ ಸಾಲಿನಿಂದ ತಡೆ ಹಿಡಿದು, ಹೊಸ ಆದೇಶವನ್ನು ಹೊರಡಿಸಿದ್ದು, ಹೊಸ ಆದೇಶವು ಅವೈಜ್ಞಾನಿಕ ಮತ್ತು ದಲಿತ ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಹುನ್ನಾರ ಅಡಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಆವೈಜ್ಞಾನಿಕ ಆದೇಶವನ್ನು ರದ್ದುಪಡಿಸಿ, ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯವಾಗಿ ದೊರಕಬೇಕಾದ ಅನುದಾನ ನೀಡಬೇಕು. ಒಂದು ವೇಳೆ ಹೊಸ ಆದೇಶವನ್ನು ಹಿಂಪಡೆಯದಿದ್ದರೇ ರಾಜ್ಯಾದ್ಯಂತ ಪ್ರತಿ ವಿವಿಗಳಲ್ಲೂ ಪ್ರತಿಭಟಣೆ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.ಇಂದು ಕಪ್ಪು ಪಟ್ಟಿ ಪ್ರದರ್ಶನ
ಮಾನಸಗಂಗೋತ್ರಿಯಲ್ಲಿ ಎಸ್ಸಿ ಎಸ್ಟಿ ನೌಕರರು ಶನಿವಾರ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಸಚಿವರು ಅತಿಥಿಯಾಗಿ ಬರುತ್ತಿರುವುದರಿಂದ, ಸಚಿವರ ವಿರುದ್ಧ ಈ ಆದೇಶವನ್ನು ರದ್ದು ಪಡಿಸಿ ಎಂದು ಒತ್ತಾಯಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಪ್ರತಿಭಟನೆಯಲ್ಲಿ ತೀರ್ಮಾನಿಸಲಾಯಿತು.ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ತೀಕ್ ಲಿಂಗರಾಜು, ಪ್ರದೀಪ್ ಮುಮ್ಮಡಿ, ವರಹಳ್ಳಿ ಆನಂದ, ಲಿಂಪನ್ ರಾಜು, ಕಿರಣ್, ನಟರಾಜ್, ಬಾಬು, ಶಶಿಕುಮಾರ್, ದೀಪು ಪ್ರಸಾದ್, ವಿಶ್ವಪ್ರಸಾದ್, ಮಲ್ಲೇಶ್, ಶೇಷಣ್ಣ, ಧೀರಜ್, ಯೋಗೇಶ್ ಮೊದಲಾದವರು ಇದ್ದರು.