ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಭಾರತವನ್ನು ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾನ್ ಮಾನವತಾವಾದಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಹೊರವಲಯದ ಸಮಾನತಾ ಸೌಧದ ಆವರಣದಲ್ಲಿ ಆಯೋಜಿಸಲಾಗಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪನಮನವನ್ನು ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ವಿಶ್ವಜ್ಞಾನಿ, ಮಹಾನ್ ಸಮಾನತವಾದಿ, ಸ್ವಾಭಿಮಾನಿಯಾಗಿ ಜೀವನ ಸಾಗಿಸಿದವರು. ಭಾರತದಲ್ಲಿರುವ ಅಸಮಾನತೆ, ಜಾತೀಯತೆಯನ್ನು ತೊಳೆದುಹಾಕಿ ಮಾನವರೆಲ್ಲರೂ ಒಂದೇ ಜಾತಿ ಎಂದು ಸಾರಿದ ಅವರು ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡಿಪಾಡಿಗಿಟ್ಟಿದ್ದರು. ಎಲ್ಲರಿಗೂ ಸಮಾನವಾದ ಕಾನೂನು ಜಾರಿಯಾಗಲೆಂದು ಸಂವಿಧಾನವನ್ನು ರಚಿಸಿ ದೇಶಕ್ಕೆ ಕೊಟ್ಟಿರುವ ಸಂವಿಧಾನದವನ್ನು ರಚಿಸಿದರು. ಇಂತಹ ಮಹಾ ಪುರುಷರ ಆಶಯವನ್ನು ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ತಿಳಿಸಿದರು.ನಮ್ಮ ರಾಷ್ಟ್ರದ ಅವಕಾಶವಿಲ್ಲದಿರುವ ಪ್ರತಿಯೊಬ್ಬರು ಕೂಡ ಮನಸಾಇಚ್ಚಾ ಯಾವುದೇ ಕಾರ್ಯವನ್ನು ಸಾಧನೆ ಮಾಡಬಹುದೆಂದು ತೋರಿಸಿಕೊಟ್ಟವರು ಬಾಬಾಸಾಹೇಬ್ ಅವರು. ಸಾಮಾಜಿಕ ಬೆಂಬಲವಿಲ್ಲ, ಆರ್ಥಿಕವಾದ ಬೆಂಬಲವಿಲ್ಲ, ಅಂತಹ ಅಂಧಕಾರ ಕಾಲದಲ್ಲಿ ಇವೆಲ್ಲವನ್ನೂ ಮೆಟ್ಟಿನಿಂತು, ಜ್ಞಾನವನ್ನು ಸ್ವಯಂ ಪ್ರತಿಭೆಯಿಂದ ಬೆಳೆದುನಿಂತರು. ಇಂದಿನ ಆಧುನಿಕ ಯುಗದಲ್ಲಿ ಅಂತಹ ಮಹಾನ್ ಪುರುಷರನ್ನು ಇಂದಿನ ನಮ್ಮ ದೇಶದ ಪ್ರತಿಯೊಬ್ಬ ಜನಾಂಗಕ್ಕೂ ಮತ್ತು ಯುವಕರಿಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಾಹಕ ಜೆ.ಕೆ.ಹೊನ್ನಯ್ಯ ಮಾತನಾಡಿ, ಇಡೀ ಪ್ರಪಂಚವೇ ಚಲಿಸುತ್ತಿರುವುದು ಪ್ರೀತಿ ಮತ್ತು ಭಕ್ತಿಯಿಂದ ಮಾತ್ರ. ಇಂತಹ ಪ್ರೀತಿ ಮತ್ತು ಭಕ್ತಿಗೆ ಅರ್ಹವ್ಯಕ್ತಿ ಎಂದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು. ಅವರ ಬದುಕಿಗೂ ಆರಚಣೆಗೂ ವ್ಯತ್ಯಾಸವಿರಲಿಲ್ಲ. ಇಂದಿನ ದಿನಗಳಲ್ಲಿ ನಾವೆಲ್ಲರೂ ಮಾತನಾಡುವ ಪ್ರಾಮಾಣಿಕತೆ ಎಂಬ ಪದದ ಮತ್ತೊಂದು ರೂಪವೇ ಡಾ.ಬಿ.ಆರ್.ಅಂಬೇಡ್ಕರ್ ಅವರು. ತಮ್ಮ ಇಡೀಜೀವನ, ಜೀವ, ಬದುಕನ್ನು ಶೋಷಿತವರ್ಗಕ್ಕೆ ಮೀಸಲಿಟ್ಟಿದ್ದರು, ಪ್ರಮುಖವಾಗಿ ಮಹಿಳೆಯರಿಗೆ ಸಮಾನತೆಯ ಮುಕುಟ ಪ್ರಾಯದ ರೀತಿಯಲ್ಲಿ ಸಂವಿಧಾನದಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟರು.ನಮಗೆ ಡಾ.ಬಿ.ಆರ್.ಅಂಬೇಡ್ಕರ್ ಎಂದಕ್ಷಣ ನೆನಪಿಗೆಬರುವುದು ಸಂವಿಧಾನ ಎನ್ನುವ ಬೃಹತ್ ವೇದಿಕೆ. ಆದರೆ ಭಾರತದಲ್ಲಿ ಸಮಾನತೆ, ಮೂಲಭೂತ ಹಕ್ಕು ಮತ್ತು ಮೂಲಭೂತ ಕರ್ತವ್ಯಗಳನ್ನು ನೀಡಿದಂತಹ ಮಹಾನ್ ಮೇಧಾವಿ ಎಂದು ತಿಳಿಸಿದರು.
ಆರ್ಟಿಕಲ್-12-35:ಮೂಲಭೂತ ಹಕ್ಕುಗಳು ಎಂಬುದು ನೋಡಿದಾಗ ನಮ್ಮ ಸಂವಿಧಾನದಲ್ಲಿ ಆರ್ಟಿಕಲ್- 12ರಿಂದ 35ರಲ್ಲಿ ಮೊದಲನೆಯದಾಗಿ ಸ್ವಾತಂತ್ರದ ಹಕ್ಕು. ಆದರೆ ನಮಗೆ ಯಾವ ರೀತಿಯ ಸ್ವಾತಂತ್ರ್ಯಬೇಕು ಎಂಬುದನ್ನು ಅಡಿಗಲ್ಲಾಗಿ ರೂಪಿಸಿದಂತಹದ್ದು ಸಂವಿಧಾನ. ಸಮಾನತೆಯ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶಿಕ್ಷಣ ಮತ್ತು ಸಂಸ್ಕೃತಿ ಹಕ್ಕು, ಜೊತೆಗೆ ಸಂವಿಧಾನಬದ್ಧ ಪರಿಹಾರ ಹಕ್ಕು, ಆರ್ಟಿಕಲ್-32, ಇದನ್ನು ಅಂಬೇಡ್ಕ ಅವರ ಆತ್ಮ ಎಂದು ಸಹ ಹೇಳುತ್ತಾರೆ. ನಮ್ಮ ಮೂಲಭೂತ ಹಕ್ಕುಗಳನ್ನು ಸರ್ಕಾರವಾಗಲಿ, ಅರೆಸರ್ಕಾರವಾಗಲಿ ಅಥವಾ ಯಾವುದೇ ಪ್ರಜೆಯಾಗಲಿ ತೊಂದರೆ ಮಾಡಿದಲ್ಲಿ ಅದಕ್ಕೆ ಪರಿಹಾರವಾಗಿ ಆರ್ಟಿಕಲ್-32ರ ಮೂಲಕ ರಿಟ್-ಅರ್ಜಿಗಳನ್ನು ಸಲ್ಲಿಸಿ ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನಮ್ಮ ಹಕ್ಕನ್ನು ಮುಟುಕುಗೊಳಿಸುಲು ಸಾಧ್ಯವಿಲ್ಲೆಂಬುದು ನೀರೂಪಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಎಚ್.ಪಿ. ಬಣದ ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ಉಪ ತಹಸೀಲ್ದಾರ್ ಆಶಾ, ತಾ.ಪಂ. ಕಾರ್ಯನಿರ್ವಾಹಕ ಜೆ.ಕೆ.ಹೊನ್ನಯ್ಯ, ಪೌರಾಯುಕ್ತೆ ಡಿ.ಎಂ.ಗೀತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ-ಚಿನ್ನಪ್ಪಗೌಡನಾಯ್ಕರ್, ವ್ಯವಸ್ಥಾಪಕ ಅಂಜಿನಪ್ಪ,ನಗರಸಭೆಯ, ಅಧ್ಯಕ್ಷರು-ಲಕ್ಷ್ಮೀನಾರಾಯಣಪ್ಪ, ತಾಲೂಕಿನ ಅಂಬೇಡ್ಕರ್ ಸಂಘ ಸಮಿತಿ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರುಗಳು, ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರು, ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿ ಬಳಗದವರು, ಸಾರ್ವಜನಿಕರು ಭಾಗವಹಿಸಿದ್ದರು.