ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸದಾ ಹೋರಾಟ ಮಾಡುತ್ತಾ ಬಂದಿರುವ ಡಾ.ಚಂದ್ರಶೇಖರ ಪಾಟೀಲರಿಗೆ ಪ್ರತಿಯೊಬ್ಬ ಪದವೀಧರ ಮತದಾರರು ಮತ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಹೇಳಿದರು. ಅವರು ಭಾನುವಾರ ಈಶಾನ್ಯ ಕರ್ನಾಟಕ ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಚಂದ್ರಶೇಖರ ಬಿ.ಪಾಟೀಲ್ ಪರವಾಗಿ ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಚಂದ್ರಶೇಖರ ಪಾಟೀಲ್ ಅವರು ಜನಸೇವಾ ಮನೋಭಾವನೆ ಹೊಂದಿದ್ದು, ಪದವೀಧರರ ಹಲವು ಸಮಸ್ಯೆ ಅರಿತುಕೊಂಡಿದ್ದಾರೆ. ಈಗಾಗಲೇ ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಅನೇಕ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರಿಗೆ ಜೂ.3ರಂದು ನಡೆಯುವ ಚುನಾವಣೆಯಲ್ಲಿ ಪದವೀಧರ ಮತದಾರರು ಮೊದಲ ಪ್ರಾಶಸ್ತ್ಯ 1ಕ್ಕೆ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.