ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಚನ್ನಬಸವಾಶ್ರಮದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಸಾಹಿತಿ ಡಾ.ಸಿದ್ದು ಯಾಪಲಪರವಿ ಅವರು ತಮ್ಮ ಅನುಭಾವ ನುಡಿಗಳನ್ನು ನುಡಿದು ಜೀವನದಲ್ಲಿ ಬದಲಾವಣೆಗಳು ನಿರಂತರ ಆಗುತ್ತವೆ.ಆ ನಿಟ್ಟಿನಲ್ಲಿ ಭಾಲ್ಕಿ ಮಠದ ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಬಸವತತ್ವ ಪ್ರಸಾರ ಕಾರ್ಯ ಮತ್ತು ಶೈಕ್ಷಣಿಕ ಸೇವೆ ಅನನ್ಯವಾಗಿದೆ ಎಂದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆಗೈದ ಡಾ.ರಾಮನಗೌಡ, ಡಾ.ಪ್ರಶಾಂತ ಅಳ್ಳೆ, ಡಾ.ವಿವೇಕ ನಿಂಬೂರ, ಡಾ. ವಿ.ವಿ ನಾಗರಾಜ, ಜಿ.ಬಿ. ವಿನಯಕುಮಾರ ಮತ್ತು ಪ್ರಕಾಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಚನ್ನಬಸವಾಶ್ರಮದಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾದ ಶಶಿಕಲಾ ಅಶೋಕ ಸಿಂಧನಕೆರೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಅಕ್ಕನ ಬಳಗದವರಿಂದ ತೊಟ್ಟಿಲು ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ, ರೋಟರಿ ಕ್ಲಬ್ ಅಧ್ಯಕ್ಷ ಸಂಜುಕುಮಾರ ಪಂಡರಗೇರೆ, ವಿಜಯಕುಮಾರ ರಾಜಭವನ, ಸಂಗಮೇಶ ಕಾರಬಾರಿ ಉಪಸ್ಥಿತರಿದ್ದರು. ನೀಲಮ್ಮ ವಿ.ಕೆ.ಪಾಟೀಲ ಅವರಿಂದ ಬಸವಗುರುಪೂಜೆ ನೆರವೇರಿತು. ಲೋಕನಾಥ ಚಾಂಗ್ಲೇರ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.