ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ

KannadaprabhaNewsNetwork |  
Published : Nov 08, 2026, 03:00 AM IST
ಕೆ ಕೆ ಪಿ ಸುದ್ದಿ 01: ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾ ಸವಾ ಆಆಂದೋಲನದಲ್ಲಿ ಸಚಿವ ಬಾಲಕೃಷ್ಣ ಸಾರ್ವಜನಿಕರಿಂದ ಅಹವಾಲು ಗಳನ್ನು ಸ್ವೀಕರಿಸಿದರು.  | Kannada Prabha

ಸಾರಾಂಶ

ಜಮಖಂಡಿ ನಗರದ ಓಲೆಮಠದಲ್ಲಿ ಶನಿವಾರ ನಡೆದ ಲಿಂ.ಡಾ.ಅಭಿನವಕುಮಾರ ಚೆನ್ನಬಸವ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶ್ರೀಮಠದ ಕರ್ಣಧಾರತ್ವ ವಹಿಸಿಕೊಂಡಿರುವ ಆನಂದ ದೇವರ ನಿರಂಜನ ಚರಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದಲ್ಲಿ ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕಾವ್ಯ ರಚನೆಗೆ ಸಂವೇದನಾಶೀಲತೆ ಅಗತ್ಯ ಸಂವೇನಾಶೀಲರಾಗಿದ್ದ ಲಿಂ.ಡಾ.ಚೆನ್ನಬಸವ ಶ್ರೀಗಗಳಲ್ಲಿ ಒಳ್ಳೆಯ ಕವಿ ಹೃದಯವಿತ್ತು. ಅಂತೆಯೇ ಉತ್ಕೃಷ್ಟ ಕಾವ್ಯ ರಚನೆ ಮಾಡಿ ಋಷಿ ಜೀವನ ನಡೆಸಿದವರು ಎಂದು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ನಗರದ ಓಲೆಮಠದಲ್ಲಿ ಶನಿವಾರ ನಡೆದ ಲಿಂ.ಡಾ.ಅಭಿನವಕುಮಾರ ಚೆನ್ನಬಸವ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶ್ರೀಮಠದ ಕರ್ಣಧಾರತ್ವ ವಹಿಸಿಕೊಂಡಿರುವ ಆನಂದ ದೇವರ ನಿರಂಜನ ಚರಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 13ನೇ ಶತಮಾನ ಬಳಿಕ ದ್ವಿಪದಿಯಲ್ಲಿ ಬಸವ ಪುರಾಣ ಬರೆದವರು ಡಾ.ಚೆನ್ನಬಸವ ಶ್ರೀಗಳು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅದ್ಭುತ ಸ್ಥಾನ ಪಡೆದಿರುವ ಅವರ ಹೆಸರು ಸ್ಥಿರಸ್ಥಾಯಿಯಾಗಿದೆ. ಅವರು ರಚಿಸಿರುವ ಉತ್ಕೃಷ್ಟ ಸಾಹಿತ್ಯ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು ಎಂದರು.

ಆನಂದ ದೇವರು ಹಳ್ಳಿಹಳ್ಳಿಗೆ ಹೋಗಿ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿ ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡಲು ಅವರ ಪಟ್ಟಾಭಿಷೇಕ ಮಾಡುವುದು ಅಗತ್ಯ. ಬರುವ ಮಾರ್ಚ್ ತಿಂಗಳಿನಲ್ಲಿ ಬಸವ ಪುರಾಣ ಹಮ್ಮಿಕೊಳ್ಳುವುದು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬರುವ ಬಸವ ಜಯಂತಿ ದಿನದಂದು ಪೂಜ್ಯರ ಪಟ್ಟಾಧಿಕಾರ ಸಮಾರಂಭ ಏರ್ಪಡಿಸಲು ಸಮಾಜದ ಎಲ್ಲ ಗುರು-ಹಿರಿಯರು ನಿಶ್ಚಯಿಸಿದ್ದಾರೆ ಎಂದು ತಿಳಿಸಿದರು.

ಮನಕವಾಡದ ಶ್ರೀದೇವ ಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ವಾಮಿ ಆದವರು ಸಮಾಜ ಕಟ್ಟಬೇಕು. ಸಮಾಜ ಸ್ವಾಮಿಗಳಿಗೆ ಪಟ್ಟ ಕಟ್ಟಬೇಕು. ಧಾರ್ಮಿಕ ಸಂಸ್ಕಾರ ಕೊಟ್ಟು ಅಧಿಕಾರವಾಣಿಯ ಶಕ್ತಿ ತುಂಬುವುದೇ ಪಟ್ಟಾಧಿಕಾರ ಎಂದು ಅಭಿಪ್ರಾಯ ಪಟ್ಟರು.

ತೇರದಾಳ ಶಾಸಕ ಸಿದ್ದು ಸವದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಡಾ.ಚೆನ್ನಬಸವ ಶ್ರೀಗಳು ತಾವು ಹೇಳಬೇಕಾಗಿದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಯಾವುದೇ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುತ್ತಿದ್ದರು. ಅವರು ರಚಿಸಿದ ಸಾಹಿತ್ಯ ಮತ್ತು ನೀಡಿದ ಪ್ರವಚನಗಳನ್ನು ಸ್ಮರಿಸಿ ಪರಂಪರೆ ಉಳಿಸುವುದೆ ಪುಣ್ಯಾರಾಧನೆ ಎಂದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಾವೇರಿಯ ಹುಕ್ಕೇರಿ ಮಠದ ಡಾ.ಸದಾಶಿವ ಸ್ವಾಮೀಜಿ ಬೆಳಗಾವಿಯ ಶ್ರೀನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಮುತ್ತೂರಿನ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಹುನ್ನೂರಿನ ವಿಶ್ವನಾಥಶಾಸ್ತ್ರೀ ಕೊಣ್ಣೂರಮಠ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ಕೆ.ಕೆ. ತುಪ್ಪದ, ಬಸಯ್ಯ ಸಿದ್ಧಗಿರಿಮಠ, ಪ್ರೊ.ಬಸವರಾಜ ಕಡ್ಡಿ, ಡಾ.ಎಚ್.ಜಿ. ದಡ್ಡಿ, ಬಿ.ಎಸ್. ಸಿಂಧೂರ, ಎ.ಆರ್. ಶಂಧೆ, ರಾಜೇಸಾಬ ಕಡಕೋಳ, ಸದಾಶಿವ ಕವಟಗಿ, ಎಸ್.ಆರ್. ಶಿರೋಳ, ಮಹಾದೇವ ಇಟ್ಟಿ, ಶಿವಾನಂದ ಕುಲ್ಲೋಳ್ಳಿ, ಡಾ.ಟಿ.ಪಿ. ಬಾಂಗಿ, ಸಿ.ಎಸ್. ಬಾಂಗಿ, ಕಾಡು ಮಾಳಿ, ಈಶ್ವರ ಕರಬಸನವರ ಇತರರು ಇದ್ದರು.

ಸಾನಿಯಾ ಹುನಗುಂದ ಹಾಗೂ ತಂಡದವರು ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ-ಅಲ್ಲಮಪ್ರಭು ನಡುವೆ ನಡೆದ ಸನ್ನಿವೇಶದ ನೃತ್ಯ ಪ್ರದರ್ಶನ ನೀಡಿದರು. ಸರಸ್ವತಿ ಸಬರದ, ಹನುಮಂತ ಅಂಕದ ವಚನ ಪ್ರಾರ್ಥಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ
ವಿದ್ಯುತ್ ಗುತ್ತಿಗೆದಾರರ ಧರಣಿ ಆರನೇ ದಿನಕ್ಕೆ