ಡಾ.ಜಗಜ್ಜೀವನ್ ರಾಮ್ ಚಿಂತನೆ ಎಲ್ಲರ ಬದುಕಿಗೂ ದೀಪಸ್ತಂಭ: ಸುಬ್ಬಪ್ಪ ಕೈಕಂಬ

KannadaprabhaNewsNetwork |  
Published : Apr 06, 2025, 01:48 AM IST
ಫೋಟೋ: ೫ಪಿಟಿಆರ್-ಜಗಜ್ಜೀವನ್ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಡಾ. ಬಾಬು ಜಗಜ್ಜೀವನ್ ರಾಮ್ ಜನ್ಮದಿನಾಚರಣೆ ನಡೆಯಿತು. | Kannada Prabha

ಸಾರಾಂಶ

ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಪುತ್ತೂರು ತಾಲೂಕು ಸಂಯುಕ್ತ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜ್ಜೀವನ್ ರಾಮ್ ಅವರ ೧೧೮ನೇ ಜನ್ಮ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಧೀಮಂತ ನಾಯಕ, ರಾಜಕೀಯ, ಸಾಮಾಜಿಕವಾಗಿ ಎಲ್ಲ ಅರ್ಹತೆಗಳನ್ನು ಹೊಂದಿ ಬದುಕಿದ ಡಾ. ಬಾಬು ಜಗಜ್ಜೀವನ್ ರಾಮ್ ಅವರು ಸಮಾಜದ ಶಕ್ತಿಯಾಗಿದ್ದು, ಸಮಾಜ ಸುಧಾರಕ, ರಾಜಕಾರಣಿ, ದಲಿತೋದ್ಧಾರಕರಾದ ಅವರ ಚಿಂತನೆಗಳು ನಮಗೆಲ್ಲಾ ದೀಪಸ್ತಂಭವಾಗಿದೆ. ಅವರನ್ನು ಅನುಕರಣೆ ಮಾಡುವುದಲ್ಲ ಅನುಸರಿಸಬೇಕು ಎಂದು ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹೇಳಿದರು.ಅವರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಪುತ್ತೂರು ತಾಲೂಕು ಸಂಯುಕ್ತ ಆಶ್ರಯದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜ್ಜೀವನ್ ರಾಮ್ ಅವರ ೧೧೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅನುಸ್ಮರಣಾ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಡಾ. ಬಾಬು ಜಗಜ್ಜೀವನ್ ರಾಮ್ ಅವರ ಬದುಕು ನಮಗೆಲ್ಲಾ ಸ್ಫೂರ್ತಿಯಾಗಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರ ಠಾಣೆಯ ವೃತ್ತ ನಿರೀಕ್ಷಕ ಜಾನ್ಸನ್ ಡಿಸೋಜ, ಉಪತಹಸೀಲ್ದಾರ್ ಸುಲೋಚನಾ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ವಿನಯ ಕುಮಾರಿ ಸ್ವಾಗತಿಸಿದರು. ಪ್ರೇಮಲತಾ ವಂದಿಸಿದರು. ಅಕ್ಷತಾ ಪೈ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಮಕ್ಕಳ ಭವಿಷ್ಯ ಸಂರಕ್ಷಿಸಲು ಪೋಲಿಯೋ ಹಾಕಿಸಿ: ಮುಂಡರಗಿ ನಾಗರಾಜ