ಕನ್ನಡ ನಾಡಿನ ಜೀವನದಿ ಕಾವೇರಮ್ಮನಿಗೆ ನಮಿಸಿ ರೈತರ ಸ್ಮರಿಸಿ ರೈತಗೀತೆಯೊಂದಿಗೆ ಗಾಯಕ ಕಿಕ್ಕೇರಿ ತಾವೇ ಸ್ವತಃ ಕಾವೇರಿ ಮಾತೆಗಾಗಿ ರಚಿಸಿದ ‘ಕಾಪಾಡು ತಾಯೆ ಕಾವೇರಿ ಕರುಣಾಳು ತಾಯೆ ನಿನಗೆ ನಮಿಪೆ ಕೃಪೆ ತೋರಮ್ಮ’ ಗೀತೆಗೆ ಜಿಲ್ಲಾಧಿಕಾರಿ ಕುಮಾರ್, ಅಧಿಕಾರಿಗಳು ತಲೆದೂಗಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಂತಾರಾಷ್ಟ್ರೀಯ ಖ್ಯಾತಿಯ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನಡೆಸಿಕೊಟ್ಟ ಸುಗಮ ಸಂಗೀತ ಗಾಯನ ರಸಸಂಜೆ ಪ್ರೇಕ್ಷಕರನ್ನು ಹೊಸ ಗಾಯನ ಲೋಕಕ್ಕೆ ಕರೆದುಕೊಂಡು ಹೋಯಿತು.
ಕೆ.ಆರ್.ಸಾಗರದ ಬೃಂದಾವನದಲ್ಲಿ ಶರನ್ನವರಾತ್ರಿಯ ಮರ್ಹಾನವಮಿಯ ಮುಸ್ಸಂಜೆ ಕಾವೇರಿ ಆರತಿ ನಂತರ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಂಡ ಹಾಡಿದ ಕನ್ನಡ ಗೀತೆಗಳ ಗುಚ್ಛ ಪಾಶ್ಚಾತ್ಯ ಸಂಸ್ಕೃತಿಗೆ ಸೆಡ್ಡು ಹೊತೆದು ಕನ್ನಡದ ಗಟ್ಟಿತನ ಸಾಬೀತುಗೊಳಿಸಿತು.
ಕನ್ನಡ ನಾಡಿನ ಜೀವನದಿ ಕಾವೇರಮ್ಮನಿಗೆ ನಮಿಸಿ ರೈತರ ಸ್ಮರಿಸಿ ರೈತಗೀತೆಯೊಂದಿಗೆ ಗಾಯಕ ಕಿಕ್ಕೇರಿ ತಾವೇ ಸ್ವತಃ ಕಾವೇರಿ ಮಾತೆಗಾಗಿ ರಚಿಸಿದ ‘ಕಾಪಾಡು ತಾಯೆ ಕಾವೇರಿ ಕರುಣಾಳು ತಾಯೆ ನಿನಗೆ ನಮಿಪೆ ಕೃಪೆ ತೋರಮ್ಮ’ ಗೀತೆಗೆ ಜಿಲ್ಲಾಧಿಕಾರಿ ಕುಮಾರ್, ಅಧಿಕಾರಿಗಳು ತಲೆದೂಗಿದರು.
ಪುರಂದರ ದಾಸರ ‘ದಾರಿ ಯಾವುದಯ್ಯ ವೈಕುಂಠಕೆ’ ಗೀತೆಯನ್ನು ಶ್ರೀರಂಗನಾಥನಿಗೆ ಸಮರ್ಪಿಸಲಾಯಿತು. ಶ್ರೋತೃಗಳ ಕೋರಿಕೆಯ ಮೇರೆಗೆ ರಾಷ್ಟ್ರಕವಿ ಕುವೆಂಪು ಅವರ ‘ಬಾ ಇಲ್ಲಿ ಸಂಭವಿಸು’ ಗೀತೆ, ಜಿ.ಎಸ್. ಶಿವರುದ್ರಪ್ಪ ಅವರ ‘ಕಾಣದ ಕಡಲಿಗೆೆ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’, ಭಾಷೆ ಅರಿಯದ ಬೃಂದಾವನ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಚಪ್ಪಾಳೆ ತಟ್ಟುವಂತೆ ಮಾಡಿತು.
ಸಂತ ಶಿಶುನಾಳ ಶರೀಫರ ‘ಕೋಡಗನ ಕೋಳಿ ನುಂಗಿತ್ತಾ’ ಮೈಸೂರ ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ‘ಹೆಂಡಿತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರೂಪಾಯಿ’, ದ.ರಾ ಬೇಂದ್ರೆಯವರ ‘ಕುರುಡು ಕಾಂಚಾಣ ಕುಣಿಯುತಲಿತ್ತು’, ‘ಶ್ರಾವಣ ಬಂತು ಕಾಡಿಗೆ’ ಹಾಡಿದ ಏರುಧ್ವನಿ ಪ್ರೇಕ್ಷಕರನ್ನು ಕಿಕ್ಕೇರಿಸಿತು.
ಸಮ್ಮೋಹನಗೊಳಿಸಿದ ಗಾಯನ ತಂಡ:
ಗಾಯಕ ಕಿಕ್ಕೇರಿಯೊಂದಿಗೆ ಗಾಯಕರಾದ ಜೋಗಿ ಸುನಿತಾ, ಶಶಿಕಲಾ ಸುನಿಲ್, ಅಮಿತ್ ಶೇಖರ್, ಸುಮಂತ್, ಭಾರದ್ವಾಜ್ ಧ್ವನಿಗೂಡಿಸಿದ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’. ‘ಚೆಲ್ಲಿದರೂ ಮಲ್ಲಿಗೆಯಾ’, ‘ಮಾಯದಂಥ ಮಳೆ ಬಂತಣ್ಣಾ’, ‘ಸುಗ್ಗಿ ಮಾಡೋಣಾ ಬಾರವ್ವಾ ಗೆಳತಿ’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’, ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ’, ‘ಉಧೋ ಉಧೋ ಎಲ್ಲಮ್ಮ’ ಚೌಡಿಕೆ ಪದ ಗೀತೆ, ‘ಐಗಿರಿ ನಂದಿನಿ ನಂದಿತಾ ಮೇದಿನಿ’ ಮತ್ತಿತರ ಗೀತೆ ಕಾವೇರಿ ನದಿಯ ಜುಳು ಜುಳು ನಾದಕ್ಕೆ ತಂಪೆರೆಸಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.