ದಾವಣಗೆರೆ ಅಭಿವೃದ್ಧಿಗೆ ಅಗತ್ಯ ಕ್ರಮಕ್ಕೆ ಡಾ.ಪ್ರಭಾ ಒತ್ತಾಯ

KannadaprabhaNewsNetwork |  
Published : Jul 26, 2026, 01:30 AM IST
25ಕೆಡಿವಿಜಿ8-ಚಿತ್ರದುರ್ಗದಲ್ಲಿ ಶನಿವಾರ ಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.................25ಕೆಡಿವಿಜಿ9-ಚಿತ್ರದುರ್ಗದಲ್ಲಿ ಶನಿವಾರ ಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು..................25ಕೆಡಿವಿಜಿ10-ಚಿತ್ರದುರ್ಗದಲ್ಲಿ ಶನಿವಾರ ಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉತ್ತರ ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯ 799 ಶುದ್ಧ ಕುಡಿಯುವ ಘಟಕಗಳ ದುರಸ್ತಿ, ಅರಣ್ಯ ಆಡಳಿತ ಪುನರ್ ವ್ಯವಸ್ಥೆಗೆ ಹಾಗೂ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಭದ್ರಾವತಿ ಅರಣ್ಯ ವಿಭಾಗದ ವ್ಯಾಪ್ತಿಯನ್ನು ದಾವಣಗೆರೆಗೆ ವರ್ಗಾಯಿಸಲು ಸಿಎಂಗೆ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ 799 ಶುದ್ಧ ಕುಡಿಯುವ ಘಟಕಗಳ ದುರಸ್ತಿ, ಅರಣ್ಯ ಆಡಳಿತ ಪುನರ್ ವ್ಯವಸ್ಥೆಗೆ ಹಾಗೂ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಜಿಲ್ಲೆಯ 799 ಶುದ್ಧ ನೀರಿನ ಘಟಕಗಳಲ್ಲಿ 94 ಘಟಕ ಕಾರ್ಯ ನಿರ್ವಹಿಸುತ್ತಿಲ್ಲ ಎಂದರು.

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಇದರಿಂದಾಗಿ ತೀವ್ರ ತೊಂದರೆ ಆಗುತ್ತಿದೆ. ಶುದ್ಧ ನೀರಿನ ಘಟಕಗಳ ದುರಸ್ತಿಗಾಗಿ ₹2.99 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಬಂದ ಅನುದಾನ ದುರಸ್ತಿ ಕಾಮಗಾರಿಗಳಿಗೆ ಕೈಗೊಳ್ಳಲು ಬಳಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಎರಡು ಪ್ರಾದೇಶಿಕ ಅರಣ್ಯ ವಿಭಾಗಗಳು ದಾವಣಗೆರೆ ಜಿಲ್ಲೆಗೆ ಒಳಪಡುತ್ತವೆ. ಭದ್ರಾವತಿ ಅರಣ್ಯ ವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆಡಳಿತಾತ್ಮಕ ತೊಂದರೆಯಗುತ್ತಿವೆ. ಈ ಎರಡೂ ವಿಭಾಗಗಳನ್ನು ದಾವಣಗೆರೆ ಆಡಳಿತ ವ್ಯಾಪ್ತಿಗೆ ವರ್ಗಾಯಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿ ಸಮರ್ಪಕ ಆಡಳಿತ, ಸಾರ್ವಜನಿಕ ಸೇವೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಗ್ರಾಮೀಣ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಸರ್ಕಾರದಿಂದಲೇ ಖರೀದಿಸಿ, ಮಾರುಕಟ್ಟೆ ಬೆಂಬಲ ಒದಗಿಸಬೇಕು. ಈ ಮೂಲಕ ಅಂತಹ ಮಹಿಳೆಯರರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮನವಿ ಮಾಡಿದರು.

- - -

(ಬಾಕ್ಸ್‌)

* ಬೆಳೆವಿಮೆ ಕಂತು ಶೇ.50 ಸಬ್ಸಿಡಿಗೆ ಸಮರ್ಥ ಮನವಿ

ದಕ್ಷಿಣ ಶಾಸಕ ಸಮರ್ಥ ಎಂ. ಶಾಮನೂರು ಮಾತನಾಡಿ, ರೈತರ ಹಿತದೃಷ್ಟಿಯಿಂದ ಬೆಳೆವಿಮೆ ಯೋಜನೆಯಲ್ಲಿ ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡುವ ಅಗತ್ಯವಿದೆ. ಬೆಳೆವಿಮೆ ಕಂತಿನಲ್ಲಿ ಕನಿಷ್ಠ ಶೇ.50ರಷ್ಟು ಸಬ್ಸಿಡಿ ನೀಡಿದರೆ ಹೆಚ್ಚಿನ ರೈತರು ವಿಮೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ರೈತರಿಗೆ ಆರ್ಥಿಕ ಭದ್ರತೆ ನೀಡಿದಂತಾಗುತ್ತದೆ. ದಾವಣಗೆರೆ ತಾಲೂಕಲ್ಲಿ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಮೂಲಕ ಬೆಳೆವಿಮೆ ಮಾಡುತ್ತಿದ್ದು, ಮೆಕ್ಕೆಜೋಳ ಬೆಳೆಗೆ ಹೆಕ್ಟೇರ್‌ಗೆ ಸುಮಾರು ₹2,500 ವಿಮೆ ಕಂತು ಪಾವತಿಸಬೇಕು. ಪರಿಹಾರವಾಗಿ ₹65 ಸಾವಿರ ಸಿಗುತ್ತದೆ. ಆರಂಭಿಕ ಕಂತಿನ ಮೊತ್ತವೇ ರೈತರಿಗೆ ಹೊರೆಯಾಗಿದೆ. ಕಂತಿನ ಮೊತ್ತ ಕಡಿಮೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದರು.

ಹೆಚ್ಚಿನ ರೈತರು ಬೆಳೆವಿಮೆ ಯೋಜನೆ ಲಾಭ ಪಡೆಯುವಂತೆ ಕೃಷಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ರೈತರನ್ನು ಯೋಜನೆಗೆ ಸೇರ್ಪಡೆಗೊಳಿಸಬೇಕು. ಗ್ರಾಪಂಗಳು ಪ್ರಮುಖ ಪೈಪ್‌ ಲೈನ್‌, ದೊಡ್ಡ ನೀರು ಸರಬರಾಜು ಘಟಕಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಣ್ಣ ಪೈಪ್‌ಲೈನ್‌, ಕಡಿಮೆ ಸಾಮರ್ಥ್ಯದ ನೀರಿನ ಮೂಲಗಳ ನಿರ್ವಹಣೆ ಕಡೆಗಣನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಕುಡಿಯುವ ನೀರಿನ ಮೂಲಗಳ ನಿರ್ವಹಣೆಗೆ ಸಮಾನ ಆದ್ಯತೆ ನೀಡಿ ಜನರಿಗೆ ನಿರಂತರ ಶುದ್ಧ ಕುಡಿಯುವ ನೀರೊದಗಿಸಬೇಕು ಎಂದು ಮನವಿ ಮಾಡಿದರು.

ಪಂಚಾಯಿತಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲು ಪ್ರತಿ ಗ್ರಾಪಂನಲ್ಲೂ ಪಿಡಿಒ, ಆರ್‌ಐ/ಆರ್‌ಎಲ್‌ಒ, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯವಾಗಿ ವಾಸ್ತವ್ಯ ಹೂಡಿ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಈಶ್ವರ ಬಿ.ಖಂಡ್ರೆ, ಕೆ.ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ, ಡಿ.ಜಿ. ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಶಿವಗಂಗಾ ವಿ. ಬಸವರಾಜ, ಸಮರ್ಥ ಎಂ.ಶಾಮನೂರು ಸೇರಿದಂತೆ ವಿಭಾಗದ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆಯಲ್ಲಿದ್ದರು.

ಬೆಂಗಳೂರು ಪ್ರಾದೇಶಿಕ ವಿಭಾಗಕ್ಕೊಳಪಡುವ ವಿವಿಧ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಅಭಿವೃದ್ಧಿ ಕಾಮಗಾರಿ ಪ್ರಗತಿ, ಸೌಕರ್ಯ ಅಭಿವೃದ್ಧಿ, ನೀರು, ರಸ್ತೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು.

- - -

-25ಕೆಡಿವಿಜಿ8: ಪ್ರಗತಿ ಪರಿಶೀಲನಾ ಸಭೆಯಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು. -25ಕೆಡಿವಿಜಿ9: ಸಭೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ಮಾತನಾಡಿದರು.-25ಕೆಡಿವಿಜಿ10: ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

28ಕ್ಕೆ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ
ಸಂಪುಟ ವಿಸ್ತರಣೆ ಮುನ್ನೆಲೆಗೆ: ಬರ ಪರಿಸ್ಥಿತಿ ಗಾಳಿಗೆ