ಮಿಸೆಸ್ ಕರ್ನಾಟಕ ಮಾಡೆಲ್ ಶ್ವೇತಾಗೆ ಡಾ.ಪ್ರಭಾ ಹಾರೈಕೆ

KannadaprabhaNewsNetwork | Published : May 12, 2024 1:18 AM

ಸಾರಾಂಶ

ತುಮಕೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸೆಸ್ ಕರ್ನಾಟಕ ಮಾಡೆಲ್ ಪ್ರಶಸ್ತಿ ಮುಡಿಗೇರಿಸಿಕೊಂಡ ದಾವಣಗೆರೆಯ ಶ್ವೇತಾ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಾವಣಗೆರೆ: ತುಮಕೂರು ಮಹಾನಗರದ ಎಸ್ ಮಾಲ್‌ನಲ್ಲಿ ವಿಂಗ್ಸ್ ಫ್ಯಾಷನ್ ಇವೆಂಟ್ಸ್‌ನಿಂದ ಮೇ 4ರಂದು ನಡೆದ ಮಿಸೆಸ್ ಕರ್ನಾಟಕ ಮಾಡೆಲ್ ಪ್ರಶಸ್ತಿಯು ದಾವಣಗೆರೆಯ ಶ್ವೇತಾ ಪಾಟೀಲ್‌ರ ಮುಡಿಗೇರಿದೆ. ಶ್ವೇತಾ ಸಾಧನೆ ಗಮನಿಸಿದ ಡಾ.ಪ್ರಭಾ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಾಂಗ್ರೆಸ್ ಮುಖಂಡ ಬಿ.ಎನ್.ರಂಗನಾಥ ಸ್ವಾಮಿ, ನಗರದ ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ಶ್ವೇತಾ ಪಾಟೀಲ್‌ ಸ್ಪರ್ಧೆಯಲ್ಲಿ ಮಿಸೆಸ್ ಕರ್ನಾಟಕ, ಮಿಸೆಸ್‌ ದಾವಣಗೆರೆ, ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡು, ಸಾಧನೆ ಮಾಡಿದ್ದಾರೆ ಎಂದರು.

ಶ್ವೇತಾ ಪಾಟೀಲರ ಸಾಧನೆ ಮೆಚ್ಚಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಸನ್ಮಾನಿಸಿ, ಗೌರವಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದ ಶ್ವೇತಾ ಪಾಟೀಲ್ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ ಎಂದರು.

ದಾವಣಗೆರೆ ಸಂಜೀವಿನಿ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆಯೂ ಆಗಿರುವ ಶ್ವೇತಾ ಪಾಟೀಲ್‌, ಕಾಲೇಜಿನ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿದ್ದಾರೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಂದ ಪ್ರಭಾವಿತರಾಗಿ, ಪಕ್ಷದ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಿಸೆಸ್ ಕರ್ನಾಟಕ ಮಾಡೆಲ್ ಪ್ರಶಸ್ತಿ ವಿಜೇತೆ ಶ್ವೇತಾ ಪಾಟೀಲ ಮಾತನಾಡಿ, ತಾಯಿ ಆರ್‌.ಎಚ್. ಲೀಲಾವತಿ ಹಾಗೂ ಪತಿ ಸಂತೋಷ ಪಾಟೀಲ್‌, ಸ್ನೇಹಿತರಾದ ಗಾಯತ್ರಿ, ವೀಣಾ, ದೇವಿಕಾ ಅವರ ಪ್ರೋತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಪ್ರಶಸ್ತಿ ಪಡೆಯಲು ಸಹಕಾರಿಯಾಯಿತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ವೇತಾ ಪಾಟೀಲರ ತಾಯಿ ಲೀಲಾವತಿ, ಅನಿಲ್ ಗೌಡ, ಶೀಲಾ ಇತರರು ಇದ್ದರು.

Share this article