ಸಂಗೀತ ಕ್ಷೇತ್ರಕ್ಕೆ ಡಾ.ಪುಟ್ಟರಾಜರ ಕಾಣಿಕೆ ಅಪಾರ

KannadaprabhaNewsNetwork |  
Published : Sep 28, 2024, 01:26 AM IST
ಪುಣ್ಯಸ್ಮರಣೆ | Kannada Prabha

ಸಾರಾಂಶ

ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಸಂಗೀತ ಲೋಕದ ದಿಗ್ಗಜರಾಗಿ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಾವಿರಾರು ಅಂಧ ಮಕ್ಕಳ ಬಾಳಿಗೆ ನಂದಾದೀಪವಾಗಿ, ಅನಾಥರ ಶ್ರಯೋಭಿವೃದ್ಧಿಗಾಗಿ ಗದಗಿನಲ್ಲಿ ಸಂಗೀತ ಪಾಠ ಶಾಲೆ ತೆರೆದು ಸಂಗೀತ ಲೋಕಕ್ಕೆ ಕಳಶಪ್ರಾಯರಾಗಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಸಂಗೀತ ಲೋಕದ ದಿಗ್ಗಜರಾಗಿ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಾವಿರಾರು ಅಂಧ ಮಕ್ಕಳ ಬಾಳಿಗೆ ನಂದಾದೀಪವಾಗಿ, ಅನಾಥರ ಶ್ರಯೋಭಿವೃದ್ಧಿಗಾಗಿ ಗದಗಿನಲ್ಲಿ ಸಂಗೀತ ಪಾಠ ಶಾಲೆ ತೆರೆದು ಸಂಗೀತ ಲೋಕಕ್ಕೆ ಕಳಶಪ್ರಾಯರಾಗಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸ್ಮರಿಸಿದರು.

ಪಟ್ಟಣದ ಕನ್ನಡ ಸಂಸ್ಕೃತಿ ಕಲಾಬಳಗ, ವಿಕಲಚೇತನರ ಕಲಾಬಳಗ, ಪುನಿತ್ ಮೆಲೋಡೀಸ್ ಕಲಾಬಳಗ ಮತ್ತು ಟ್ಯಾಕ್ಸಿ ಮತ್ತು ಕಾರು ಚಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು. ಪುಟ್ಟರಾಜ ಗವಾಯಿಗಳು 12ನೇ ಶತಮಾನದ ಭಕ್ತಿ ಚಳವಳಿಯ ಅನೇಕ ಶರಣರ ಜೀವನ ಚರಿತ್ರೆಗಳ ಜೊತೆಗೆ ಆಧ್ಯಾತ್ಮಿಕತೆ, ಧರ್ಮದ ಕುರಿತು ಹಲವು ಪುಸ್ತಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.ಬಹುಭಾಷಾ ಪಂಡಿತರಾಗಿದ್ದ ಗವಾಯಿಗಳು ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ, ಉಪನಿಷತ್‌, ಶ್ರೀ ರುದ್ರ ಸಂಗೀತವನ್ನು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸುವ ಮೂಲಕ ಪ್ರಖ್ಯಾತಿ ಹೊಂದಿದ್ದಾರೆ. ಪುಟ್ಟರಾಜ ಗವಾಯಿ ಅವರು ಸಂಗೀತ ಮಾತ್ರವಲ್ಲದೆ ನಾಟಕ ರಂಗಮಂದಿರ ಸಂಘಟಿಸಿ ನಾಟಕ ಕಂಪನಿಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸಾವಿರಾರು ರಂಗ ಕಲಾವಿದರನ್ನು ನಿರ್ಮಿಸಿದ್ದಾರೆ. ಭಕ್ತರಿಗೆ ಸಂಗೀತ ಜ್ಞಾನ ನೀಡಲು ಮೀಸಲಾದ ಸಂಗೀತ ಶಾಲೆಯಲ್ಲಿ ಅಂಗವಿಕಲರಿಗೆ, ಅಂಧ ಮಕ್ಕಳಿಗೆ ಆಶ್ರಯ ಕಲ್ಪಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದರು.ಕಾಂಗ್ರೆಸ್‌ ಮುಖಂಡ ಸಿ.ಬಿ.ಅಸ್ಕಿ ಹಾಗೂ ಕಸಾಪ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸಂಗೀತ ಪರಂಪರೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಅಂಧ, ಅನಾಥರ ಪಾಲಿನ ದೇವರಾಗಿರುವ ಗವಾಯಿಗಳ ಸಾಮಾಜಿಕ ಪರಿಕಲ್ಪನೆ ಹಾಗೂ ಕಳಕಳಿ ಸುವರ್ಣಾಕ್ಷರಗಳಿಂದ ದಾಖಲಿಸುವ ವಿಷಯ. ವಿಶೇಷಚೇತನರನ್ನು ಕೀಳಾಗಿ ಕಾಣುವ ಬದಲಾಗಿ ಅವಕಾಶ ನೀಡಿ ಗೌರವದಿಂದ ಕಾಣುವಂತಾಗಬೇಕು. ಇಂತಹ ಕಾರ್ಯಕ್ರಮಗಳು ಯುವಕರಿಗೆ ಮಾದರಿಯಾಗುವಂತಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಶರಣ ಸೋಮನಾಳದ ಮಹಾದೇವ ಶಾಸ್ತ್ರೀಗಳು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸೋಮನಗೌಡ ಪಾಟೀಲ(ನಡಹಳ್ಳಿ), ಎಸ್.ಕೆ.ಘಾಟಿ, ವಿ.ಐ.ಹಿರೇಮಠ, ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ, ಚಂದ್ರು ಅಂಬಲಿ, ದೀಪಾ ರತ್ನಶ್ರೀ, ವಿರೇಶ ಹಿರೇಗೌಡರ, ಚನಬಸು ಮಂಕಣಿ, ವಿನಾಯಕ ಗುರಿಕಾರ, ಶಿವು ಚಿನಿವಾರ, ಮಂಜುನಾಥಗೌಡ ಪಾಟೀಲ, ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ, ನಾಗೇಶ ಅಮರಾವತಿ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ