ಕನ್ನಡಪ್ರಭ ವಾರ್ತೆ, ಮಾಲೂರು
ನಿರ್ಗಳ, ಸ್ವಚ್ಛ ಕನ್ನಡ ಮಾತು
ಅವರ ನಿರ್ಗಳ, ಸ್ವಚ್ಛ ಕನ್ನಡ ಕೇಳಲು ಇಂಪಾಗಿತ್ತು. ಗೋಕಾಕ್ ಚಳವಳಿಗೆ ಅವರು ಕರೆ ನೀಡಿದಾಗ ಇಡೀ ರಾಜ್ಯದಲ್ಲಿನ ಕನ್ನಡ ಸಂಘಟನೆಗಳನ್ನು ಒಗ್ಗಟ್ಟಾಗಿ ಹೋರಾಟ ಮಾಡಿದ್ದವು. ಕರ್ನಾಟಕದಲ್ಲಿ ಕನ್ನಡ ವೇ ಸರ್ವಭೌಮ ಎಂದು ನಂಬಿದ್ದ ಡಾ.ರಾಜ್ ಕುಮಾರ್ ಅವರ ಆದರ್ಶ ಕನ್ನಡ ಪ್ರೇಮ ನಮ್ಮೆಗೆಲ್ಲ ಮಾದರಿ ಎಂದರು.ಕನ್ನಡಕ್ಕೆ ವಿಶೇಷ ಗೌರವ
ಎಲ್ಲ ಭಾಷೆಗೆ ಗೌರವ ನೀಡುತ್ತಿದ್ದ ಡಾ,ರಾಜ್ ಕುಮಾರ್ ಅವರು ಕನ್ನಡ ಭಾಷೆಗೆ ವಿಶೇಷ ಗೌರವ ನೀಡುತ್ತಿದ್ದರು. ಅವರ ಹಾದಿಯಲ್ಲಿ ಸಾಗಬೇಕಾದ ನಾವೆಲ್ಲರೂ ಜಾಗತೀಕರಣದ ಹೆಸರಿನಲ್ಲಿ ಹೆಚ್ಚಾಗಿರುವ ಕಾರ್ಖಾನೆ ,ಕಂಪನಿಗಳಿಂದ ಹಿಂದಿಭಾಷಿಕರ ಪ್ರಭಾವ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.ಕನ್ನಡ ಸಂಘಟನೆಗಳ ಮುಖಂಡರುಗಳಾದ ಎಸ್.ಎಂ.ವೆಂಕಟೇಶ್ ,ಎಂ.ಎಸ್.ಸುಬ್ರಮಣ್ಯ ಸ್ವರೂಪ್ ,ರಾಮಕೃಷ್ಣಪ್ಪ,ಶೀನಪ್ಪ,ದಯಾನಂದ್ ,ಚಾಕನಹಳ್ಳಿ ನಾಗರಾಜ್ ,ದೇವರಾಜ ರೆಡ್ಡಿ,ಸುರೇಶ್ ಕುಮಾರ್ ,ಜ್ವಾಲಮುಖಿ ಸತೀಶ್ ,ರವಿ,ಭೈರೇ ಗೌಡ ಇನ್ನಿತರರು ಇದ್ದರು.