ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದ ಡಾ.ನ. ರತ್ನ

KannadaprabhaNewsNetwork |  
Published : Dec 13, 2025, 01:15 AM IST
2 | Kannada Prabha

ಸಾರಾಂಶ

ಅಯಾನ್ ಶಾಂತಿ ಕುಟೀರ ನಾಟಕದ ಇಂಗ್ಲಿಷ್ ಅನುವಾದದ ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೈಸೂರುಡಾ.ನ. ರತ್ನ ಅವರು ಪ್ರತಿಯೊಬ್ಬರಲ್ಲೂ ಪ್ರತಿಭೆ ಹುಡುಕುವುದರ ಜೊತೆಗೆ ಎಲ್ಲರಿಗೂ ಅವಕಾಶ ಕೊಡುತ್ತಿದ್ದರು ಎಂದು ಕುವೆಂಪು ವಿವಿ ಕುಲಪತಿ ಡಾ.ಯು.ಎ. ಶರತ್ ಅನಂತಮೂರ್ತಿ ತಿಳಿಸಿದರು.ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಶುಕ್ರವಾರ ನಡೆದ ರಂಗ ರತ್ನ 2025ರ ಪ್ರಶಸ್ತಿ ಪ್ರದಾನ ಹಾಗೂ ಡಾ.ನ. ರತ್ನ ಅವರು ರಚಿಸಿರುವ ಅಯಾನ್ ಶಾಂತಿ ಕುಟೀರ ನಾಟಕದ ಇಂಗ್ಲಿಷ್ ಅನುವಾದದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ರತ್ನ ಅವರು ಯಾವಾಗಲೂ ನಟನೆ ಮಾಡಲು ಹಿಂದುಳಿದಿದ್ದ, ಪರದಾಡುತ್ತಿದ್ದ ವಿದ್ಯಾರ್ಥಿಗಳನ್ನೇ ಹೆಚ್ಚು ನೋಡಿ ತಿದ್ದುತ್ತಿದ್ದರು ಹಾಗೂ ಅವರೇ ಅವರಿಗೆ ನೆಚ್ಚಿನ ವಿದ್ಯಾರ್ಥಿಗಳಾಗಿದ್ದರು. ಅಸತ್ಯದ ವಿರುದ್ಧ ರತ್ನ ಅವರು ಯಾವಾಗಲೂ ಇರುತ್ತಿದ್ದರು. ಸತ್ಯದ ಕಡೆ ಸರಳತೆ ಬೇಕು. ಅದನ್ನು ತಮ್ಮ ಅಭ್ಯಾಸದಲ್ಲೂ ತೋರಿಸುತ್ತಿದ್ದರು ಎಂದರು.ವಯಸ್ಸಾದಂತೆ ಅಂತರಗಳು ಕಡಿಮೆಯಾಗುತ್ತದೆ. ಹೊಸ ಹೊಸ ಸವಾಲುಗಳು ಎದುರಾಗುತ್ತದೆ. ಕಾಲದ ಅಂತ್ಯದ ಕಡೆ ಬಂದಾಗ ಕೆಲವು ಪ್ರಶ್ನೆಗಳು ಉದ್ಭವವಾಗುತ್ತದೆ. ಹೀಗಾಗಿಯೇ ಅವರು ಅಯಾನ್ ಶಾಂತಿ ಕುಟೀರ ಎಂಬ ನಾಟಕ ಬರೆದರು. ರತ್ನ ಅವರಿಗೆ ಕೇವಲ ಗುರುತಿಸುವ ಕಣ್ಣು ಮಾತ್ರ ಇದ್ದದ್ದು. ನಾಟಕದ ನಂತರ ಬಹುತೇಕರು ಸಿನಿಮಾದ ಕಡೆ ಮುಖ ಮಾಡುತ್ತಿದ್ದಾರೆ. ನಾಟಕಕ್ಕೆ ಇರುವ ಶಕ್ತಿಯೇ ಬೇರೆ ಎಂದು ಅವರು ಹೇಳಿದರು.ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ರಂಗಕರ್ಮಿ ಪ್ರೊ. ರಾಮೇಶ್ವರಿ ವರ್ಮ ಮಾತನಾಡಿ, ಹಿರಿಯರಿಗೆ ಮಾಡಲು ನಾಟಕವೇ ಇಲ್ಲ. ತಾತ ಎಂಬ ಪಾತ್ರ ಬಿಟ್ಟರೆ ಅಜ್ಜಿಯ ಪಾತ್ರ ಇರುವುದೇ ಇಲ್ಲ ಎಂದು ಹೇಳಿದಾಗ ರತ್ನ ಅವರು ಹಿರಿಯರಿಗಾಗಿಯೇ ನಾಟಕ ಬರೆಯುತ್ತೇನೆ ಎಂದಿದ್ದರು. ಹಾಗೂ ಯಾರು ಯಾರು ಯಾವ ಪಾತ್ರ ಮಾಡಬೇಕೆಂದು ಅವರು ಮೊದಲೇ ನಿರ್ಧರಿಸುತ್ತಿದ್ದರು ಎಂದು ಸ್ಮರಿಸಿದರು. ರತ್ನ ನಾಟಕಗಳು ಇಂದಿಗೂ ಪ್ರಸ್ತುತರಂಗ ರತ್ನ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಡಾ. ಸಹನಾ ಪಿಂಜಾನ ಮಾತನಾಡಿ, ಇಂದು ಪ್ರಶಸ್ತಿಗಳನ್ನು ಪಡೆಯಲು ಹಲವಾರು ಲಾಭಿಗಳನ್ನು ಮಾಡಬೇಕಾಗುತ್ತದೆ. ಆದರೆ, ನಮ್ಮಂತವರನ್ನು ಅವರೇ ಗುರುತಿಸಿ ಪ್ರಶಸ್ತಿಗಳನ್ನು ಕೊಡುವುದು ಅಭಿಮಾನವನ್ನು ಹೆಚ್ಚಿಸುತ್ತದೆ ಎಂದರು.ನಾ. ರತ್ನ ಅವರು ಬರೆದ ನಾಟಕಗಳು ಇಂದಿಗೂ ಪ್ರಸ್ತುತವಾಗಿದೆ. ಅವರು ಇಲ್ಲದಿದ್ದರೆ ನಾವು ಅಸಂಗತ ನಾಟಕಗಳನ್ನು ಕೇಳಲು ಹಾಗೂ ನೋಡಲು ಆಗುತ್ತಿರಲಿಲ್ಲ. ಕೇವಲ ಪಾಶ್ಚತ್ಯ ಮಾಧ್ಯಮಕ್ಕೆ ಸೀಮಿತವಾದ ಅಸಂಗತವಾದ ನಾಟಕಗಳನ್ನು ಎಲ್ಲರೂ ನೋಡುವ ಹಾಗೂ ಓದುವ ಹಾಗೆ ಮಾಡಿದ್ದು ನಾ ರತ್ನ ಅವರು. ಅವರ ಗೋಡೆ ಬೇಕೆ ಗೋಡೆ ನಾಟಕ ಇಂದಿನ ಸಮಾಜಕ್ಕೆ ಹತ್ತಿರವಾದ ನಾಟಕವಾಗಿದೆ ಎಂದರು ಅವರು ತಿಳಿಸಿದರು.ಬೆಲ್ಲಿ ಧ್ಯಾನ ಮಾಸ್ಟರ್ ತರ್ನೀವ್, ರಂಗರತ್ನ ಸಂಸ್ಥೆಯ ಎನ್.ಎಸ್. ಆನಂದ್, ಅಜಿತ್ ರತ್ನ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ