ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಹಾಗೂ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದ ಪ್ರಾಧ್ಯಾಪಕ ಡಾ. ಸತ್ಯನಾರಾಯಣ ಭಟ್ ಅವರಿಗೆ ಪ್ರತಿಷ್ಠಿತ ಆಯುರ್ವೇದ ವಿಶ್ವರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕ್ಲಿನಿಕಲ್ ಪರಿಣತಿ, ಸಂಶೋಧನೆ, ಶೈಕ್ಷಣಿಕ ನಾಯಕತ್ವಕ್ಕೆ ಕೊಡುಗೆ
ಉಡುಪಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಜೆ ಆಯುರ್ವೇದಿಕ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ, ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ಹಾಗೂ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದ ಪ್ರಾಧ್ಯಾಪಕ ಡಾ. ಸತ್ಯನಾರಾಯಣ ಭಟ್ ಅವರಿಗೆ ಪ್ರತಿಷ್ಠಿತ ಆಯುರ್ವೇದ ವಿಶ್ವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಜೆ ಆಯುರ್ವೇದಿಕ್ ಫೌಂಡೇಶನ್‌ನ ಸ್ಥಾಪಕ ಡಾ. ಗಿರಿಧರ ಕಜೆ ಅವರು ಈ ಪ್ರಶಸ್ತಿ ಪ್ರದಾನಿಸಿದರು. ಆಯುರ್ವೇದ ಕ್ಷೇತ್ರದಲ್ಲಿ ಡಾ, ಸತ್ಯನಾರಾಯಣ ಅವರು ಸಲ್ಲಿಸಿರುವ 25 ವರ್ಷಕ್ಕೂ ಅಧಿಕ ಸೇವೆ, ಕ್ಲಿನಿಕಲ್ ಪರಿಣತಿ, ಶೈಕ್ಷಣಿಕ ನಾಯಕತ್ವ, ಆಯುರ್ವೇದ ಭೈಷಜ್ಯ ಹಾಗೂ ಔಷಧೀಯ ಸಸ್ಯಗಳ ಕುರಿತ ಸಂಶೋಧನೆ ಮತ್ತು ಆಯುರ್ವೇದ ವಿಜ್ಞಾನದ ಪ್ರಚಾರ-ಪ್ರಸಾರಕ್ಕೆ ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಗಣ್ಯ ಆಯುರ್ವೇದ ಪಂಡಿತರು, ವೈದ್ಯರು ಹಾಗೂ ನೀತಿನಿರ್ಧಾರಕರು ಭಾಗವಹಿಸಿದ್ದರು. ಸಮಾರಂಭದಲ್ಲಿ ಅನೇಕ ಗಣ್ಯ ಅತಿಥಿಗಳು ಹಾಜರಿದ್ದು, ಆಧುನಿಕ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದದ ಹೆಚ್ಚುತ್ತಿರುವ ಜಾಗತಿಕ ಮಹತ್ವವನ್ನು ಪ್ರತಿಬಿಂಬಿಸಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.