ಇತಿಹಾಸ ವಿಷಯವನ್ನು ತುಂಬ ಪ್ರೀತಿಸುತ್ತಿದ್ದವರು ಡಾ. ಶಂಭುಲಿಂಗ ವಾಣಿ

KannadaprabhaNewsNetwork | Published : Jul 1, 2024 1:47 AM

ಸಾರಾಂಶ

ಸೇವಾ ನಿವೃತ್ತಿ ಹೊಂದಿರುವ ಕಲಬುರಗಿ ಸರಕಾರಿ ಸ್ವಾಯತ್ತ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶಂಭುಲಿಂಗ ವಾಣಿಯವರಿಗೆ ಬೀಳಕೊಡುವ ಸಮಾರಂಭ ಕಾಲೇಜಿನ ಇತಿಹಾಸ ವಿಭಾಗದಲ್ಲ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸೇವಾ ನಿವೃತ್ತಿ ಹೊಂದಿರುವ ಕಲಬುರಗಿ ಸರಕಾರಿ ಸ್ವಾಯತ್ತ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶಂಭುಲಿಂಗ ವಾಣಿಯವರಿಗೆ ಬೀಳಕೊಡುವ ಸಮಾರಂಭ ಕಾಲೇಜಿನ ಇತಿಹಾಸ ವಿಭಾಗದಲ್ಲ ಶನಿವಾರ ನಡೆಯಿತು.

3 ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರ ಸಹೋದ್ಯೋಗಿಗಳು, ಮಿತ್ರರು, ಪತ್ರಕರ್ತರು, ಗೆಳೆಯರು ಡಾ. ಶಂಭುಲಿಂಗ ವಾಣಿಯವರ ಇತಿಹಾಸ ವಿಷಯದಲ್ಲಿನ ಆಸಕ್ತಿಯನ್ನು ಕೊಂಡಾಡುತ್ತ ಕಲಬುರಗಿ ಸೇರಿದಂತೆ ಈ ಭಾಗದ ಇತಿಹಾಸವನ್ನ ಹೆಚ್ಚು ಪ್ರಚಾರದ ಮುನ್ನೆಲೆಗೆ ತರುವಲ್ಲಿ ಅವರ ಪರಿಶ್ರಮ ಅಗಾಧ ಎಂದು ಕೊಂಡಾಡಿದರು.

ಸಮಾರಂಭದಲ್ಲಿ ಮಾತನಾಡಿದ ವಸ್ತುಸಂಗ್ರಹಾಲಯ ಮುಖ್ಯಸ್ಥರಾದ ಡಾ. ರಾಜಾರಾಮ್‌, ಪತ್ರಕತ್ರ ಶೇಷಮೂರ್ತಿ ಅವಧಾನಿ, ಕಲಾ ನಿಕಾಯದ ಡೀನ್‌ ಡಾ. ವಿಜಯಕುಮಾರ್‌ ಸಾಲಿಮನಿ, ಅಡಿವೇಶ, ಚೆನ್ನಕ್ಕಿ ನಾಗಪ್ಪ, ಖಾಜಿ ಅತಿಯಾ ಪರ್ವೀನ್‌, ಡಾ. ಶ್ರೀಶೈಲ್‌. ಚಂದ್ರಪ್ಪ, ಡಾ. ಅರುಣ ಕುಮಾರ್‌, ಡಾ. ಶರಣಪ್ಪ ಗುಂಡಗುರ್ತಿ ಸೇರಿದಂತೆ ಅನೇಕರು, ಶಂಭುಲಿಂಗ ವಾಣಿಯವರ ಇತಿಹಾಸ ಪ್ರಜ್ಞೆಯ ಬಗ್ಗೆ ತಾವು ಹತ್ತಿರದಿಂದ ಕಂಡ ಸಂಗತಿಗಳನ್ನು ವಿವರಿಸಿದರು.

ಪತ್ರಕರ್ತ ಶೇಷಮೂರ್ತಿ ಅವಧಾನಿ ಮಾತನಾಡುತ್ತ ಕಲಬುರಗಿಯಲ್ಲಿ ಯಾವದಾದರೂ ಇತಿಹಾಸ ವಿಷಯ ಸುದ್ದಿಗೆ ಗ್ರಾಸವಾಗಿದ್ದರೆ ಪತ್ರಕರ್ತರೆಲ್ಲರಿಗೂ ಡಾ. ವಾಣಿ ಸಂಪನ್ಮೂಲ ವ್ಯಕ್ತಿಗಳಗಿದ್ದವರು. ಬಹಮನಿ ಕೋಟೆ.ಲ್ಲಿ ಶಿವಲಿಂಗ ಮಂದಿರವದೆ ಎಂಬ ವಿಚಾರ ವಿವಾದಕ್ಕೊಳಗಾದಾಗ, ಸುದ್ದಿಯ ಮುನ್ನಲೆಗೆ ಬಂದಾಗ ಡಾ. ವಾಣಿಯವರ ಅಭಿಪ್ರಾಯ ತುಂಬ ಮುಖ್ಯವಾಗಿತ್ತು ಎನ್ನುತ್ತ ಶಂಭುಲಿಂಗ ಅವರ ಸತತ ಪರಿಶ್ರಮದಿಂದ ಕಲಬುರಗಿ ಇಂದು ಇತಿಹಾಸದ ವಿಚಾರದಲ್ಲಿ ಮುನ್ನೆಲೆಯಲ್ಲಿದೆ ಎಂದರು.

ನಂತರ ಸಹೋದ್ಯೋಗಿಗಳೆಲ್ಲರೂ ಸೇರಿಕೊಂಡು ಡಾ. ಶಂಭುಲಿಂಗ ವಾಣಿ ದಂಪತಿಗಳಿಗೆ ಶರಣಬಸವೇಶ್ವರರ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿ ಹರಸಿದರು. ನಿವೃತ್ತಿಯ ನಂತರ ಇನ್ನು ಹೆಚ್ಚು ಮುಕ್ತವಾಗಿ ಇತಿಹಾಸದ ಕೆಲಸಗಳನ್ನು ಮಾಡುವಂತೆ ಹರಸಿದರು.

ತಮಗೆ ಸಹೋಯ್ದೋಗಿಗಳು, ವಿದ್ಯಾರ್ಥಿಗಳು ಸೇರಿ ನೀಡಿರುವ ಪ್ರೀತಿಯ ಬೀಳ್ಕೊಡುಡೆಗೆ ಸ್ಪಂದಿಸಿ ಮಾತನಾಡಿದ ಡಾ. ವಾಣಿ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬಂತೆ ಇತಿಹಾಸ ಸದಾ ನೆನಪು ಮಾಡಿಕೊಳ್ಳಲೇ ಬೇಕು ಎಂದರು. ವಿದ್ಯಾರ್ಥಿಗಳು ಹಲವರು ಡಾ. ವಾಣಿಯವರೊಂದಿಗೆ ತಾವು ಕಳೆದ ಅಧ್ಯಯನದ ಸಮಯದ ಬಗ್ಗೆ ವಿವರಿಸಿ ಭಾವುಕರಾದರು. ಕಾಂಗ್ರೆಸ್‌ ಮುಖಂಡರು, ಡಾ. ವಾಣಿಯವರ ಶಾಲಾ ಗೆಳೆಯರಾದ ಹಣಮಂತರಾವ ಭೂಸನೂರ್‌ ಸೇರಿದಂತೆ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Share this article