ಸರಿಯಲ್ಲ- ನಟಿ ರಮ್ಯಾಗೆ ದರ್ಶನ್ ಅಶ್ಲೀಲ್ ಫ್ಯಾನ್ಸ್‌ಗಳ ಅಶ್ಲೀಲ ಸಂದೇಶ ರವಾನೆ ಪ್ರಕರಣ- ಯಾರ ವಿರುದ್ಧವೂ ಈ ಮಾತು ಸರಿಯಲ್ಲ । ರಮ್ಯಾ ವಿರುದ್ಧ ಬಳಸಿದ ಪದ ಖಂಡನೀಯ
===ರಮ್ಯಾ ದೂರು ನೀಡಿದ್ರೂನಿಲ್ಲದ ಅಶ್ಲೀಲ ಸಂದೇಶಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ಅಶ್ಲೀಲ ಸಂದೇಶಗಳಿಗೆ ಬೇಸತ್ತು ರಮ್ಯಾ ಅವರು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಆ ಬಳಿಕವೂ ದರ್ಶನ್ ಅಭಿಮಾನಿಗಳು ರಮ್ಯಾ ಅವರ ವಿರುದ್ಧ ಅಶ್ಲೀಲ ಕಮೆಂಟ್ ಹಾಕುವುದನ್ನು ಮುಂದುವರೆಸಿದ್ದಾರೆ.==ರಮ್ಯಾ ದೂರು ಕೇಸಲ್ಲಿಎಫ್‌ಐಆರ್ ದಾಖಲುಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ ಸಂಬಂಧ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂದೇಶ ಕಳುಹಿಸಿದವರ ವಿರುದ್ಧ ಸೋಮವಾರ ರಮ್ಯಾ ದೂರು ನೀಡಿದ್ದರು.==ಕನ್ನಡಪ್ರಭ ವಾರ್ತೆ ಬೆಂಗಳೂರು
ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಅವರು ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟ ಬೆನ್ನಲ್ಲೇ ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್‌ಕುಮಾರ್ ರಮ್ಯಾ ಪರ ಹೇಳಿಕೆ ನೀಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಿಕೊಳ್ಳಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ಎಂದು ತಿಳಿಸಿದ್ದಾರೆ.ರಮ್ಯಾ ಅವರು ಈ ಹೇಳಿಕೆಯನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರ ಹೇಳಿಕೆ ಸಂಚಲನ ಉಂಟು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ.==ನಿಮ್ಮ ಕುಟುಂಬದಲ್ಲೇ ಇದೆಲ್ಲಾ ಆದಾಗ ಸುಮ್ಮನೆ ಇದ್ರಲ್ಲ: ಶಿವಣ್ಣ ಸೊಸೆ ಶ್ರೀದೇವಿ ವ್ಯಂಗ್ಯ- ಇನ್‌ಸ್ಟಾದಲ್ಲಿ ಶ್ರೀದೇವಿ ಭೈರಪ್ಪ ಟೀಕೆಕನ್ನಡಪ್ರಭ ವಾರ್ತೆ ಬೆಂಗಳೂರು
ದರ್ಶನ್ ಅಭಿಮಾನಿಗಳ ಅಶ್ಲೀಲ ಸಂದೇಶದ ವಿಚಾರದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿ ನಟಿ ರಮ್ಯಾಗೆ ನೀಡಿದ ಬೆಂಬಲಕ್ಕೆ ಸೊಸೆ(ನಟ ಯುವರಾಜ್‌ಕುಮಾರ್ ಪತ್ನಿ) ಶ್ರೀದೇವಿ ಭೈರಪ್ಪ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮಾರ್ಮಿಕವಾಗಿ ಟೀಕೆ ಮಾಡಿದ್ದಾರೆ. ‘ಎಲ್ಲಾ? ಡ್ರಾಮಾ, ಹಿಪೋಕ್ರೈಟ್ಸ್’ ಎಂದು ಅಸಮಾಧಾನ ಹೊರಹಾಕಿದ್ದಾರೆ.ಯಾರ ಹೆಸರನ್ನೂ ಉಲ್ಲೇಖಿಸದೆ, ‘ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವ ವಿರುದ್ಧ ಮಾತಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೆ ಸುಮ್ಮನೆ ಇದ್ರಲ್ಲ. ಆಗ ನಿದ್ದೆ ಮಾಡ್ತಾ ಇದ್ರ ಎಲ್ಲಾ? ಡ್ರಾಮಾ, ಹಿಪೋಕ್ರೈಟ್ಸ್’ ಎಂದು ಬರೆದಿದ್ದಾರೆ. ಜೊತೆಗೆ ಡಾ.ರಾಜ್‌ಕುಮಾರ್ ಅವರು ಹಾಡಿರುವ, ‘ಹೇಳುವುದು ಒಂದು, ಮಾಡುವುದು ಇನ್ನೊಂದು’ ಎಂಬ ಹಾಡನ್ನು ಹಂಚಿಕೊಂಡಿದ್ದಾರೆ.ಅದರೊಂದಿಗೆ ವಿನಯ್ ರಾಜ್‌ಕುಮಾರ್ ಅವರಿಗೂ ಟೀಕೆ ಮಾಡಿದ್ದು, ಅವರು ರಮ್ಯಾ ಪರ ಮಾಡಿದ್ದ, ‘ಯಾವುದೇ ರೀತಿಯ ಕಿರುಕುಳ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣೋ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಎನ್ನುವ ಪೋಸ್ಟ್ ಅನ್ನು ಹಂಚಿಕೊಂಡು ‘ಎಲ್ಲಿದಪ್ಪ’ ಎಂದು ಬರೆದಿದ್ದಾರೆ. ಈ ಮೂಲಕ ಈ ವಿಚಾರದಲ್ಲಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದ್ದಾರೆ. ಶ್ರೀದೇವಿ ಭೈರಪ್ಪ ಮತ್ತು ಯುವ ರಾಜ್‌ಕುಮಾರ್ ಅವರ ವಿಚ್ಛೇದನ ಪ್ರಕರಣ ಕೋರ್ಟ್‌ನಲ್ಲಿದೆ.