ಮಠವನ್ನು ಶೈಕ್ಷಣಿಕ ವಿವಿಯನ್ನಾಗಿಸಿ ಪರಿವರ್ತಿಸಿದ್ದು ಡಾ. ಸಿದ್ಧಲಿಂಗ ಶ್ರೀಗಳು

KannadaprabhaNewsNetwork |  
Published : Mar 03, 2025, 01:48 AM IST
1ಜಿಡಿಜಿ5 | Kannada Prabha

ಸಾರಾಂಶ

ಶಿಕ್ಷಣ, ಕೃಷಿ, ವೈಚಾರಿಕ ಕ್ರಾಂತಿ, ಮಹಿಳೆಯರ ಸಬಲೀಕರಣ 45 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಗಿನ್ನಿಸ್ ದಾಖಲೆಯಾಗಬಲ್ಲ ಶಿವಾನುಭವ ಮತ್ತು ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿ ಮಠವನ್ನೇ ಶೈಕ್ಷಣಿಕ ವಿವಿಯನ್ನಾಗಿ ಪರಿವರ್ತಿಸಿದ್ದು ಲಿಂ. ಡಾ ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.

ಗದಗ: ಶಿಕ್ಷಣ, ಕೃಷಿ, ವೈಚಾರಿಕ ಕ್ರಾಂತಿ, ಮಹಿಳೆಯರ ಸಬಲೀಕರಣ 45 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಗಿನ್ನಿಸ್ ದಾಖಲೆಯಾಗಬಲ್ಲ ಶಿವಾನುಭವ ಮತ್ತು ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿ ಮಠವನ್ನೇ ಶೈಕ್ಷಣಿಕ ವಿವಿಯನ್ನಾಗಿ ಪರಿವರ್ತಿಸಿದ್ದು ಲಿಂ. ಡಾ ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.

ಅವರು ಗದಗ ಪ್ರೋಬಸ್ ಕ್ಲಬ್‌ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

12ನೇ ಶತಮಾನದ ಬಸವಾದಿ ಶರಣರ ಕ್ರಾಂತಿಯಿಂದ ಮುನ್ನೂರು ವರ್ಷಗಳ ಕಾಲ ಸ್ತಬ್ಧವಾಗಿದ್ದ ವಚನ ಚಳವಳಿಯು 15ನೇ ಶತಮಾನದಲ್ಲಿ ಎಡೆಯೂರು ಸಿದ್ದಲಿಂಗೇಶ್ವರರಿಂದ ಮುಂದುವರಿದ ಸಿದ್ಧಲಿಂಗ ಶ್ರೀಗಳ 19ನೇ ಪೀಠದಿಂದ ನಮ್ಮ ಸಂವಿಧಾನವನ್ನು ನೆನಪಿಸುವ ವಚನ ಚಳವಳಿಯು ನಾಡಿನ ತುಂಬೆಲ್ಲ ಸಾಮಾಜಿಕ ಪರಿವರ್ತನೆಯ ಕ್ರಾಂತಿ ಮಾಡಿದೆ ಎಂದರು. 84 ವರ್ಷದ ಪ್ರೊಬಸ್ ಕ್ಲಬ್‌ದ ಗೌರವಾಧ್ಯಕ್ಷ ಪ್ರೊ.ಕೆ.ಎಚ್. ಬೇಲೂರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಎಂಪಿ. ಜಕ್ಕಲಿ, ಎಂ.ಎಫ್. ಡೋಣಿ, ಜಿ.ವಿ. ಪಾಟೀಲ, ಈಶ್ವರಪ್ಪ ಮಾರನಬಸರಿ, ಬಿ.ಬಿ. ತೋಟಿಗೇರ, ಎ.ಬಿ. ಹಿತ್ತಲಮನಿ, ಬಿ.ಎಸ್. ಸಿದ್ನೆಕೊಪ್ಪ ಮತ್ತು ಸುಶೀಲಾ ಕೋಟಿ ಅವರನ್ನು ಸಮಾರಂಭದಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಪುಣ್ಯಾಶ್ರಮದ ಗಾಯಕ ರಾಹುಲ್ ರಾಠೋಡ ಸಂಗೀತ ಕಾರ್ಯಕ್ರಮ ನೀಡಿದರು. ಅಧ್ಯಕ್ಷ ಕೆ.ಎಚ್. ಗುಗ್ಗರಿ ಅಧ್ಯಕ್ಷತೆ ವಹಿಸಿದ್ದರು. ಮಂಗಲಾ ಯಾನಮಶೆಟ್ಟಿ ಪ್ರಾರ್ಥಿಸಿದರು. ಬಿ.ಎಂ. ಬಿಳೆಯಲಿ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ವಿ. ಯಂಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷ ಎಂ.ಬಿ. ಕರಿಬಿಷ್ಠಿ ಬಸವರಾಜ ಗಣಪ್ಪನವರ ಅತಿಥಿಗಳನ್ನು ಪರಿಚಯಿಸಿದರು. ಎಂ.ಸಿ. ವಗ್ಗಿ ವಂದಿಸಿದರು. ರಾಜಶೇಖರ ಕರಡಿ ನಿರೂಪಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...