ಮುತ್ತಿನಕೊಪ್ಪ ಪ್ರಾಥಮಿಕ ಕೇಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ಸುರೇಶ್‌: ಜಗದೀಶ್‌

KannadaprabhaNewsNetwork |  
Published : Jul 07, 2025, 11:48 PM IST
ನರಸಿಂಹರಾಜಪುರ ತಾಲೂಕು ಸೀನಿಯರ್ ಚೇಂಬರ್‌ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಅಧ್ಯಕ್ಷ ಎಸ್‌.ಎಸ್‌.ಜಗದೀಶ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಸುರೇಶ್‌ ಕಳೆದ 11 ವರ್ಷದಿಂದ ಪ್ರಾಮಾಣಿಕವಾಗಿ ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೀನಿಯರ್‌ ಚೇಂಬರ್‌ ಇಂಟರ್‌ ನ್ಯಾಷನಲ್ ಅಧ್ಯಕ್ಷ ಎಸ್‌.ಎಸ್.ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದರು.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಸುರೇಶ್‌ ಕಳೆದ 11 ವರ್ಷದಿಂದ ಪ್ರಾಮಾಣಿಕವಾಗಿ ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೀನಿಯರ್‌ ಚೇಂಬರ್‌ ಇಂಟರ್‌ ನ್ಯಾಷನಲ್ ಅಧ್ಯಕ್ಷ ಎಸ್‌.ಎಸ್.ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದರು.

ಮುತ್ತಿನಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ಮುತ್ತಿನಕೊಪ್ಪ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸುರೇಶ್‌ ಅವರನ್ನು ಸನ್ಮಾನಿಸಿ ಮಾತನಾಡಿದರು. ಡಾ.ಬಿ.ಸಿ.ರಾಯ್ ಜನ್ಮ ದಿನವಾದ ಜು.1 ರಂದು ಪ್ರತಿ ವರ್ಷ ಇಡೀ ರಾಷ್ಟ್ರದಲ್ಲಿ ವಿಶ್ವ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ. ಡಾ.ಸುರೇಶ್‌ ಮುತ್ತಿನಕೊಪ್ಪದಲ್ಲಿ ಜನಾನುರಾಗಿ ವೈದ್ಯರು. ಕಳೆದ 11 ವರ್ಷಗಳಿಂದ ಕರ್ತವ್ಯಕ್ಕೆ ಲೋಪವಾಗದಂತೆ ಜನರಿಗೆ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಕೊರೋನ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ಮಾಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಡಾ.ಸುರೇಶ್ ಮಾತನಾಡಿ, ಈ ಭಾಗದ ಜನರು ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿ ದ್ದಾರೆ. ಇಲ್ಲಿನ ಜನರಿಗೆ ಪ್ರಾಮಾಣಿಕತೆಯಿಂದ ಚಿಕಿತ್ಸೆ ಮಾಡಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿದ ಸೀನಿಯರ್ ಚೇಂಬರ್‌ ಇಂಟರ್ ನ್ಯಾಷನಲ್ ಪದಾಧಿಕಾರಿಗಳಿಗೆ ಅಭಾರಿಯಾಗಿದ್ದೇನೆ ಎಂದರು.

ತಾಲೂಕು ಉಪಾಧ್ಯಕ್ಷ ದಕ್ಷಿಣಾ ಮೂರ್ತಿ ಮಾತನಾಡಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಉದ್ದೇಶ ಹಾಗೂ ಕಾರ್ಯವ್ಯಾಪ್ತಿ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಸನ್ಮಾನಿತರನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನಾಥ, ನಾಗೇಂದ್ರ ಪ್ರಸಾದ್, ಸೀಮಿಯರ್ ಚೇಂಬರ್‌ ನಿರ್ದೇಶಕರಾದ ಎಂ.ಆರ್‌.ಸುಂದರೇಶ್, ಎಚ್‌.ಎಸ್.ಸಂಜಯ್, ಎಚ್‌.ಟಿ.ಧನಂಜಯ, ಕುಮಾರ ಜಿ. ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ದರ್ಶನಾಥ್, ನಾಗೇಂದ್ರ ಪ್ರಸಾದ್, ಗಾಯಿತ್ರಿ,ಕು.ದಿವ್ಯ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು