ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕಾಮನಚೌಕದಲ್ಲಿ ವಿಷ್ಣು ಸೇನಾ ಸಮಿತಿಯಿಂದ ಆಯೋಜಿಸಿದ್ದ 15 ವರ್ಷದ ಪುಣ್ಯ ಸ್ಮರಣೆ ಹಾಗೂ ವಿಷ್ಣುವರ್ಧನ್ ಅವರ ಭಾವವಿತ್ರವಿದ್ದ 2025ರ ದಿನ ದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.
ನಟ ಡಾ.ವಿಷ್ಣುವರ್ಧನ ಅವರ ಅಭಿನಯ ಜನರ ಮನಸ್ಸಿಗೆ ಹತ್ತಿರವಾಗಿರುತ್ತಿತ್ತು. ಮೇಲುಕೋಟೆ ಕ್ಷೇತ್ರದ ಸುಪುತ್ರರಾಗಿದ್ದರು. ಮೇಲುಕೋಟೆ ಚಲುವನಾರಾಯಣಸ್ವಾಮಿ ಅವರ ಮನೆ ದೇವರು. ಹೀಗಾಗಿ ಅವರು ಮೇಲುಕೋಟೆ ಅಭಿವೃದ್ಧಿ ಆಗಬೇಕು ಎಂದು ತಮ್ಮ ಮನಸ್ಸಿನ ಇಂಗಿತವನ್ನು ಹಾಗಾಗ್ಗೆ ವ್ಯಕ್ತಪಡಿಸುತ್ತಿದ್ದರು. ಕ್ಷೇತ್ರದ ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡುವ ವೇಳೆ ಅವರ ಆಶಯದಂತೆ ಮೇಲುಕೋಟೆಯನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದರು.ಮೈಸೂರಿನ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ಹೆಚ್ಚು ಆಸಕ್ತಿ ವಹಿಸಿದೆ. ಶೀಘ್ರ ಕಾಮಗಾರಿಗಳು ಮುಗಿದು ಆದಷ್ಟು ಬೇಗ ಸ್ಮಾರಕ ಲೋಕಾರ್ಪಣೆಗೊಳ್ಳಲಿ ಎಂದು ಆಶಿಸಿದರು.
ಈ ವೇಳೆ ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ವಿಷ್ಣು ವಿಠಲ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಹಿರೇಮರಳಿ ದೊರೆಸ್ವಾಮಿ, ಟೀ ಅಂಗಡಿ ಮಾಮು, ಮರಿಯಪ್ಪ, ಅಜಯ್, ಶ್ರೀಧರ್, ಧರ್ಮ, ಶಶಿ ಇತರರು ಇದ್ದರು.