ಸಂಶೋಧನೆಯಲ್ಲಿ ಕರಡು ತಿದ್ದುಪಡಿಯೂ ಪ್ರಮುಖ ಘಟ್ಟ: ಡಾ.ಪರಮಶಿವಮೂರ್ತಿ

KannadaprabhaNewsNetwork |  
Published : May 21, 2024, 12:48 AM IST
ಸ | Kannada Prabha

ಸಾರಾಂಶ

ಸಂಶೋಧನಾ ಬರವಣಿಗೆಯಲ್ಲಿ ವ್ಯಾಕರಣ ದೋಷಗಳಾಗದಾಗ ವಿಷಯದ ಅರ್ಥ ವ್ಯತ್ಯಾಸವಾಗುವುದು.

ಹೊಸಪೇಟೆ: ಸಂಶೋಧನೆಯಲ್ಲಿ ಕರಡು ತಿದ್ದುಪಡಿಯೂ ಪ್ರಮುಖ ಘಟ್ಟವಾಗಿದೆ. ವಿದ್ವತ್ ಲೋಕದಲ್ಲಿ ಹೊಸ ವಿಷಯಗಳ ಚಿಂತನೆಯಷ್ಟೇ ಬರವಣಿಗೆ ಮತ್ತು ಅದರ ಪರಿಷ್ಕರಣೆಯೂ ಮುಖ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಸೋಮವಾರ ರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಮತ್ತು ಪ್ರಸಾರಾಂಗದ ಸಹಯೋಗದಲ್ಲಿ ಆಯೋಜಿಸಿದ್ದ ಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.

ಸಂಶೋಧನಾ ಬರವಣಿಗೆಯಲ್ಲಿ ವ್ಯಾಕರಣ ದೋಷಗಳಾಗದಾಗ ವಿಷಯದ ಅರ್ಥ ವ್ಯತ್ಯಾಸವಾಗುವುದು. ಇದರಿಂದ ಪರಿಣಾಮಕಾರಿ ಸಂವಹನ ಸಾಧ್ಯವಾಗುವುದಿಲ್ಲ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದಾಗ ಹೆಚ್ಚಿನ ಮೌಲ್ಯಮಾಪಕರು ಈ ಮಹಾಪ್ರಬಂಧದಲ್ಲಿ ಅಕ್ಷರ ದೋಷಗಳಿವೆ ಎಂದು ವರದಿ ಬರೆಯುತ್ತಾರೆ. ಇತರೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪುಗಳಾದರೆ ಹೋಗಲಿ ಎಂದು ಹೇಳಬಹುದು. ಕನ್ನಡ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯದ ಸಂಶೋಧನೆಗಳಲ್ಲಿ ಅಕ್ಷರ ದೋಷಗಳು, ವಾಕ್ಯದೋಷಗಳಾದರೆ ಅದರಿಂದ ವಿಶ್ವವಿದ್ಯಾಲಯದ ಘನತೆಗೆ ಚ್ಯುತಿ ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಂಶೋಧನಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ತಾವೇ ಕರಡು ತಿದ್ದುಪಡಿ ಮಾಡಿ, ಪುಟವಿನ್ಯಾಸ ಮಾಡಲು ಈ ಕಾರ್ಯಾಗಾರವು ಸಹಕಾರಿಯಾಗಲಿದೆ. ಇದರ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಕಿವಿಮಾತು ಹೇಳಿದರು.

ಪ್ರಸಾರಾಂಗದ ನಿರ್ದೇಶಕ ಡಾ.ಮಾಧವ ಪೆರಾಜೆ ಮಾತನಾಡಿ, ಸಂಶೋಧನಾರ್ಥಿಗಳು ತಮ್ಮ ಸಂಶೋಧನೆಯ ಮಹಾಪ್ರಬಂಧವನ್ನು ಕರಡು ತಿದ್ದುಪಡಿ ಮಾಡಲು ಇತರರಿಗೆ ಹಣಕೊಟ್ಟು ಮಾಡಿಸುವುದರ ಬದಲು ತಾವೇ ಮಾಡುವುದು ಒಳ್ಳೆಯದು. ಇದರಿಂದ ಸಂಶೋಧನ ಪ್ರಬಂಧಗಳ ಗುಣಮಟ್ಟವನ್ನು ಕಾಪಾಡಬಹುದು ಎಂದು ತಿಳಿಸಿದರು.

ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎರ‍್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮೋಹನ್‌ಕುಮಾರ್ ನಿರೂಪಿಸಿದರು. ವಿರೂಪಾಕ್ಷ ಕೆ. ವಂದಿಸಿದರು. ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ